ETV Bharat / state

ಬೆಂಗಳೂರು: ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದು ಹಾಕಿದ ಕನ್ನಡ ಪರ ಸಂಘಟನೆಗಳು

author img

By

Published : Jul 16, 2023, 11:04 PM IST

ಫ್ಲೆಕ್ಸ್ ಹಾಗೂ ಬ್ಯಾನರ್​ಗಳಲ್ಲಿ ಕನ್ನಡ ಬಳಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕನ್ನಡ ಪರ ಸಂಘಟನೆಗಳು ಕಾಂಗ್ರೆಸ್​ ನಾಯಕರ ಫ್ಲೆಕ್ಸ್​ಗಳನ್ನು ಹರಿದು ಹಾಕಿವೆ.

kannada-organizations-that-have-torn-the-flex-of-congress-leaders-in-bengaluru
ಬೆಂಗಳೂರು: ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದು ಹಾಕಿದ ಕನ್ನಡ ಪರ ಸಂಘಟನೆಗಳು

ಬೆಂಗಳೂರು: ರಾಷ್ಟ್ರೀಯ ಮಟ್ಟದ ಮಹಾಘಟ್​ ಬಂಧನ್ ನಾಯಕರು ಸೋಮವಾರದಿಂದ ಎರಡು ದಿನ ನಗರದಲ್ಲಿ ಮಹತ್ವದ ಸಭೆ ನಡೆಸಲಿದ್ದು, ಇದಕ್ಕಾಗಿ ಅಳವಡಿಸಿದ್ದ ಸ್ವಾಗತ ಕೋರುವ ಫ್ಲಾಗ್ ಹಾಗೂ ಬ್ಯಾನರ್​ಗಳನ್ನ ಕನ್ನಡ ಪರ ಸಂಘಟನೆಗಳು ಹರಿದು ಹಾಕಿವೆ. ದೇಶದ ವಿವಿಧ ರಾಜ್ಯಗಳ ಬಿಜೆಪಿಯೇತರ ಪಕ್ಷಗಳು ನಾಳಿನ ಸಭೆಯಲ್ಲಿ ಭಾಗಿಯಾಗಲಿದ್ದು, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಕರೆಗೆ ಬೆಂಬಲಿಸಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ವಿವಿಧ ರಾಜ್ಯಗಳ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ನಾಯಕರು ಆಗಮಿಸುತ್ತಿರುವ ಹಿನ್ನೆಲೆ ಇವರಿಗೆ ಸ್ವಾಗತ ಕೋರಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಸಮೀಪದ ಖಾಸಗಿ ಹೋಟೆಲ್ ಮುಂಭಾಗ ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣದಿಂದ ರೇಸ್ ಕೋರ್ಸ್ ರಸ್ತೆ ತಲುಪುವ ಮುಖ್ಯ ರಸ್ತೆಗಳಲ್ಲಿ ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವ ಫ್ಲೆಕ್ಸ್ ಬ್ಯಾನರ್​ಗಳನ್ನು ಅಳವಡಿಸಲಾಗಿದೆ. ನಗರದ ಮೇಕ್ರಿ ವೃತ್ತ ಬಳಿ ಎರಡು ದಿನಗಳ ಹಿಂದೆ ಫ್ಲೆಕ್ಸ್ ಬ್ಯಾನರ್​ಗಳನ್ನ ಹರಿದು ಹಾಕಿದ್ದ ಕನ್ನಡಪರ ಸಂಘಟನೆ ಮುಖಂಡರು ಇಂದು ಸಹ ವಿವಿಧಡೆ ಫ್ಲೆಕ್ಸ್ ಬ್ಯಾನರ್ ಗಳನ್ನ ಹರಿದು ಹಾಕಿದ್ದಾರೆ.

