ಕೋಲಾರ ಜಿಲ್ಲೆಯಲ್ಲಿ ಈ ಬಾರಿ ದಾಖಲೆಯ ಮಳೆ.. ಈವರೆಗೆ 890 ಮಿ.ಮೀ ದಾಖಲೆ

author img

By

Published : Sep 17, 2022, 9:54 AM IST

KN_KLR

ಈ ಬಾರಿ ಕೋಲಾರ ಜಿಲ್ಲೆ 890 ಮಿ.ಮೀ ಮಳೆಯಾಗಿರುವುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಹೇಳಿದ್ದಾರೆ.

ಕೋಲಾರ: ಜಿಲ್ಲೆಯಲ್ಲಿ ಇದುವರೆಗೂ 399 ಮಿ.ಮೀ ಮಳೆಯಾಗುತ್ತಿತ್ತು. ಆದರೇ, ಈ ಬಾರಿ ನಿರೀಕ್ಷೆಗೂ ಮೀರಿ 890 ಮಿ.ಮೀ ಮಳೆಯಾಗಿದೆ ಎಂದು ಕೋಲಾರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ವರ್ಷ ಕೋಲಾರ ಜಿಲ್ಲೆಯಲ್ಲಿ 765 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಅದರಲ್ಲೂ ವಿಶೇಷವಾಗಿ ಫೆಬ್ರವರಿ ತಿಂಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಪರಿಣಾಮ ಈ ವರ್ಷ ಹೆಚ್ಚು ತೇವಾಂಶ ಇರುವುದರಿಂದ ಭಿತ್ತನೆ ಕಾರ್ಯ ಕೂಡ ಕುಂಠಿತವಾಗಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ

ಪ್ರತಿ ವರ್ಷ ಜಿಲ್ಲೆಯಲ್ಲಿ 94 ಸಾವಿರ ಹೆಕ್ಟೇರ್​, ಕೃಷಿ ಬೆಳೆಗಳಾದ ರಾಗಿ ಸೇರಿದಂತೆ ದ್ವಿದಳ ದಾನ್ಯಗಳ ಭಿತ್ತನೆ ಆಗಬೇಕಿತ್ತು ಆದರೆ 74 ಸಾವಿರ ಹೆಕ್ಟೇರು ಭಿತ್ತನೆ ಕಾರ್ಯ ನಡೆದಿದೆ. ಮಳೆ ಮುಂದುವರೆದ ಪರಿಣಾಮ ಉರುಳಿ ಹಾಗೂ ಅಲಸಂದೆ ಮಾತ್ರ ಭಿತ್ತನೆ ಮಾಡಲು ಸಾಧ್ಯವಾಗಿದೆ. ಗೊಬ್ಬರದ ವಿಚಾರಕ್ಕೆ ಬಂದ್ರೆ 39,604 ಮೆಟ್ರಿಕ್ ಟನ್ ನಷ್ಟು ಜಿಲ್ಲೆಗೆ ಗೊಬ್ಬರ ಬೇಡಿಕೆ ಇದ್ದು, ಅದರಂತೆ 30,180 ಮೆಟ್ರಿಕ್ ಟನ್‌ನಷ್ಟು ಗೊಬ್ಬರ ಮಾರಾಟವಾಗಿದೆ. 14 ಸಾವಿರ ಮೆಟ್ರಿಕ್ ಟನ್ ನಷ್ಟು ಯೂರಿಯಾ ಬೇಡಿಕೆಯಿದ್ದು ಅಗತ್ಯತೆಗೆ ತಕ್ಕಂತೆ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ನ್ಯಾನೋ ಯೂರಿಯಾ ಕೂಡ ಬಳಸಲು ರೈತರಿಗೆ ಸೂಚನೆ ನೀಡಲಾಗಿದೆ.

ಇತ್ತೀಚೆಗೆ ಬಿದ್ದ ಮಳೆಯಿಂದ 118 ಹೆಕ್ಟೇರು ನಷ್ಟು ಕೃಷಿ ಬೆಳೆಗಳು ನಾಶವಾಗಿದ್ದು, ಇನ್ನೂ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು. ಇನ್ನು ಜಿಲ್ಲೆಯಲ್ಲಿ ಶೇ.60ರಷ್ಟು ರೈತರು ಈಕೆವೈಸಿ ಮಾಡಲಾಗಿದ್ದು, ಉಳಿದಂತೆ ಎಲ್ಲಾ ರೈತರು ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಈಕೆವೈಸಿ ಮಾಡಿಸುವಂತೆ ಮನವಿಯನ್ನ ಮಾಡಿದ್ರು. ಇನ್ನು, ಪ್ರತಿ ವರ್ಷದಂತೆ ಈ ಬಾರಿಯೂ ಬೆಳೆ ಸಮೀಕ್ಷೆ ನಡೆಸಲಾಗುತ್ತಿದ್ದು, ಆಂಡ್ರಾಯಡ್ ಫೋನ್ ಇರುವ ರೈತರು ತಮ್ಮ ಬೆಳೆ ಸಮೀಕ್ಷೆಯನ್ನ ತಾವೇ ನಡೆಸುವಂತೆ ಮನವಿ ಮಾಡಲಾಗಿದೆ. ಉಳಿದಂತೆ ಕೃಷಿ ಅಧಿಕಾರಿಗಳಿಗೆ ಸ್ಪಂದಿಸುವಂತೆ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಳೆ ನೀರಿನಿಂದ ಅಡಕೆ ತೋಟ‌ ಜಲಾವೃತ: ಮಳೆನೀರಿನ ನಡುವೆ ಅಡಕೆ ಕೊಯ್ಲು ಮಾಡಿದ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.