ಕರ್ನಾಟಕ

karnataka

ಬಕ್ರೀದ್‌ ಪ್ರಯುಕ್ತ ಎಲ್‌ಕೆಜಿ ಮಕ್ಕಳಿಗೆ ಮಸೀದಿ, ದರ್ಗಾ ಪ್ರವಾಸ; ಶಿಕ್ಷಣಾಧಿಕಾರಿಯಿಂದ ನೋಟಿಸ್

By

Published : Jul 14, 2022, 7:04 AM IST

ಚಾಮರಾಜನಗರ ಜಿಲ್ಲೆಯಲ್ಲಿ ಖಾಸಗಿ ಶಾಲೆಯೊಂದು ಬಕ್ರೀದ್​ ಹಬ್ಬದ ಪ್ರಯುಕ್ತ ಮಕ್ಕಳಿಗೆ ದರ್ಗಾ ಮತ್ತು ಮಸೀದಿ ಪ್ರವಾಸ ಕೈಗೊಂಡಿತ್ತು. ಇದಕ್ಕೆ ಹಿಂದೂಪರ ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್‌ ನೀಡಿದ್ದಾರೆ.

Pro Hindu organizations objection over children tour in Chamarajanagar, Hindu organizations objection over children Dargah and Masjid tour, children Dargah and Masjid tour in Chamarajanagar, Chamarajanagar news,  ಚಾಮರಾಜನಗರದಲ್ಲಿ ಮಕ್ಕಳ ಪ್ರವಾಸಕ್ಕೆ ಹಿಂದೂ ಪರ ಸಂಘಟನೆಗಳಿಂದ ಆಕ್ಷೇಪ, ಮಕ್ಕಳ ದರ್ಗಾ ಮತ್ತು ಮಸೀದಿ ಪ್ರವಾಸಕ್ಕೆ ಹಿಂದೂ ಸಂಘಟನೆಗಳಿಂದ ಆಕ್ಷೇಪ, ಚಾಮರಾಜನಗರದ ಮಕ್ಕಳ ದರ್ಗಾ ಮತ್ತು ಮಸೀದಿ ಪ್ರವಾಸ, ಚಾಮರಾಜನಗರ ಸುದ್ದಿ,
ಹಿಂದೂಪರ ಸಂಘಟನೆಗಳ ಆಕ್ಷೇಪ

ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಖಾಸಗಿ ಶಾಲೆಯೊಂದು ಹೊರ ಪ್ರವಾಸದ ಪರಿಚಯ ಹೆಸರಿನಲ್ಲಿ ಎಲ್‍ಕೆಜಿ ಮಕ್ಕಳನ್ನು ದರ್ಗಾ, ಮಸೀದಿಗೆ ಕರೆದೊಯ್ದು ವಿವಾದ ಸೃಷ್ಟಿಸಿದೆ. ಮೈಸೂರು ಜಿಲ್ಲಾ ಬಿಜೆಪಿ ನಾಯಕಿಯ ಒಡೆತನದ ಖಾಸಗಿ ಶಾಲೆ ಇದಾಗಿದ್ದು ಆಡಳಿತ ಮಂಡಳಿ ತಪ್ಪೊಪ್ಪಿಗೆ ನೀಡಿದೆ. ಪ್ರಗತಿಪರ, ಹಿಂದೂಪರ ಸಂಘಟನೆಗಳ ಮುಖಂಡರು ಹಾಗು ನಾಗರಿಕರು ಘಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಭಾರಿ ಮಳೆಗೆ ಜಲಾವೃತಗೊಂಡ ಆಸ್ಪತ್ರೆ.. ಮಕ್ಕಳು ಹಾಗೂ ರೋಗಿಗಳ ರಕ್ಷಿಸಿದ ಪೊಲೀಸರು!

ಬಕ್ರೀದ್ ಹಬ್ಬದ ಪ್ರಯುಕ್ತ ಮಕ್ಕಳನ್ನು ತಾಲೂಕಿನ ತೆರಕಣಾಂಬಿಯಲ್ಲಿರುವ ದರ್ಗಾ ಹಾಗು ಮಸೀದಿಗೆ ಕರೆದುಕೊಂಡು ಹೋಗಲಾಗಿದ್ದು, ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುರಿತು ಫೋಟೋಗಳು ಫೇಸ್‍ಬುಕ್‍ನಲ್ಲಿ ವೈರಲ್‌ ಆದಾಗ ಘಟನೆ ಬೆಳಕಿಗೆ ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಶಾಲೆಗೆ ನೋಟಿಸ್ ನೀಡಿದ್ದು, ಇಲಾಖೆಯ ಅನುಮತಿ ಇಲ್ಲದೆ ಹೊರ ಪ್ರವಾಸಕ್ಕೆ ತೆರಳದಂತೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details