ಫ್ಲೆಕ್ಸ್ ಹರಿಯಲು ಆಂಗ್ಲ ಭಾಷೆ ಬಳಕೆ ಕಾರಣ: ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಿದೆ. ಆದರೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ನಾಯಕರನ್ನು ಸ್ವಾಗತಿಸುವ ಫ್ಲೆಕ್ಸ್ ಹಾಗೂ ಬ್ಯಾನರ್​ಗಳಲ್ಲಿ ಎಲ್ಲಿಯೂ ಕನ್ನಡ ಪದದ ಪ್ರಯೋಗ ಆಗಿಲ್ಲ ಎಂದು ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾವಚಿತ್ರ ಇರುವ ಫ್ಲೆಕ್ಸ್ ಹರಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಫ್ಲೆಕ್ಸ್ ನಲ್ಲಿ ಕೇವಲ ಇಂಗ್ಲಿಷ್​ನಲ್ಲಿ ಹೆಸರು ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ಲೆಕ್ಸ್ ನಲ್ಲಿ ಕನ್ನಡ ಬಳಸದಿದ್ದರೆ ಮಸಿ ಬಳಿಯೋದಾಗಿ ವಿಡಿಯೋದಲ್ಲಿ ಹೇಳಿರುವ ಕನ್ನಡ ಪರ ಸಂಘಟನೆಗಳು, ಸದ್ಯ ಆಂಗ್ಲ ಭಾಷೆಯಲ್ಲಿರುವ ಬ್ಯಾನರ್​ಗಳನ್ನು ಹರಿದಿರುವುದನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹರಿದುಬಿಟ್ಟಿದ್ದಾರೆ. ಈ ಹಿಂದೆಯೂ ಸಾಕಷ್ಟು ಸಾರಿ ರಾಷ್ಟ್ರೀಯ ನಾಯಕರು ಆಗಮಿಸುವ ಸಂದರ್ಭ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಆಂಗ್ಲ ಭಾಷೆಯಲ್ಲಿ ಫ್ಲೆಕ್ಸ್​ ಬ್ಯಾನರ್​ಗಳನ್ನು ಅಳವಡಿಸಿದ್ದವು. ಇದನ್ನು ಹರಿದು ಹಾಕಿ ಕನ್ನಡಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ಸಹ ಅದು ಪುನರಾವರ್ತನೆಯಾಗಿದ್ದು ತಮ್ಮ ಆಕ್ರೋಶ ಹೊರಹಾಕಿರುವ ಸಂಘಟನೆ ನಾಯಕರು ಮುಂಬರುವ ದಿನಗಳಲ್ಲಿ ಕನ್ನಡ ಪದಗಳ ಪ್ರಯೋಗ ಆಗದಿದ್ದರೆ ಬೇರೆಯದೇ ರೀತಿಯ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ನಾಳೆ ನಾಯಕರ ಆಗಮನ: ಸೋಮವಾರ ಬೆಂಗಳೂರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಂಜೆ ವಿಶೇಷ ವಿಮಾನದ ಮೂಲಕ ಆಗಮಿಸುತ್ತಿದ್ದಾರೆ. ಸೋನಿಯಾ, ರಾಹುಲ್ ಜೊತೆಗೆ ಎಚ್ಎಎಲ್​ಗೆ ಮಲ್ಲಿಕಾರ್ಜುನ ಖರ್ಗೆ ಸಹ ಆಗಮಿಸುತ್ತಿದ್ದಾರೆ. ಒಟ್ಟು 24 ಪಕ್ಷಗಳ 49 ಮಂದಿ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ. ಎಚ್ಎಎಲ್​ಗೆ ವಿಶೇಷ ವಿಮಾನದಲ್ಲಿ ಆಗಮಿಸುತ್ತಿರುವ ಉದ್ದವ್ ಠಾಕ್ರೆ, ಹೇಮಂತ್ ಸೊರೇನ್, ಲಾಲೂ ಪ್ರಸಾದ್ ಯಾದವ್, ಶರದ್ ಪವಾರ್ ಹಾಗೂ ನಿತೀಶ್ ಕುಮಾರ್ ನಗರದ ವಿವಿಧ ಹೋಟೆಲ್​ಗಳಲ್ಲಿ ತಂಗಲಿದ್ದಾರೆ. ನಾಳೆ ಬೆಳಗ್ಗೆ 11:00ಗೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಸಭೆಯ ಮಾಹಿತಿ ನೀಡಲಿದ್ದಾರೆ.

ಇದನ್ನೂ ಓದಿ:Opposition partys meeting: ಜು.18 ರಂದು ತಾಜ್ ವೆಸ್ಟೆಂಡ್​​ನಲ್ಲಿ ವಿಪಕ್ಷಗಳ ಸಭೆ, ಸಿದ್ಧತೆ ವೀಕ್ಷಿಸಿದ ಕಾಂಗ್ರೆಸ್​ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.