ಕರ್ನಾಟಕ

karnataka

ಮಂಗಳೂರು ಬಾಂಬ್​ ಸ್ಫೋಟ ಪ್ರಕರಣ : ಸ್ಥಳೀಯರ ಕೈವಾಡವಿದೆ ಎಂದ ಶರಣ್ ಪಂಪ್​ವೆಲ್

By

Published : Nov 20, 2022, 8:22 PM IST

ಮಂಗಳೂರು ಬಾಂಬ್​ ಸ್ಫೋಟ ಪ್ರಕರಣ ಸಂಬಂಧ, ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡವಿದೆ. ಇದರ ಹಿಂದೆ ಇರುವ ವ್ಯಕ್ತಿ ಮತ್ತು ಸಂಘಟನೆಗಳ ಬಗ್ಗೆ ತನಿಖೆಯಾಗಬೇಕು ಎಂದು ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಒತ್ತಾಯಿಸಿದ್ದಾರೆ.

locals-involved-in-manglore-bomb-blast-case-says-sharan-pumpwel
ಮಂಗಳೂರು ಬಾಂಬ್​ ಸ್ಪೋಟ ಪ್ರಕರಣ : ಸ್ಥಳೀಯರ ಕೈವಾಡವಿದೆ... ಶರಣ್ ಪಂಪ್ ವೆಲ್

ಮಂಗಳೂರು :ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡವಿದೆ. ಇದರ ಹಿಂದೆ ಇರುವ ವ್ಯಕ್ತಿ ಮತ್ತು ಸಂಘಟನೆಗಳ ಬಗ್ಗೆ ತನಿಖೆಯಾಗಬೇಕು ಎಂದು ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್​ ಖಂಡಿಸುತ್ತದೆ. ಬಾಂಬ್ ಸ್ಫೋಟದ ಮುಖಾಂತರ ಕರಾವಳಿಯ ಜನತೆಯನ್ನು ಬೆದರಿಸುವ ತಂತ್ರ ನಡೆಯುತ್ತಿದೆ. ಕರಾವಳಿಗೆ ಕೊಟ್ಟಂತಹ ಸವಾಲು ಇದು. ಈ ಸವಾಲನ್ನು ಕರಾವಳಿಯ ಜನತೆ ಎದುರಿಸಬೇಕಾಗಿದೆ ಎಂದು ಹೇಳಿದರು.

ಮಂಗಳೂರು ಬಾಂಬ್​ ಸ್ಫೋಟ ಪ್ರಕರಣ : ಸ್ಥಳೀಯರ ಕೈವಾಡವಿದೆ.. ಶರಣ್ ಪಂಪ್ ವೆಲ್

ಈ ಕೃತ್ಯದ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಈ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕಾಗಿದೆ. ಈ ಘಟನೆಯನ್ನು ನೋಡಿದಾಗ ಘಟನೆಯ ಹಿಂದೆ ಸ್ಥಳೀಯರ ಕೈವಾಡವಿಲ್ಲದೆ ಕೃತ್ಯ ನಡೆಯಲು ಸಾಧ್ಯವೆ ಇಲ್ಲ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಬಾಂಬ್ ಸ್ಫೋಟ ಮಾಡುವ ತರಬೇತಿ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಇವತ್ತು ಮಂಗಳೂರಿನಲ್ಲಿ ಸ್ಫೋಟ ನಡೆದಿದೆ. ಹಾಗಾಗಿ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಕೇವಲ ಈ ಘಟನೆಯಲ್ಲಿ ಭಾಗಿಯಾದವರನ್ನು ಮಾತ್ರ ಬಂಧಿಸದೆ ಇದರ ಹಿಂದೆ ಇರುವ ವ್ಯಕ್ತಿಗಳು, ಸಂಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಜೊತೆಗೆ ರಿಕ್ಷಾ ಚಾಲಕ ಪುರುಷೋತ್ತಮ ಅವರಿಗೂ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ :ಮಂಗಳೂರಲ್ಲಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಎನ್​ಐಎ ಎರಡನೇ ಬಾರಿ ಭೇಟಿ, ತೀವ್ರ ಪರಿಶೀಲನೆ

ABOUT THE AUTHOR

...view details