ಕರ್ನಾಟಕ

karnataka

ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಲಿದೆ: ಶಾಸಕ ಹರೀಶ್ ಪೂಂಜ

By

Published : Mar 2, 2022, 9:14 AM IST

ಈಶ್ವರಪ್ಪ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ ಅಂತಾ ಕಾಂಗ್ರೆಸ್​ನವರು ಅಧಿವೇಶನವನ್ನೇ ಮೊಟಕುಗೊಳಿಸುವ ಪ್ರಯತ್ನ ಮಾಡಿದರು. ಆದರೆ, ರಾಷ್ಟ್ರ ಧ್ವಜದ ಕೆಳಗಡೆ ಭಗವಾಧ್ವಜವನ್ನು ಹಿಂದೂ ಸಮಾಜ ಹಾರಿಸುತ್ತದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದು ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಸಮಾಜದ ಸಂಕಲ್ಪ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಶಾಸಕ ಹರೀಶ್ ಪೂಂಜ
ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ರಾಷ್ಟ್ರ ಧ್ವಜದ ಕೆಳಗಡೆ ಭಗವಾಧ್ವಜವನ್ನು ಹಿಂದೂ ಸಮಾಜ ಹಾರಿಸುತ್ತದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದು ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಸಮಾಜದ ಸಂಕಲ್ಪ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಬೆಳ್ತಂಗಡಿಯಲ್ಲಿ ಸೋಮವಾರ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನದ ರಕ್ಷಣೆ ಮಾಡಬೇಕು ಎಂಬ ಸಂಕಲ್ಪವನ್ನು ಇಟ್ಟುಕೊಂಡಿರುವ ಪಕ್ಷವೊಂದಿದ್ದರೆ ಅದು ಭಾರತೀಯ ಜನತಾ ಪಾರ್ಟಿ. ಅಂಬೇಡ್ಕರ್ ಅವರ ಹೆಸರನ್ನು ಹೇಳಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್, ಅವರಿಗೆ ಪೂರಕವಾಗಿ ಯೋಚನೆಗಳನ್ನು ಮಾಡದೇ ಅವರ ವಿರುದ್ಧ ಷಡ್ಯಂತ್ರ ರೂಪಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ರಾಷ್ಟಧ್ವಜ ಹಾಗೂ ಬಿಜೆಪಿ ಬಗ್ಗೆ ಕೈತೋರಿಸಿ ಮಾತನಾಡುವ ನೈತಿಕತೆ ಇಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿದರು.

ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜ

ಹಿರಿಯರಾದ ಈಶ್ವರಪ್ಪನವರು ಕೆಂಪುಕೋಟೆಯಲ್ಲಿ ಭಗವಾದ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್​ನವರು ಅಧಿವೇಶನವನ್ನೇ ಮೊಟಕುಗೊಳಿಸುವ ಪ್ರಯತ್ನ ಮಾಡಿದರು. ಆದರೆ, ಈ ಮೂಲಕ ನಾನು ಬೆಳ್ತಂಗಡಿ ಶಾಸಕನಾಗಿ ಮತ್ತೊಮ್ಮೆ ಹೇಳ ಬಯಸುತ್ತೇನೆ, ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರುತ್ತದೆ. ರಾಷ್ಟ್ರ ಧ್ವಜದ ಕೆಳಗಡೆ ಭಗವಾಧ್ವಜವನ್ನು ಹಿಂದೂ ಸಮಾಜ ಹಾರಿಸುತ್ತದೆ, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದು ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಸಮಾಜದ ಸಂಕಲ್ಪ ಎಂದರು.

