ಕರ್ನಾಟಕ

karnataka

2ಬಿ ರದ್ದು ವಿಚಾರ ಸಂಪೂರ್ಣ ಮೀಸಲಾತಿ ರದ್ದುಗೊಳಿಸುವ ಹುನ್ನಾರ: ಬಿ ಕೆ ಹರಿಪ್ರಸಾದ್

By

Published : Mar 25, 2023, 2:04 PM IST

Updated : Mar 25, 2023, 2:44 PM IST

ರಾಹುಲ್ ಗಾಂಧಿಯವರು ದೇಶದ ಪ್ರಧಾನಿಯನ್ನು ಕಳ್ಳ ಎಂದು ಹೇಳಿಲ್ಲ. ಕಳ್ಳರೆಲ್ಲರೂ ಯಾಕೆ ಆ ಹೆಸರು ಇಟ್ಕೊಂಡಿದ್ದಾರೆ ಎಂದಿದ್ದರು ಎಂದು ಬಿ ಕೆ ಹರಿಪ್ರಸಾದ್ ಹೇಳಿದರು.

ಬಿ ಕೆ ಹರಿಪ್ರಸಾದ್
ಬಿ ಕೆ ಹರಿಪ್ರಸಾದ್

2ಬಿ ರದ್ದು ಬಗ್ಗೆ ಬಿ ಕೆ ಹರಿಪ್ರಸಾದ್ ಪ್ರತಿಕ್ರಿಯೆ

ಮಂಗಳೂರು: 2ಬಿ ರದ್ದು ವಿಚಾರ ಸಂಪೂರ್ಣ ಮೀಸಲಾತಿಯನ್ನು ರದ್ದು ಮಾಡುವ ಹುನ್ನಾರವಾಗಿದೆ ಎಂದು ವಿಧಾನಪರಿಷತ್​ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಇದು ಮೀಸಲಾತಿ ವಿರೋಧ ನೀತಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾತ್ರಧಾರಿಯಾಗಿದ್ದು, ಬಿಜೆಪಿಯ ಸೂತ್ರಧಾರಿಗಳು ಏನು ಹೇಳುತ್ತಾರೋ ಅದನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯವರು ಮೀಸಲಾತಿಯನ್ನು ಸಂಪೂರ್ಣ ರದ್ದುಗೊಳಿಸುವ ಹುನ್ನಾರ ನಡೆಸಲು ಗೊಂದಲ ಸೃಷ್ಟಿಸುತ್ತಿದ್ದಾರೆ. 2015ರಲ್ಲಿ ಆರ್​ಎಸ್​ಎಸ್ ಸರಸಂಚಾಲಕ ಮೋಹನ್ ಭಾಗವತ್, ನಾವು ಅಧಿಕಾರಕ್ಕೆ ಬಂದಲ್ಲಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಬಿಹಾರದಲ್ಲಿ ಹೇಳಿಕೆಯನ್ನು ನೀಡಿದ್ದರು. ಸಂವಿಧಾನದ ಪ್ರಕಾರ ಈ ದೇಶದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲವೆಂದು ಜೋಶಿಯವರು ಹೇಳಿದ್ದರು‌. ಹಾಗಾಗಿ ಈ ಸೂತ್ರಧಾರಿಗಳು ಹೇಳಿದಂತೆ ಪಾತ್ರಧಾರಿ ನಾಯಕರು ಇದನ್ನು ಅನುಷ್ಠಾನ ಮಾಡುತ್ತಿದ್ದಾರೆ ಎಂದರು.

