ಕರ್ನಾಟಕ

karnataka

ಸೋಂಕಿತರ ಸಾವಿನ ತಪ್ಪು ಮಾಹಿತಿ ನೀಡುವ ಪ್ರಶ್ನೆಯೆ ಇಲ್ಲ, ಕಾಂಗ್ರೆಸ್ ಭ್ರಮೆಯಲ್ಲಿದೆ: ಸಚಿವ ಸುಧಾಕರ್​

By

Published : Apr 30, 2021, 2:00 PM IST

ಸೋಂಕಿತರ ಸಾವಿನ ತಪ್ಪು ಮಾಹಿತಿ ನೀಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಭ್ರಮೆಯಲ್ಲಿದೆ ಎಂದು ಸಚಿವ ಸುಧಾಕರ್​ ಹೇಳಿದರು.

no question of misinformation about covid death,  no question of misinformation about covid death says minister sudhakar, Bidar news, Bidar corona news, ಸೋಂಕಿತರ ಸಾವಿನ ತಪ್ಪು ಮಾಹಿತಿ ನೀಡುವ ಪ್ರಶ್ನೆಯೆ ಇಲ್ಲ, ಸೋಂಕಿತರ ಸಾವಿನ ತಪ್ಪು ಮಾಹಿತಿ ನೀಡುವ ಪ್ರಶ್ನೆಯೆ ಇಲ್ಲ ಎಂದ ಸಚಿವ ಸುಧಾಕರ್​, ಬೀದರ್​ ಸುದ್ದಿ, ಬೀದರ್​ ಕೊರೊನಾ ಸುದ್ದಿ,
ಸೋಂಕಿತರ ಸಾವಿನ ತಪ್ಪು ಮಾಹಿತಿ ನೀಡುವ ಪ್ರಶ್ನೆಯೆ ಇಲ್ಲ ಎಂದ ಸಚಿವ

ಬೀದರ್:ಸರ್ಕಾರ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯ ಮಾಹಿತಿ ತಪ್ಪು ನೀಡುತ್ತಿದೆ. ಸಾವು ಹೆಚ್ಚಾದ್ರು ಕಮ್ಮಿ ತೋರಿಸಲಾಗ್ತಿದೆ ಎಂಬುದು ಕಾಂಗ್ರೆಸ್​ನವರ ಭ್ರಮೆ ಎಂದು ಆರೋಗ್ಯ ಸಚಿವ ಸುಧಾಕರ್​ ಪ್ರತಿಕ್ರಿಯಿಸಿದ್ದಾರೆ.

ಬೀದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿಜೆಪಿ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಸೋಂಕಿತರ ಸಾವಿನ ಸಂಖ್ಯೆ ಐಸಿಎಂಆರ್​ನಿಂದ ಅಧಿಕೃತ ಪ್ರಕಟವಾಗ್ತಿದೆ. ತಪ್ಪು ಮಾಹಿತಿ ನೀಡೋ ಪ್ರಶ್ನೆ ಬರೋದಿಲ್ಲ. ಅನ್ಯ ಕಾರಣಕ್ಕೆ ಸಾವನ್ನಪ್ಪಿದವರ ಮಾಹಿತಿ ಕೊರೊನಾ ಸೋಂಕಿತರ ಪಟ್ಟಿಗೆ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದರು.

ಸೋಂಕಿತರ ಸಾವಿನ ತಪ್ಪು ಮಾಹಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದ ಸಚಿವ

ರಾಜ್ಯದಲ್ಲಿ ಕೊರೊನಾ ಸೋಂಕಿನ ಚೈನ್ ಕಟ್ ಮಾಡಬೇಕಾಗಿದೆ. ಇದಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕಠಿಣ ಕ್ರಮಗಳನ್ನು ಅನುಸರಿಸಿದ್ದಾರೆ. ಜನರು ಸಹಕಾರ ನೀಡಬೇಕಾಗಿದೆ‌. 14 ದಿನ ಈ ಕಾರ್ಯಾಚರಣೆ ನಡೆಯಲಿದ್ದು, ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಮ್ಮಿಯಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾಳೆಯಿಂದ ರಾಜ್ಯದಲ್ಲಿ 18 ವರ್ಷಕ್ಕೂ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತಿದೆ. ಈಗಾಗಲೇ ನೋಂದಣಿ ಮಾಡದವರು ಮಾಡಿಕೊಳ್ಳಬೇಕು. ವ್ಯಾಕ್ಸಿನ್ ಸರಬರಾಜು ಮಾಡುವ ಎಜೇನ್ಸಿ ರಿಪ್ಲೇ ಮಾಡಿಲ್ಲ. ಹಂತ ಹಂತವಾಗಿ ವ್ಯಾಕ್ಸಿನ್ ಬರಮಾಡಿಕೊಳ್ಳಬೇಕು ಎಂದರು.

ಜಿಲ್ಲೆಗಳಲ್ಲಿ ಕಂಡು ಬಂದಿರುವ ರೆಮ್​ಡಿಸಿವಿರ್ ಚುಚ್ಚುಮದ್ದಿನ ಮಾರಾಟ ದಂಧೆ, ಆಸ್ಪತ್ರೆಗಳಲ್ಲಿ ಬೆಡ್​​ಗಳ ಕೊರತೆ ಹೀಗೆ ಸ್ಥಳೀಯ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ಬೀದರ್ ನಗರಕ್ಕೆ ಬಂದಿರುವುದಾಗಿ ಸುಧಾಕರ್​ ಹೇಳಿದರು.

ಈ ವೇಳೆಯಲ್ಲಿ ಸಚಿವರಾದ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕ ರಹಿಂಖಾನ್ ಸೇರಿದಂತೆ ಗಣ್ಯರು ಜತೆಯಲ್ಲಿದ್ದರು.

ABOUT THE AUTHOR

...view details