ಕಾಂಗ್ರೆಸ್ ನಾಯಕರುಗಳಾದ ಡಿಕೆಶಿ ಮತ್ತು ಸಿದ್ದರಾಮಯ್ಯಗೆ ನನ್ನ ಪ್ರಶ್ನೆ ಎಂದರೆ, ಭಾರತೀಯ ಜನತಾ ಪಾರ್ಟಿ ಹಿಜಾಬ್ ವಿರುದ್ಧವೇ ಸಮವಸ್ತ್ರ ಸಂಹಿತೆ ಜಾರಿ ಆಗಬೇಕು ಎಂಬ ಎದೆಗಾರಿಕೆ ತೋರಿಸಿ, ಯಾವುದೇ ಸಮುದಾಯಕ್ಕೆ ಬೇಸರ ಆಗುತ್ತದೆ ಎಂದು ಚಿಂತಿಸದೇ ಎಲ್ಲ ಮಕ್ಕಳು ಸರಿ ಸಮಾನವಾಗಿರಬೇಕು ಎಂಬ ನಿಟ್ಟಿನಲ್ಲಿ ಹಿಜಾಬ್ ನಿಷೇಧ ಆಗಬೇಕು ಎಂದು ಹೇಳುತ್ತಿದೆ. ಅದೇ ರೀತಿ ನಿಮಗೆ ತಾಕತ್ತಿದ್ದರೆ ನಾವು ಹಿಜಾಬ್ ಪರ ಅಥವಾ ವಿರೋಧವಾಗಿ ಇದ್ದೇವೆ ಎನ್ನುವ ಸ್ಪಷ್ಟ ಹೇಳಿಕೆಯನ್ನು ರಾಜ್ಯದ ಜನತೆಗೆ ನೀಡಬೇಕು ಎಂದರು.

ಶಿವಮೊಗ್ಗದಲ್ಲಿ ಹರ್ಷ ಎಂಬ ಹಿಂದೂ ಕಾರ್ಯಕರ್ತನ ಹತ್ಯೆ ಕಾಂಗ್ರೆಸ್​​​​ನ ಕುಮ್ಮಕ್ಕಿನಿಂದ ಆಗಿದೆ. ಆದರೆ ಹಿಂದೂ ಸಮಾಜದ ರಕ್ಷಣೆಗಾಗಿ ಹರ್ಷನಂತಹ ಸಾವಿರಾರು ಮಂದಿ ಹುಟ್ಟಿಬಂದು ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದು ಖಂಡಿತ ಎಂದರು.

ಇದನ್ನೂ ಓದಿ:ಬಿಂದಾಸ್​ ಆಗಿ ಭಾಂಗ್ರಾ ಡ್ಯಾನ್ಸ್​ ಮಾಡಿದ ಹರ್ಮನ್‌ಪ್ರೀತ್ ಕೌರ್

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ಸಿಗರು ರಸ್ತೆ ಬದಿ ನಿಂತು ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ. ಪ್ರಾಯಶಃ ಇವತ್ತು ಚರ್ಚೆ ಮಾಡಬೇಕಾದ ದೇಗುಲ ವಿಧಾನಸೌಧ, ರೋಡಲ್ಲಿ ನಿಂತು ಚರ್ಚೆಗೆ ಆಹ್ವಾನ ನೀಡುವುದು ನಿಮ್ಮ ತಾಕತ್ತು ಅಲ್ಲ, ತಾಕತ್ತಿದ್ದರೆ ವಿಧಾನಸೌಧದ ಒಳಗಡೆ ಚರ್ಚೆ ಮಾಡುವಂತಹ ಕೆಲಸವನ್ನು ಮಾಡಬೇಕಿತ್ತು. ಅದನ್ನು ಬಿಟ್ಟು ಎಲ್ಲೋ ರಸ್ತೆಯಲ್ಲಿ ನಿಂತು ಚರ್ಚೆಗೆ ಕರೆಯುವುದೇ ಪೌರುಷ ಎಂದು ತಿಳಿದುಕೊಂಡ ಕಾಂಗ್ರೆಸ್ಸಿನ ಭಂಡ ನಿಲುವುಗಳಿಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಗ್ರಾಮಗಳ ಅಭಿವೃದ್ಧಿ ದೃಷ್ಟಿಯಲ್ಲಿ ಗೌರವ ತಂದು ಕೊಟ್ಟ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯನ್ನು ಇಡೀ ವಿಶ್ವವೇ ಗುರುತಿಸುತಿದೆ. ಇದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು ಎಂದರು.

ABOUT THE AUTHOR

...view details