ETV Bharat / bharat

ಪರಿಸರ ರಕ್ಷಣೆ ಜಾಗೃತಿಗೆ ಯೋಧನ ದೇಶ ಸಂಚಾರ; ಅದಕ್ಕಾಗಿ 18 ಸಾವಿರ ಕಿಮೀ ಸೈಕಲ್ ಪಯಣ!

author img

By

Published : Nov 22, 2022, 4:21 PM IST

Updated : Nov 22, 2022, 5:43 PM IST

ರಾಹಿಯ ಸೈಕಲ್ ಯಾತ್ರೆ ಎರಡು ಉದ್ದೇಶ ಹೊಂದಿದೆ. ಚಾರ್ ಧಾಮ್‌ಗೆ ಭೇಟಿ ನೀಡುವುದರ ಜೊತೆಗೆ ದೇಶದ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ ಮಾಡುವುದು ಕೂಡ ಅವರ ಪ್ರವಾಸ ಪಟ್ಟಿಯಲ್ಲಿದೆ.

ಪರಿಸರ ರಕ್ಷಣೆ ಜಾಗೃತಿಗೆ ಮಾಜಿ ಯೋಧನ ದೇಶಸಂಚಾರ.. ಸೈಕಲ್ ಸಂಚಾರ
former-army-personnel-on-bicycle-expedition-urging-people-to-stop-using-poly-bags

ಕೋಡರ್ಮಾ (ಜಾರ್ಖಂಡ್): ಸೇನಾಪಡೆಯ ಕೆಲಸ ಬಿಟ್ಟು ಇಲ್ಲೊಬ್ಬ ಯುವಕ ದೇಶಸಂಚಾರ ಆರಂಭಿಸಿದ್ದಾರೆ. ಆದರೆ ಇವರು ದೇಶಸಂಚಾರ ಮಾಡುತ್ತಿರುವುದು ಜಾಲಿ ಸುತ್ತಾಟಕ್ಕಲ್ಲ, ಬದಲಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಲು.

ಬುಲಂದ್ ಶಹರ್ ನಿವಾಸಿ ಚಂಕಿ ರಾಹಿ ಎಂಬುವರು ಸೇನಾಪಡೆಯಲ್ಲಿದ್ದ ತಮ್ಮ ಕೆಲಸ ಬಿಟ್ಟು, ಒಂದು ಸಲ ಮಾತ್ರ ಬಳಸಿ ಬಿಸಾಕುವ ಪ್ಲಾಸ್ಟಿಕ್ ಬ್ಯಾಗ್​ಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಪ್ರಕೃತಿಯ ರಕ್ಷಣೆಗಾಗಿ ಸಸಿಗಳನ್ನು ನೆಡುವಂತೆ ಕೂಡ ಅವರು ಜನರಿಗೆ ಮನವಿ ಮಾಡುತ್ತಿದ್ದಾರೆ.

ರಾಹಿಯ ಸೈಕಲ್ ಯಾತ್ರೆ ಎರಡು ಉದ್ದೇಶ ಹೊಂದಿದೆ. ಚಾರ್ ಧಾಮ್‌ಗೆ ಭೇಟಿ ನೀಡುವುದರ ಜೊತೆಗೆ ದೇಶದ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ ಮಾಡುವುದು ಕೂಡ ಅವರ ಪ್ರವಾಸ ಪಟ್ಟಿಯಲ್ಲಿದೆ. ಹೀಗಾಗಿ ದೇವರ ದರ್ಶನ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಸೋಮವಾರ, ಚಂಕಿ ರಾಹಿ ಅವರ ಬೈಸಿಕಲ್ ದಂಡಯಾತ್ರೆ ಜಾರ್ಖಂಡ್‌ನ ಕೊಡೆರ್ಮಾವನ್ನು ತಲುಪಿತು. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು.

ಈ ಸಮಯದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಚೀಲ ಬಳಸುವುದನ್ನು ಬಿಟ್ಟು ಪರಿಸರ ಉಳಿಸಲು ಸಸಿಗಳನ್ನು ನೆಡಬೇಕು ಎಂದು ಹೇಳಿದರು. ಏಕ ಬಳಕೆಯ ಪಾಲಿಥಿನ್ ಬ್ಯಾಗ್‌ಗಳ ಮೇಲೆ ಸರ್ಕಾರ ನಿಷೇಧ ಹೇರಿದೆ, ಆದರೆ, ಜನರು ನಿಷೇಧವನ್ನು ಜಾರಿಗೆ ತರಲು ಮುಂದಾದಾಗ ಮಾತ್ರ ಅಭಿಯಾನ ಯಶಸ್ವಿಯಾಗುತ್ತದೆ ಎಂದು ರಾಹಿ ಹೇಳಿದರು.

ಈ ವರ್ಷ ಸೆಪ್ಟೆಂಬರ್ 12 ರಂದು ಅವರ ಬೈಸಿಕಲ್ ದಂಡಯಾತ್ರೆ ಪ್ರಾರಂಭವಾದಾಗ ಇಲ್ಲಿಯವರೆಗೆ ಅವರು 4,000 ಕಿಲೋಮೀಟರ್ ದೂರ ಕ್ರಮಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಉಳಿದ 14,000 ಕಿಲೋಮೀಟರ್ ಕ್ರಮಿಸುವ ಮತ್ತು 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಜಾರ್ಖಂಡ್‌ನ ಕೋಡರ್ಮಾಗೆ ಬಂದಿರುವ ಅವರು ದಿಯೋಘರ್ ಜಿಲ್ಲೆಯ ಬೈದ್ಯನಾಥ ಧಾಮಕ್ಕೆ ಭೇಟಿ ನೀಡಲಿದ್ದಾರೆ. ಬೈದ್ಯನಾಥ ಧಾಮವು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ರಾಜಧಾನಿ ಪ್ರವೇಶಿಸುವ ಮಾರ್ಗಗಳಲ್ಲಿ ಟ್ರಾಫಿಕ್ ಹೆಚ್ಚಳ: ವಿಶೇಷ ಸಂಚಾರ ಆಯುಕ್ತ ಸಲೀಂ

Last Updated : Nov 22, 2022, 5:43 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.