ಕರ್ನಾಟಕ

karnataka

ಸಾರಿಗೆ ನೌಕರರ ಹೋರಾಟದ ಹಿಂದೆ ಯಾವುದೋ ರಾಜಕೀಯ ಪಕ್ಷವಿದೆ: ಶೋಭಾ ಶಂಕೆ

By

Published : Dec 14, 2020, 4:44 PM IST

ಸಾರಿಗೆ ನೌಕರರ ಹೋರಾಟಕ್ಕೆ ಖಾಸಗೀ ವ್ಯಕ್ತಿ ಬಂದು ಸರ್ಕಾರದ ಮುಂದೆ ಬೇಡಿಕೆ ಇಡುತ್ತಾನೆ ಎಂದರೇ ಅದು ಸಂಶಯಕ್ಕೆ ದಾರಿ ಮಾಡಿಕೊಡುತ್ತೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಂಸದೆ ಶೋಭಾ ಕರದ್ಲಾಂಜೆ ಕಿಡಿಕಾರಿದ್ದಾರೆ. ಅಲ್ಲದೆ, ಅವರ ಹಿಂದೆ ಯಾವುದೋ ಒಂದು ರಾಜಕೀಯ ಪಕ್ಷವಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

Shobha Karandlaje
ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು:ರೈತ ಹೋರಾಟಗಾರಕೋಡಿಹಳ್ಳಿ ಚಂದ್ರಶೇಖರ್​ ಸಾರಿಗೆ ಹೋರಾಟಕ್ಕೆ ಬಂದಿದ್ದಾರೆ ಅಂದ್ರೆ ಅವರ ಹಿಂದೆ ಯಾವುದೋ ಒಂದು ರಾಜಕೀಯ ಪಕ್ಷದ ಕೈವಾಡವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಶಂಕೆ ವ್ಯಕ್ತಪಡಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಕಿಡಿ

ಸಾರಿಗೆ ನೌಕರರ ಮುಷ್ಕರ ಕುರಿತು ಮಾತನಾಡಿದ ಇವರು, ಕೋಡಿಹಳ್ಳಿ ಚಂದ್ರಶೇಖರ್ ರೈತರ ಬಿಲ್ ಹಿಡಿದು ಹೋರಾಟ ಮಾಡಿದ್ದರು. ಅದಕ್ಕೆ ಕಾಂಗ್ರೆಸ್​ ಮುಂಖಡರು ಬೆಂಬಲ ಸೂಚಿಸಿದ್ದರು. ಇದೀಗ ಅದೇ ರೈತ ಹೋರಾಟಗಾರ ಸಾರಿಗೆ ಹೋರಾಟಕ್ಕೆ ಬಂದಿದ್ದಾರೆ ಅಂದ್ರೆ ಯಾವುದೋ ಒಂದು ರಾಜಕೀಯ ಪಕ್ಷ ಅವರನ್ನು ನಿಯಂತ್ರಣ ಮಾಡುತ್ತಿದೆಯಾ ಎಂಬ ಸಂಶಯ ಮೂಡುತ್ತಿದೆ ಎಂದರು.

ಸಾರಿಗೆ ನೌಕರರ ಹೋರಾಟಕ್ಕೆ ಖಾಸಗೀ ವ್ಯಕ್ತಿ ಬಂದು ಬೇಡಿಕೆ ಇಡುತ್ತಾನೆ ಎಂದರೇ ಅದು ಸಂಶಯಕ್ಕೆ ದಾರಿ ಮಾಡಿಕೊಡುತ್ತೆ. ಇದರ ಹಿಂದೆ ಕಾಂಗ್ರೆಸ್​ನ ಪಿತೂರಿ ಇದೆಯಾ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಇದಕ್ಕೆ ಸಾರಿಗೆ ನೌಕರರು ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ...ಮುಷ್ಕರದ ಹಿಂದಿದೆಯಾ 'ಕೈ' ಚಳಕ: ಸಾರಿಗೆ ನೌಕರರ ಪರ ಹೋರಾಟ

ABOUT THE AUTHOR

...view details