ಕರ್ನಾಟಕ

karnataka

ಗುರಾಯಿಸಿ ಕುಳಿತ ಹುಲಿರಾಯ... ಟೈಗರ್​ ಗತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಗೊತ್ತಾಯ್ತು!

By

Published : Mar 19, 2020, 4:54 PM IST

ಹೆಡಿಯಾಳ ಗೇಮ್ ರಸ್ತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಮಧ್ಯಾಹ್ನ ತೆರಳುತ್ತಿದ್ದ ವೇಳೆ ಹುಲಿಯೊಂದು ಅಡ್ಡ ಬಂದಿದ್ದು, ಒಮ್ಮೆ ಗುರಾಯಿಸಿ ಪಕ್ಕದಲ್ಲೇ ಗಾಂಭೀರ್ಯದಿಂದ ಕುಳಿತುಕೊಂಡಿರುವ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

Bandipur Tiger Protected Area
ಹುಲಿರಾಯ

ಚಾಮರಾಜನಗರ:ಹುಲಿಯೊಂದು ಜನರನ್ನು ಕಂಡು ಗುರಾಯಿಸಿ ಆರಾಮಾಗಿ ಕುಳಿತಿರುವ ದೃಶ್ಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಳದಲ್ಲಿ ಕಂಡುಬಂದಿದೆ.

ಗುರಾಯಿಸಿ ಕುಳಿತ ಹುಲಿರಾಯ... ಟೈಗರ್​ ಗತ್ತು, ಅರಣ್ಯ ಇಲಾಖೆ ಸಿಬ್ಬಂದಿಗೆ ಗೊತ್ತಾಯ್ತು!

ಹೆಡಿಯಾಳ ಗೇಮ್ ರಸ್ತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಮಧ್ಯಾಹ್ನ ತೆರಳುತ್ತಿದ್ದ ವೇಳೆ ಹುಲಿಯೊಂದು ಅಡ್ಡ ಬಂದಿತ್ತು. ಜೀಪಿನಲ್ಲಿ ಕುಳಿತಿದ್ದವರತ್ತ ಒಮ್ಮೆ ಗುರಾಯಿಸಿ ಪಕ್ಕದಲ್ಲೇ ಗಾಂಭೀರ್ಯದಿಂದ ಕುಳಿತುಕೊಂಡ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಹುಲಿಯ ಠೀವಿ ಸಖತ್ ಗತ್ತಿನಿಂದ ಕೂಡಿದೆ.

20 ನಿಮಿಷಕ್ಕೂ ಹೆಚ್ಚು ಸಮಯ ಕುಳಿತಿದ್ದ ಹುಲಿ ಎಲ್ಲೂ ಜಗ್ಗದಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಯೇ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details