ಕರ್ನಾಟಕ

karnataka

ಮೈಸೂರು, ಚಾಮರಾಜನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಪ್ರೀಂಕೋರ್ಟ್ ಜಡ್ಜ್

By

Published : Dec 25, 2021, 6:21 PM IST

special worship in various temples of state from Supreme Court Judge
ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಪ್ರೀಂ ಕೋರ್ಟ್ ಜಡ್ಜ್

ಸುಪ್ರೀಂ ನ್ಯಾಯಾಧೀಶ ಹೃಷಿಕೇಶ್ ರಾಯ್ ಚಾಮರಾಜನಗರಕ್ಕೆ ಭೇಟಿ ನೀಡಿ, ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.

ಚಾಮರಾಜನಗರ: ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಹೃಷಿಕೇಶ್ ರಾಯ್ ತಮ್ಮ ಕುಟುಂಬದೊಂದಿಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದು ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

ಮೊದಲಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ, ಚಾಮರಾಜನಗರ ಹೊರವಲಯದಲ್ಲಿರುವ ಹರಳುಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟು ಅಷ್ಟೋತ್ತರ ಪೂಜೆಯನ್ನು ತಮ್ಮ ಪತ್ನಿಯೊಂದಿಗೆ ನೆರವೇರಿಸಿದ್ದಾರೆ.

ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಪ್ರೀಂ ಕೋರ್ಟ್ ಜಡ್ಜ್

ಸಂಜೆ ಬಿಳಿಗಿರಿರಂಗನ ಬೆಟ್ಟಕ್ಕೆ, ಭಾನುವಾರ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಬಂಡೀಪುರದಲ್ಲಿ ಸಫಾರಿ ನಡೆಸಿ ತಮಿಳುನಾಡಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹರಳುಕೋಟೆ ಆಂಜನೇಯ ದೇವಾಲಯದಲ್ಲಿ ನ್ಯಾಯಮೂರ್ತಿಗಳಿಗೆ ಪೂರ್ಣಕುಂಭ ಸ್ವಾಗತ ಕೋರುವ ಜೊತೆಗೆ ದೇವಾಲಯವನ್ನು ವಿವಿಧ ಹೂಗಳಿಂದ ಶೃಂಗರಿಸಲಾಗಿತ್ತು.

ಇದನ್ನೂ ಓದಿ:ಚರ್ಚೆ ಆಗುತ್ತಿರುವುದು ನಿಜ.. ನಾ ಮುಂದಿನ ಸಿಎಂ ವಿಚಾರವಾಗಿ ಎಲ್ಲೂ ಹೇಳಿಲ್ಲ, ನಾ ಆಕಾಂಕ್ಷಿಯೂ ಅಲ್ಲ.. ನಿರಾಣಿ

ದೇವಾಲಯ ಭೇಟಿ ವೇಳೆ ಶಂಕ, ಜಾಗಟೆ ಬಾರಿಸುವ ದಾಸಯ್ಯಗಳಿಗೆ ನ್ಯಾ.ಹೃಷಿಕೇಶ್ ರಾಯ್ ತಲಾ 100 ರೂ‌. ಕೊಟ್ಟರು.

ABOUT THE AUTHOR

...view details