2ಬಿ ಮೀಸಲಾತಿ ರದ್ದತಿ ಅಷ್ಟೊಂದು ಸುಲಭವಲ್ಲ‌. ಇದು ಬ್ಯಾಕ್ ವರ್ಡ್ ಕ್ಲಾಸ್ ಕಮಿಷನ್ ಹೊರತು ಬ್ಯಾಕ್ ವರ್ಡ್ ಕಾಸ್ಟ್ ಕಮಿಷನ್‌ ಅಲ್ಲ‌. ಇದರಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು ಬರುತ್ತಾರೆ. 4% ಕಮಿಷನ್ ತೆಗೆದು ಬೇರೆಯವರಿಗೆ ಕೊಡಲು ಕೆಲವೊಂದು ಕಾನೂನುಗಳಿವೆ. ಆದರೆ ಅದನ್ನು ಮಾಡಿಲ್ಲ. ಇವರು ಕೇವಲ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಬಿಜೆಪಿಯವರು ಮೊದಲು ಮೂಗಿಗೆ ತುಪ್ಪ ಹಚ್ಚುತ್ತಿದ್ದರು. ಈಗ ತಲೆಮೇಲೆಯೇ ಹಚ್ಚಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಮೋದಿ ಸರ್ಕಾರ ಹೇಡಿತನ ಪ್ರದರ್ಶಿಸಿದೆ: ಸಿದ್ದರಾಮಯ್ಯ

ರಾಹುಲ್ ಗಾಂಧಿಯವರು ದೇಶದ ಪ್ರಧಾನಿಯನ್ನು ಕಳ್ಳ ಎಂದು ಹೇಳಿಲ್ಲ. 'ಕಳ್ಳರೆಲ್ಲರೂ ಯಾಕೆ ಆ ಹೆಸರು ಇಟ್ಕೊಂಡಿದ್ದಾರೆ' ಎಂದು ಹೇಳಿದ್ದರು. ಅದನ್ನೇ ನೆಪವನ್ನಾಗಿರಿಸಿ ಕೋಲಾರದಲ್ಲಿ ನೀಡಿರುವ ಹೇಳಿಕೆಗೆ ಗುಜರಾತ್​ನ ಸೂರತ್​ನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಗುಜರಾತ್ ಕೋರ್ಟ್​ಗಳು ಜನತೆಗೆ ಎಷ್ಟು ನ್ಯಾಯ ಕೊಟ್ಟಿದೆ ಎಂಬುದು ಬಿಲ್ಕಿಸ್ ಬಾನು ಪ್ರಕರಣದಲ್ಲಿ ತಿಳಿದು ಬರುತ್ತದೆ. ಮೋರ್ವಿ ಬ್ರಿಡ್ಜ್ ದುರಂತ ಪ್ರಕರಣ, ಕಾರು ಹತ್ತಿಸಿ ನಾಲ್ವರು ರೈತರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಜಾಮೀನಿನಲ್ಲಿ ಆರೋಪಿಗಳು ಹೊರ ಬರುತ್ತಾರೆ. ಆದರೆ ರಾಹುಲ್ ಗಾಂಧಿಯವರು ಮಾತ್ರ ಸಂಸತ್ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

2 ವರ್ಷದ ಮೇಲೆ ಶಿಕ್ಷೆಗೆ ಒಳಗಾದರೇ ಸಂಸತ್​ ಸದಸ್ಯತ್ವ ಅನರ್ಹಗೊಳಿಸಲಾಗುತ್ತದೆ. ಹೀಗೆ ಮಾಡಲು ಸಂಸತ್ತಿನಲ್ಲಿ ಒಂದಿಷ್ಟು ನಿಯಮಗಳಿವೆ. ಆದರೇ ಕೇವಲ 24 ಗಂಟೆಯಲ್ಲಿ ಈ ರೀತಿ ಅನರ್ಹಗೊಳಿಸುವುದು ರಾಜಕೀಯ ಉದ್ದೇಶದಿಂದಲೇ ಮಾಡಲಾಗಿದೆ. ಬೇಲ್​ ಮನವಿ ತಿರಸ್ಕರ ಆದಾಗ ಮಾತ್ರ ಈ ರೀತಿ ಮಾಡಬೇಕಾಗುತ್ತದೆ. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ. ಅಲ್ಲದೇ ರಾಹುಲ್​ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸಲು ಆಗದೆ ಇದ್ದುದರಿಂದ ಈ ಕೆಲಸ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆ: ರಾಹುಲ್​ ಸಂಸತ್​ ಸದಸ್ಯತ್ವಕ್ಕೆ ತೂಗುಗತ್ತಿಯೇ?

Last Updated : Mar 25, 2023, 2:44 PM IST

ABOUT THE AUTHOR

...view details