ಮಂಗಳೂರಲ್ಲಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಎನ್ಐಎ ಎರಡನೇ ಬಾರಿ ಭೇಟಿ, ತೀವ್ರ ಪರಿಶೀಲನೆ

ಮಂಗಳೂರಲ್ಲಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಎನ್ಐಎ ಎರಡನೇ ಬಾರಿ ಭೇಟಿ, ತೀವ್ರ ಪರಿಶೀಲನೆ
ಮಂಗಳೂರು ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಘಟನಾ ಸ್ಥಳಕ್ಕೆ ಭೇಟಿ ನೀಡಿ ಎರಡನೇ ಬಾರಿ ಪರಿಶೀಲಿಸಿದೆ.
ಮಂಗಳೂರು: ಮಂಗಳೂರಿನ ಗರೋಡಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣ ಉಗ್ರ ಚಟುವಟಿಕೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತೀವ್ರ ತನಿಖೆ ಕೈಗೊಳ್ಳಲಾಗಿದೆ. ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ನಾಲ್ಕು ಜನರಿದ್ದ ಎನ್ಐಎ ತಂಡ ಘಟನಾ ಸ್ಥಳಕ್ಕೆ ತೆರಳಿ ಸ್ಫೋಟವಾದ ರಿಕ್ಷಾ ಮತ್ತು ಸ್ಥಳವನ್ನು ಪರಿಶೀಲಿಸಿ ತೆರಳಿದ್ದರು.
ಇನ್ನು ಸಂಜೆ ಸುಮಾರು 5.30ಕ್ಕೆ ಸುಮಾರಿಗೆ ಎರಡನೇ ಬಾರಿಗೆ ಘಟನಾ ಸ್ಥಳಕ್ಕೆ ಅಧಿಕಾರಿಗಳು ಬಂದು ತನಿಖೆ ನಡೆಸಿದ್ದಾರೆ. ಸಂಜೆ ಬಂದ ತಂಡದಲ್ಲಿ 6 ಮಂದಿ ಇದ್ದು, ಘಟನಾ ಸ್ಥಳ ಮತ್ತು ರಿಕ್ಷಾವನ್ನು ಪರಿಶೀಲನೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿದ್ದಾರೆ.
ಆಟೋ ರಿಕ್ಷಾದಲ್ಲಿದ್ದ ಶಂಕಿತನ ಬ್ಯಾಗ್ನಲ್ಲಿದ್ದ ಕುಕ್ಕರ್ ಸ್ಫೋಟಗೊಂಡಿದ್ದು, ಇದು ಉಗ್ರ ಕೃತ್ಯ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಆಟೋ ಸ್ಫೋಟ ಪ್ರಕರಣ: ಸ್ಥಳಕ್ಕೆ ಎನ್ಐಎ ಆಗಮನ
