ಕರ್ನಾಟಕ

karnataka

ಚಿಕ್ಕಮಗಳೂರು: ನದಿಯ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿರುವ ತೋಟಗಳು

By

Published : Sep 17, 2022, 11:53 AM IST

Kn_ckm

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜಪಾವತಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಅಡಿಕೆ ತೋಟ ನದಿಯಲ್ಲಿ ಕೊಚ್ಚಿ ಹೋಗಿದೆ.

ಚಿಕ್ಕಮಗಳೂರು:ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಿವೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗಾರರು ಅಕ್ಷರಶಃ ಕಣ್ಣೀರಲ್ಲಿ ಕೈ ತೊಳಿಯುವಂತೆ ಮಾಡುತ್ತಿದೆ.

ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ಸುಪ್ರಿಮ್​ ಎಂಬುವರಿಗೆ ಸೇರಿದ್ದ ಒಂದು ಎಕರೆಯ ಕಾಫಿ ಮತ್ತು ಅಡಿಕೆ ತೋಟ ಮಳೆ ನೀರಿಗೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಹೇಮಾವತಿಯ ಉಪನದಿ ಜಪಾವತಿಯ ಅಬ್ಬರಕ್ಕೆ ಸುಮಾರು ಒಂದು ಎಕರೆಯಷ್ಟು ತೋಟ ನೀರಿನಲ್ಲಿ ಕೊಚ್ಚಿ ಹೋಗಿದೆ. ಸುಪ್ರಿಮ್ ಅವರ ಅಡಿಕೆ ಹಾಗೂ ಕಾಫಿತೋಟ ನದಿ ಪಾತ್ರದಲ್ಲಿದ್ದು, 2013ರಿಂದಲೂ ಪ್ರತಿವರ್ಷ ಮಳೆಗಾಲ ಬಂದರೆ ತೋಟ ಕೊಚ್ಚಿ ಹೋಗುತ್ತಿದೆ.

ನದಿಯ ಅಬ್ಬರಕ್ಕೆ ಕೊಚ್ಚಿ ಹೋದ ಅಡಿಕೆ ತೋಟ

ಈವರೆಗೆ ಸುಪ್ರಿಮ್ ಅವರು ಸುಮಾರು 3 ರಿಂದ 4 ಎಕರೆಯಷ್ಟು ತೋಟವನ್ನು ಕಳೆದುಕೊಂಡಿದ್ದಾರೆ. ಇನ್ನು, ಪ್ರತಿವರ್ಷ ನದಿಯ ಹರಿವಿನ ಅಗಲ ಹೆಚ್ಚಾಗುತ್ತಿದ್ದಂತೆ ತೋಟವು ಕೊಚ್ಚಿ ಹೋಗುತ್ತಿದೆ. ಈವರೆಗೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಭೇಟಿ ನೀಡಿದ್ದರೂ ಯಾವುದೇ ನಷ್ಟ ಪರಿಹಾರ ನೀಡಿಲ್ಲ ಎಂದು ತೋಟದ ಮಾಲೀಕರು ಸುಪ್ರಿಮ್ ​ತಮ್ಮ ಅಳನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಕೋಲಾರ ಜಿಲ್ಲೆಯಲ್ಲಿ ಈ ಬಾರಿ ದಾಖಲೆಯ ಮಳೆ.. ಈವರೆಗೆ 890 ಮಿ.ಮೀ ದಾಖಲೆ

ABOUT THE AUTHOR

...view details