ಕರ್ನಾಟಕ

karnataka

ಚಿಕ್ಕಬಳ್ಳಾಪುರ: ಪುನೀತ್ ರಾಜ್‌ಕುಮಾರ್ ಪುತ್ಥಳಿ ಸ್ಥಾಪನೆಗೆ ಸ್ಥಳದ ಕೊರತೆ

By

Published : Nov 28, 2021, 7:04 AM IST

ಪುನೀತ್ ರಾಜ್ ಕುಮಾರ್ ಪುತ್ಥಳಿ, puneeth rajkumar statue
ಪುನೀತ್ ರಾಜ್ ಕುಮಾರ್ ಪುತ್ಥಳಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುನೀತ್​ ರಾಜ್‌ಕುಮಾರ್‌ ಪುತ್ಥಳಿ ಸ್ಥಾಪನೆ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಸ್ಥಳದ ಕೊರತೆಯಿಂದಾಗಿ ಮನೆಯೊಂದರಲ್ಲಿ ಅಪ್ಪು ಪುತ್ಥಳಿ ಇಟ್ಟು ಪೂಜೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್​ಕುಮಾರ್ ಮಾಡಿರುವ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿ, ಗಡಿ ಭಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುನೀತ್​ ಪುತ್ಥಳಿ ಸ್ಥಾಪನೆ ಮಾಡಬೇಕೆಂದು ಇದೇ ತಿಂಗಳ 25 ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಸ್ಥಳದ ಕೊರತೆಯಿಂದ ಮನೆಯೊಂದರಲ್ಲಿ ಪುತ್ಥಳಿ ಇಟ್ಟು ಪೂಜೆ ಮಾಡು ಪರಿಸ್ಥಿತಿ ಎದುರಾಗಿದೆ.

ಗೌರಿಬಿದನೂರು ನಗರದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುನೀತ್ ರಾಜ್​ ಕುಮಾರ್​​ ಪುತ್ಥಳಿ ಸ್ಥಾಪನೆಗೆ ಕನ್ನಡ ಪರ ಸಂಘಟನೆಗಳು ಆಹ್ವಾನ ಪತ್ರಿಕೆಗಳನ್ನು ಪ್ರಿಂಟ್ ಮಾಡಿ ತಾಲೂಕಿಗೆ ಹಂಚಿದ್ದವು. ಪುತ್ಥಳಿ ಅನಾವರಣ ಮಾಡುವ ಹುಮ್ಮಸ್ಸಿನಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಪ್ರತಿಷ್ಠಾಪನೆಗೆ ಎಲ್ಲ ತಯಾರಿ ಮಾಡಿಕೊಂಡು ಗೌರಿಬಿದನೂರು ನಗರದ ಡಾ. ಹೆಚ್.ಎನ್. ಕಲಾ ಭವನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಜೊತೆಗೆ, ನಗರದ ಅಭಿಲಾಷ್ ಥಿಯೇಟರ್ ಪಕ್ಕದಲ್ಲಿ ಪುತ್ಥಳಿ ಸ್ಥಾಪನೆಗೆ ಸ್ಥಳ ಗುರುತಿಸಲಾಗಿತ್ತು. ಇನ್ನೇನು ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕು ಅನ್ನುವಷ್ಟರಲ್ಲಿ ಈ ಸ್ಥಳ ನಮ್ಮದು, ಈಗಾಗಲೇ ಸರ್ಕಲ್​ಗೆ ನಾಮಕರಣ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಅಂದಿನಿಂದ ಇಂದಿನವರೆಗೂ ಮನೆಯೊಂದರಲ್ಲಿ ಪುತ್ಥಳಿ ಇಟ್ಟು ಪೂಜೆ ಮಾಡುತ್ತಿದ್ದಾರೆ.


ಇದನ್ನೂ ಓದಿ:Omicron variant: ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

90 ಸಾವಿರ ರೂ. ಖರ್ಚುಮಾಡಿ ಪುನೀತ್ ನೆನಪಿಗಾಗಿ ಕೋಲಾರ ತಾಲೂಕಿನ ಶಿವಾರಪಟ್ಟಣದಲ್ಲಿ ಕಲ್ಲಿನ ಕೆತ್ತನೆ ಮಾಡಿಸಿ, ಸಾರ್ವಜನಿಕರು ನಟ ಸಮಾಜಮುಖಿ ಮಾರ್ಗವನ್ನು ಅನುಸರಿಸಲೆಂದು ನಗರದ ಮಧ್ಯಭಾಗದಲ್ಲಿ ಅವರ ಪುತ್ಥಳಿಯನ್ನು ಅನಾವರಣ ಮಾಡಬೇಕು ಎಂದುಕೊಂಡೆವು. ಆದರೆ ಸೂಕ್ತ ಸ್ಥಳ ಸಿಗದ ಹಿನ್ನೆಲೆಯಲ್ಲಿ ನಿರಾಶೆಯಾಗಿದೆ. ತಾಲೂಕು ಆಡಳಿತ, ಸ್ಥಳೀಯ ಶಾಸಕರು ಈ ಬಗ್ಗೆ ಕ್ರಮವಹಿಸಿ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಅನಾವರಣ ಮಾಡಲು ಸ್ಥಳಾವಕಾಶ ಮಾಡಿಕೊಡಬೇಕೆಂದು ಕನ್ನಡಪರ ಹೋರಾಟಗಾರರು ಹಾಗೂ ಅಪ್ಪು ಅಭಿಮಾನಿಗಳು ಮನವಿ ಮಾಡಿದ್ದಾರೆ.

ABOUT THE AUTHOR

...view details