ಕರ್ನಾಟಕ

karnataka

ನೇಷನ್ ಫಸ್ಟ್ ಎಂಬ ತತ್ವದಡಿ ಯಾರು ಬೇಕಾದರೂ ನಮ್ಮ ಜೊತೆ ಬರಬಹುದು: ಸಿ.ಟಿ.ರವಿ

By

Published : Jul 17, 2023, 7:21 AM IST

Updated : Jul 17, 2023, 8:59 AM IST

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿಪಕ್ಷಗಳ ಸಭೆ, ಜೆಡಿಎಸ್‌ ಜೊತೆಗೆ ಮೈತ್ರಿ ವಿಚಾರಗಳ ಕುರಿತು ಸಿ.ಟಿ.ರವಿ ಮಾತನಾಡಿದ್ದಾರೆ.

former-mla-ct-ravi-slams-opposition-parties-alliance-for-lok-sabha-elections
ನರಿಗಳು ಊಳಿಟ್ಟರೆ ಕಾಡಿನ ರಾಜ ಬೆದರೋದು ಉಂಟಾ..? ಮೋದಿ ಅನಭಿಷಕ್ತ ರಾಜನಿದ್ದಂತೆ : ಮಾಜಿ ಶಾಸಕ ಸಿಟಿ ರವಿ

ಮಾಜಿ ಶಾಸಕ ಸಿ.ಟಿ. ರವಿ ಪ್ರತಿಕ್ರಿಯೆ

ಚಿಕ್ಕಮಗಳೂರು: "ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು ನಾವು. ನೇಷನ್ ಫಸ್ಟ್ ಎಂಬ ತತ್ವದ ಮೇಲೆ ಯಾರು ಬೇಕಾದರೂ ನಮ್ಮ ಜೊತೆ ಬರಬಹುದು. ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ. ರಾಷ್ಟ್ರದ ಹಿತಾಸಕ್ತಿ, ಮೋದಿ ನೇತೃತ್ವದ ರಾಷ್ಟ್ರ ಹಿತ ಹಾಗೂ ಜನಪರ ಕೆಲಸ ಮೆಚ್ಚಿ ಯಾರು ಬೇಕಾದ್ರೂ ಬರಬಹುದು. ಎನ್​​ಡಿಎ ಹಾಗೂ ಬಿಜೆಪಿ ಜೊತೆ ಯಾರು ಬೇಕಾದ್ರೂ ಬರಬಹುದು" ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.

"ಜೆಡಿಎಸ್ ಜೊತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರನ್ನೂ ದೂರ ಇಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರಲ್ಲ" ಎಂದರು.

ಲೋಕಸಭೆ ಚುನಾವಣೆಗೆ ವಿಪಕ್ಷಗಳು ಒಟ್ಟಾಗಿರುವ ಬಗ್ಗೆ ಮಾತನಾಡಿ, "ಕಾಡಿನ ರಾಜ ಸಿಂಹವನ್ನು ಬೆದರಿಸೋಕೆ ಆಗುತ್ತಾ?. ನೂರು ನರಿಗಳು ಊಳಿಟ್ಟರೂ ಕಾಡಿನ ರಾಜ‌ ಸಿಂಹ ಅದರ ದಾರಿಯಲ್ಲಿ ನಡೆಯುತ್ತದೆ. ನೂರು ವಿಪಕ್ಷಗಳಿಗೆ ಭಯ ಇದೆ, ಅದಕ್ಕೆ ಒಂದಾಗಿದ್ದಾರೆ. ಅವರ ಒಗ್ಗಟ್ಟು ದೇಶದ ಹಿತದೃಷ್ಟಿಯಿಂದಲ್ಲ. ಹಾಗಾಗಿ, ಅವರಿಗೆ ಹೆದರುವ ಅಗತ್ಯವಿಲ್ಲ. ಈಗ ನರಿಗಳ ಸಂಖ್ಯೆ ಕಡಿಮೆಯಾಗಿದೆ, ಅಪರೂಪಕ್ಕೆ ಸಿಗುತ್ತದೆ. ಮೊದಲು ಮಲೆನಾಡ ಗದ್ದೆ ಬಯಲಲ್ಲಿ ನರಿಗಳು ಇರ್ತಿದ್ವು" ಎಂದು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಇನ್ನೂ ವಿಪಕ್ಷ ನಾಯಕನ ಆಯ್ಕೆಯಾಗದ ಬಗ್ಗೆ ಪ್ರತಿಕ್ರಿಯಿಸಿ, "ಕಾಂಗ್ರೆಸಿಗರಿಗೆ ಈಗ ಆರಾಮಾಯ್ತಲ್ಲ, ಈಗ ಅವರಿಗೇಕೆ ಭಯ?. ವಿಪಕ್ಷ ನಾಯಕ ಇದ್ದಿದ್ದರೆ ಅರ್ಕಾವತಿ ಪ್ರಕರಣವನ್ನು ಹೊರ ತೆಗೆಯುತ್ತಿದ್ದರು. ಈಗ ಕಾಂಗ್ರೆಸ್ಸಿಗರು ನಿಶ್ಚಿಂತೆಯಾಗಿ ಇರಬಹುದಲ್ವಾ?. ಅರ್ಕಾವತಿ ಖದೀಮರು ಯಾರು ಎಂದರೆ ತಡ ಬಡಿಸಬೇಕಿತ್ತು. ನಾನು ಹತ್ತಾರು ಬಾರಿ ಕೇಳಿದ್ದೇನೆ ಈವರೆಗೂ ಉತ್ತರ ಕೊಟ್ಟಿಲ್ಲ" ಎಂದರು.

"ಅರ್ಕಾವತಿ ಹಗರಣದಲ್ಲಿ ಇದ್ದ ಮೂವರಲ್ಲಿ ಕದ್ದವರು ಯಾರು?, 8,000 ಕೋಟಿ ಲೂಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ. ಉತ್ತರ ಕೊಡುವ ಧೈರ್ಯವೂ ಅವರಿಗಿಲ್ಲ. ಯಾಕಂದ್ರೆ, ಇದ್ದವರು ಅವರೇ ಕದ್ದವರು ಅವರೇ" ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ವಿಪಕ್ಷ ನಾಯಕ ಎಂಬ ಚರ್ಚೆ ಕುರಿತು ಮಾತನಾಡಿ, "ಅವರು ರಾಜಕಾರಣದಲ್ಲಿ ಇವನ್ನೆಲ್ಲ ಸುಮ್ಮನೆ ಬಿಟ್ಟಿರೋದಿಲ್ಲ. ಅದಕ್ಕೆಲ್ಲ ಕಾರಣ ಇರುತ್ತೆ, ಈಗ ಅದರ ವಿಶ್ಲೇಷಣೆ ಬೇಡ" ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿದರು.

ಇದನ್ನೂ ಓದಿ :ಬೆಂಗಳೂರು: ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದು ಹಾಕಿದ ಕನ್ನಡ ಪರ ಸಂಘಟನೆಗಳು

Last Updated : Jul 17, 2023, 8:59 AM IST

ABOUT THE AUTHOR

...view details