ETV Bharat / state

ಹಣಮಂತ ನಿರಾಣಿಗೆ ಸತತ ಎರಡನೇ ಬಾರಿ ಜಯ: 34 ಸಾವಿರ ಮತಗಳ ಅಂತರದಿಂದ ಕೈ ಅಭ್ಯರ್ಥಿಗೆ ಹೀನಾಯ ಸೋಲು

author img

By

Published : Jun 15, 2022, 10:20 PM IST

Updated : Jun 16, 2022, 8:01 AM IST

ವಾಯುವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಎರಡನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಎರಡನೇ ಬಾರಿಗೆ ಭರ್ಜರಿ ಗೆಲುವು ಕಂಡ ಹನುಮಂತ ನಿರಾಣಿ
ಎರಡನೇ ಬಾರಿಗೆ ಭರ್ಜರಿ ಗೆಲುವು ಕಂಡ ಹನುಮಂತ ನಿರಾಣಿ

ಬೆಳಗಾವಿ: ವಾಯುವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಎರಡನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. 34,693 ಮತಗಳ ಅಂತರದಿಂದ ನಿರಾಣಿ ಅಮೋಘ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ್ ಹೀನಾಯ ಸೋಲನುಭವಿಸಿದ್ದಾರೆ.

ಹಣಮಂತ ನಿರಾಣಿ ಒಟ್ಟು 44,815 ಮತ ಪಡೆದರೆ, ಸುನೀಲ್ ಸಂಕ್ ಕೇವಲ 10,122 ಮತ ಪಡೆದರು. ಈ ಮೂಲಕ ಭಾರೀ ಅಂತರರಿಂದ ನಿರಾಣಿ ಸತತ ಎರಡನೇ ಭಾರಿ ಜಯಭೇರಿ ಬಾರಿಸಿದರು. ಇನ್ನು ಒಟ್ಟು 9006 ಮತಗಳು ತಿರಸ್ಕೃತಗೊಂಡಿವೆ. ಆರಂಭದಿಂದಲೂ ನಿರಾಣಿ ಮುನ್ನೆಡೆ ಸಾಧಿಸಿದ್ದರು. ಮತ ಎಣಿಕೆ ವಿಳಂಬವಾದ ಹಿನ್ನೆಲೆಯಲ್ಲಿ ಫಲಿತಾಂಶ ತಡರಾತ್ರಿ ಪ್ರಕಟಗೊಂಡಿತು.

(ಇದನ್ನೂ ಓದಿ: ಮ್ಯಾಜಿಕ್ ಮಾಡಿದ ಮೀಸೆ ಮಾವ : ಅರುಣ್​ ಶಹಾಪುರ ಗೆಲುವಿನ ಓಟಕ್ಕೆ ಬ್ರೇಕ್)

ವಿಧಾನ ಪರಿಷತ್​ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ವಾಯುವ್ಯ ಪದವೀಧರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಕೈ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಇನ್ನು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮತ ಎಣಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

(ಇದನ್ನೂ ಓದಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ; ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಹುಕ್ಕೇರಿ ಗೆಲುವು)

Last Updated : Jun 16, 2022, 8:01 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.