ಕರ್ನಾಟಕ

karnataka

ಮುತ್ತೋಡಿಯಲ್ಲಿ ಹುಲಿ ದರ್ಶನ: ಸಫಾರಿಗೆ ಹೊರಟ ಪ್ರವಾಸಿಗರ ದಿಲ್‌ ಖುಷ್

By

Published : Sep 26, 2021, 3:44 PM IST

ಸಫಾರಿ ಸಂದರ್ಭದಲ್ಲಿ ಹುಲಿಯನ್ನು ನೇರವಾಗಿ ನೋಡಿದ ಪ್ರವಾಸಿಗರು ಖುಷಿಯಿಂದ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

tiger-found-in-mutthodi-forest
ಮುತ್ತೋಡಿಯಲ್ಲಿ ಹುಲಿ ದರ್ಶನ

ಚಿಕ್ಕಮಗಳೂರು: ಮುತ್ತೋಡಿ ಅಭಯಾರಣ್ಯಕ್ಕೆ ಪ್ರವಾಸಿಗರು ಭೇಟಿ ನೀಡಿದ ವೇಳೆ ಹುಲಿ ದರ್ಶನವಾಗಿದೆ. ಇದರಿಂದ ಪ್ರವಾಸಿಗರು ಸಂತಸಗೊಂಡಿದ್ದಾರೆ.

ಪ್ರವಾಸಿಗರು ಕ್ಲಿಕ್ಕಿಸಿದ ಫೋಟೋ

ಜಿಲ್ಲೆಯ ಮುತ್ತೋಡಿ ಅಭಯಾರಣ್ಯಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ವೇಳೆ ಆನೆ, ಕಾಡುಕೋಣ, ಜಿಂಕೆ, ಚಿರತೆ ಸೇರಿದಂತೆ ಇತರೆ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇಂದು ಅರಣ್ಯದಲ್ಲಿ ಹಳ್ಳ ದಾಟುತ್ತಿದ್ದ ಸಫಾರಿಗರಿಗೆ ಅಪರೂಪಕ್ಕೆ ಹುಲಿಯ ದರ್ಶನವಾಯಿತು.

ಸಫಾರಿ ವೇಳೆ ಹುಲಿಯನ್ನು ಕಂಡಿರುವ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ, ಸಫಾರಿ ಬಂದಿದ್ದಕ್ಕೂ ಸಾರ್ಥಕವಾಯಿತು ಎಂದು ಅರಣ್ಯದಿಂದ ಹೊರ ಬಂದಿದ್ದಾರೆ.

ಹಾಂ..ತೆಗೀರಪ್ಪಾ ಫೋಟೋ..

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ವೀಕೆಂಡ್ ಸಫಾರಿಗೆ ಬರುವ ಪ್ರವಾಸಿಗರು ಕಂಡಕಂಡಲ್ಲಿ ಹುಲಿ ಕಂಡು ಪುಳಕಿತರಾಗಿದ್ದಾರೆ. ಮೈಸೂರು-ಮಾನಂದವಾಡಿ ಹಳೆ ರೋಡ್​ನಲ್ಲಿ ಶನಿವಾರ ಒಂದೇ ದಿನ 6 ಹುಲಿಗಳು ಕಾಣಿಸಿಕೊಂಡಿವೆ.

ಕೊರೊನಾ ನಂತರ ವೈಲ್ಡ್ ಲೈಫ್ ಟೂರಿಸಂ ಚೇತರಿಸಿಕೊಳ್ಳುತ್ತಿದೆ. ಹೆಚ್‌.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರು ಸಫಾರಿಗೆ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ:ಓದಿದ್ದು ಬಿಇ, ಕನ್ನಡದಲ್ಲಿ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ ಹುಬ್ಬಳ್ಳಿ ಯುವಕ

ABOUT THE AUTHOR

...view details