ಕರ್ನಾಟಕ

karnataka

ಬೀದರ್ : ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ದರೋಡೆ

By

Published : Aug 9, 2021, 11:51 AM IST

ATM theft Bidar
ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಒಡೆದಿರುವ ದೃಶ್ಯ ()

ಬೀದರ್ ನಗರದಲ್ಲಿ ಎಟಿಎಂ ದರೋಡೆ ನಡೆದಿದ್ದು, ಖದೀಮರು ಗ್ಯಾಸ್ ಕಟ್ಟರ್​ ಬಳಸಿ ವ್ಯವಸ್ಥಿತವಾಗಿ ಕಳ್ಳತನ ಮಾಡಿದ್ದಾರೆ.

ಬೀದರ್ :ಗ್ಯಾಸ್ ಕಟ್ಟರ್ ಬಳಸಿ ಎಟಿಎಂನಲ್ಲಿನ ಹಣ ಕದ್ದೊಯ್ದಿರುವ ಘಟನೆ ಭಾನುವಾರ ರಾತ್ರಿ ನಗರದಲ್ಲಿ ನಡೆದಿದೆ.

ನಗರದ ಗುಂಪಾ ಭಾಗದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಗ್ಯಾಸ್ ಕಟ್ಟರ್ ಬಳಸಿ ವ್ಯವಸ್ಥಿತವಾಗಿ ಎಟಿಎಂ ಒಡೆದು ಹಣ ದೋಚಿದ್ದಾರೆ.

ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಒಡೆದಿರುವ ದೃಶ್ಯ

ಓದಿ : ಬೀದರ್​​ನಲ್ಲಿ 60 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ, ನಾಲ್ವರ ಬಂಧನ

ಎಟಿಎಂನಲ್ಲಿ ಎಷ್ಟು ಹಣವಿತ್ತು, ಕಳ್ಳತನವಾದ ದುಡ್ಡು ಎಷ್ಟು ಎಂಬುದರ ಕುರಿತು ನಿಖರವಾದ ಮಾಹಿತಿ ತಿಳಿದು ಬರಬೇಕಿದೆ. ನಗರದ ಗಾಂಧಿಗಂಜ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details