ಕರ್ನಾಟಕ

karnataka

ಅಜ್ಜನಿಗೆ ಅಂತಿಮ ನಮನ ಸಲ್ಲಿಸಲು ತೆರಳುತ್ತಿದ್ದ ಮೊಮ್ಮಗ ರಸ್ತೆ ಅಪಘಾತದಲ್ಲಿ ಸಾವು

By ETV Bharat Karnataka Team

Published : Nov 27, 2023, 1:10 PM IST

ಮೃತಪಟ್ಟ ಅಜ್ಜನನ್ನು ನೋಡಲು ತೆರಳುತ್ತಿದ್ದಾಗ ಮೊಮ್ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

road accident
ತನ್ನ ಅಜ್ಜನಿಗೆ ಅಂತಿಮ ನಮನ ಸಲ್ಲಿಸಲು ತೆರಳುತ್ತಿದ್ದ ಮೊಮ್ಮಗ ರಸ್ತೆ ಅಪಘಾತದಲ್ಲಿ ಸಾವು

ಚಾಮರಾಜನಗರ:ನಿಧನ ಹೊಂದಿರುವ ತನ್ನ ಅಜ್ಜನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ಮೊಮ್ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಕ್ರಾಸ್ ಹತ್ತಿರ ಭಾನುವಾರ ತಡರಾತ್ರಿ ನಡೆದಿದೆ. ನಿತೀಶ್ ಪೂಜಾರಿ ಮೃತರು.

ನಿತೀಶ್ ಪೂಜಾರಿ ಚಾಮರಾಜನಗರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಉಡುಪಿಯ ಹೆಬ್ರಿ ಮೂಲದ ಇವರು ಸಿಮ್ಸ್​ನಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ 11.30ರ ಸುಮಾರಿಗೆ ಅಜ್ಜ ಅಸುನೀಗಿದ್ದ ಸುದ್ದಿ ತಿಳಿದು ಬಸ್​ಗಳು ಯಾವುದೂ ಇಲ್ಲದಿರುವುದರಿಂದ ಬೈಕ್​ನಲ್ಲೇ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇತ್ತೀಚಿನ ಪ್ರಕರಣ- ರಸ್ತೆ ಅಪಘಾತದಲ್ಲಿ ತಾಯಿ, ಮಗ ಸಾವು:ಕ್ಯಾಂಟರ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಹಾಸನ ನಗರದ ಹೊರವಲಯ ಪೋದರ್ ಶಾಲೆ ಬಳಿ ಇತ್ತೀಚೆಗೆ ನಡೆದಿತ್ತು. ಸ್ಥಳೀಯರು ಘಟನೆಯಿಂದ ಕೋಪಗೊಂಡು ಲಾರಿ ಮೇಲೆ ಕಲ್ಲು ತೂರಾಟ ಮಾಡಿದ್ದರು. ನಗರದ ಡೈರಿ ವೃತ್ತ ಬೆಂಗಳೂರು ರಸ್ತೆಯ ಸಮೀಪದ ರಾಯಲ್ ಅಪೋಲೊ ಶಾಲೆಯ ಬಳಿ ರಸ್ತೆ ಅಪಘಾತ ನಡೆದಿತ್ತು. ಕಮಲಮ್ಮ(71) ಮತ್ತು ಸತೀಶ್(42) ಸಾವನ್ನಪ್ಪಿದ್ದರು.

ಇದನ್ನೂ ಓದಿ:15 ವರ್ಷದಿಂದ ನಾಪತ್ತೆ: ಮಗನ ಕನವರಿಕೆಯಲ್ಲೇ ದಿನ ಕಳೆಯುತ್ತಿರುವ ತಂದೆ

ABOUT THE AUTHOR

...view details