ಕರ್ನಾಟಕ

karnataka

ಹಿರಿಯೂರು: ಸಿಎಂ ಬೆಂಗಾವಲು ವಾಹನ ಪಲ್ಟಿ: ಹಲವರಿಗೆ ಗಾಯ

By

Published : Nov 22, 2022, 5:11 PM IST

Updated : Nov 22, 2022, 5:37 PM IST

ಹಿರಿಯೂರು ಪಟ್ಟಣದಲ್ಲಿ ಸಿಎಂ ಬೆಂಗಾವಲು ವಾಹನವೊಂದು ಪಲ್ಟಿಯಾಗಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ.

cm escort vehicle overturned Chitradurga
cm escort vehicle overturned Chitradurga

ಚಿತ್ರದುರ್ಗ:ಹಿರಿಯೂರು ಪಟ್ಟಣದಲ್ಲಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಪರಿಣಾಮ ಸಿಪಿಐ ರಮಾಕಾಂತ್ ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಾಣಿವಿಲಾಸ ಡ್ಯಾಂನಿಂದ ಹಿರಿಯೂರುಗೆ ಬರುವ ವೇಳೆ ಹಿರಿಯೂರು ತಾಲೂಕು ಕಚೇರಿ ಬಳಿ ಈ ದುರ್ಘಟನೆ ನಡೆದಿದೆ. ಈ ವೇಳೆ, ರಸ್ತೆಯಲ್ಲಿ ತೆರಳುತ್ತಿದ್ದ ಮಸ್ಕಲ್ ಗ್ರಾಮದ ಮಂಜುಳಾ ಮತ್ತು ಪುತ್ರ ಮನೋಜ್ ಸಹ ಗಾಯಗೊಂಡಿದ್ದು, ಅವರನ್ನು ಹಿರಿಯೂರು ಆಸ್ಪತ್ರೆ ಕರೆದೊಯ್ಯಲಾಗಿದೆ.

ಇನ್ನು ಗಾಯಾಳುಗಳ ಬಗ್ಗೆ ಸಿಎಂ ಮತ್ತು ಸಚಿವರು ನಿರ್ಲಕ್ಷ ತೋರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಹಿರಿಯೂರಲ್ಲಿ ಪ್ರತಿಭಟನೆ ನಡೆಸಿದರು. ಗಾಯಾಳುಗಳನ್ನು ಭೇಟಿ ಮಾಡಿ ವಿಚಾರಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಸದಸ್ಯ ಸುರೇಶಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ಸಿಎಂ ಬೆಂಗಾವಲು ವಾಹನ ಪಲ್ಟಿ

ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದು ಪಲ್ಟಿ ಆಗಿದ್ದು ಸಿಎಂ ಬೆಂಗಾವಲು ವಾಹನ ಅಲ್ಲ. ಸಿಎಂ ಬೊಮ್ಮಯಿ ಅವರ ಇತರೆ ಭದ್ರತೆಯಲ್ಲಿದ್ದ ವಾಹನ. ಪೊಲೀಸ್ ವಾಹನ ಪಲ್ಟಿ ವೇಳೆ ಪಾದಚಾರಿಗಳಿಬ್ಬರಿಗೆ ಗಾಯವಾಗಿದೆ. ಅಲ್ಲದೇ ಪಲ್ಟಿಯಾದ ವಾಹನದಲ್ಲಿದ್ದ ಪಿಐ ರಮಾಕಾಂತ್, ಪಿಎಸ್​ಐ ಅನಸುಯಾ, ಪಿಸಿಗಳಾದ ರಮೇಶ, ಅರ್ಚಿತಾ, ಚಾಲಕ ಪ್ರವೀಣ್ ಎಂಬ ಸಿಬ್ಬಂದಿ ಸಹ​ ಗಾಯಗೊಂಡಿದ್ದಾರೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪರಿಸರ ರಕ್ಷಣೆ ಜಾಗೃತಿಗೆ ಯೋಧನ ದೇಶ ಸಂಚಾರ; ಅದಕ್ಕಾಗಿ 18 ಸಾವಿರ ಕಿಮೀ ಸೈಕಲ್ ಪಯಣ!

Last Updated : Nov 22, 2022, 5:37 PM IST

ABOUT THE AUTHOR

...view details