ಕರ್ನಾಟಕ

karnataka

ಗೋಹತ್ಯೆ ಮಾಡಿದವರ ಬೆಂಬಲಿಸುವುದೇ ಕಾಂಗ್ರೆಸ್​ ಕೆಲಸ: ಸಿ.ಟಿ.ರವಿ

By

Published : Jun 15, 2022, 10:56 PM IST

ಅಕ್ರಮ ಗೋಮಾಂಸ ಅಡ್ಡೆ ಮೇಲೆ ಜೆಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಲ್ಡೋಜರ್ ಹತ್ತಿಸಿದರೆ ನಾನೇ ಹೋಗಿ ಅಡ್ಡ ಮಲಗ್ತೀನಿ ಎಂಬ ಡಿ.ಕೆ.ಶಿವಕುಮಾರ್​ ಹೇಳಿಕೆ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಗೋಹತ್ಯೆ ಮಾಡಿದವರ ಬೆಂಬಲಿಸುವುದೇ ಕಾಂಗ್ರೆಸ್​ ಕೆಲಸ: ಸಿ.ಟಿ. ರವಿ
ಗೋಹತ್ಯೆ ಮಾಡಿದವರ ಬೆಂಬಲಿಸುವುದೇ ಕಾಂಗ್ರೆಸ್​ ಕೆಲಸ: ಸಿ.ಟಿ. ರವಿ

ಚಿಕ್ಕಮಗಳೂರು:ಭ್ರಷ್ಟಾಚಾರಿಗಳು, ಮತಾಂತರಿಗಳು, ಅಕ್ರಮ ಗೋಹತ್ಯೆ ಮಾಡುವವರ ಪರ ನಿಲ್ಲುವುದೇ ಕಾಂಗ್ರೆಸ್​ ನೀತಿಯಾಗಿದೆ. ಇದೇ ನಮ್ಮ ನೀತಿ ಅನ್ನೋದನ್ನು ಕಾಂಗ್ರೆಸ್ ಸಾಬೀತುಪಡಿಸಲಿ. ಆ ಬಳಿಕ ಬುಲ್ಡೋಜರ್ ಎದುರುಗಡೆ ಬಂದು ಡಿ.ಕೆ.ಶಿವಕುಮಾರ್​ ನಿಂತುಕೊಳ್ಳಲಿ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದರು.

ಗೋಹತ್ಯೆ ಮಾಡಿದವರ ಬೆಂಬಲಿಸುವುದೇ ಕಾಂಗ್ರೆಸ್​ ಕೆಲಸ: ಸಿ.ಟಿ.ರವಿ

ನಗರಸಭೆಯಿಂದ ಅಕ್ರಮ ಗೋಮಾಂಸ ಅಡ್ಡೆ ಮೇಲೆ ಜೆಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಲ್ಡೋಜರ್ ಹತ್ತಿಸಿದರೆ ನಾನೇ ಹೋಗಿ ಅಡ್ಡ ಮಲಗ್ತೀನಿ ಎಂಬ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಕಾಂಗ್ರೆಸ್ ಅಕ್ರಮ ಗೋಹತ್ಯೆ ಪರವಾಗಿದೆ. ಅವರು ಗೋಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳಲಿ. ಕಾನೂನು ತನ್ನ ಕೆಲಸವನ್ನು ಮಾಡುತ್ತೆ ಎಂದರು.

ಯಾರು ಕಾನೂನು ಪಾಲಿಸುತ್ತಾರೋ ಅವರಿಗೆ ಕಾನೂನು ಪಾಠ. ಅನಾಗರಿಕರಂತೆ ವರ್ತಿಸುವವರನ್ನು, ಕಾನೂನು ಕೈಗೆತ್ತಿಕೊಳ್ಳುವವರನ್ನು, ಅವರದ್ದೇ ರೀತಿಯಲ್ಲಿ ಪಾಠ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ವಾಯುವ್ಯ ಪದವೀಧರ ಕ್ಷೇತ್ರ: 2ನೇ ಬಾರಿಗೆ ಭರ್ಜರಿ ಗೆಲುವು ಕಂಡ ಹನುಮಂತ ನಿರಾಣಿ

ABOUT THE AUTHOR

...view details