ಕರ್ನಾಟಕ

karnataka

ಬಂಡೀಪುರ: ಕಾದಾಟದಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಹುಲಿ ಪತ್ತೆ

By

Published : Oct 21, 2021, 12:14 PM IST

ಬಂಡೀಪುರ ಪ್ರವಾಸೋದ್ಯಮ ಪ್ರದೇಶದ ಗಂಜಿಕಟ್ಟೆ ಬಳಿ ಸುಮಾರು 7 ರಿಂದ 8 ವರ್ಷದ ಗಾಯಗೊಂಡ ಗಂಡು ಹುಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ನಿಗಾ ವಹಿಸಿದೆ.

ಹುಲಿ
ಹುಲಿ

ಚಾಮರಾಜನಗರ: ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರ ಸಫಾರಿ ಝೋನ್‌​ನಲ್ಲಿ ಗಾಯಗೊಂಡ ಹುಲಿಯೊಂದು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ನಿಗಾ ವಹಿಸಿದೆ.

ಬಂಡೀಪುರ ಪ್ರವಾಸೋದ್ಯಮ ಪ್ರದೇಶದ ಗಂಜಿಕಟ್ಟೆ ಬಳಿ ಸುಮಾರು 7 ರಿಂದ 8 ವರ್ಷದ ಗಾಯಗೊಂಡ ಗಂಡು ಹುಲಿ ಕಾಣಿಸಿಕೊಂಡಿದೆ. ಮತ್ತೊಂದು ಹುಲಿಯ ಜೊತೆ ಕಾದಾಟದಲ್ಲಿ ಗಾಯಗೊಂಡಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಗಾಯಗೊಂಡ ಹುಲಿ ಬೇಟೆಯಾಡಲು ನಿಶ್ಯಕ್ತವಾಗಿದ್ದು, ಹಸಿವಿನಿಂದ ಬಳಲುತ್ತಿದೆ. ಸದರಿ ಹುಲಿಯು ಚೇತರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಹುಲಿ ಪತ್ತೆಗಾಗಿ ಕ್ಯಾಮರಾ ಅಳವಡಿಸಲಾಗಿದ್ದು, ಸಿಬ್ಬಂದಿ ನಿಗಾ ಇಟ್ಟಿದ್ದಾರೆ.

ABOUT THE AUTHOR

...view details