ಕರ್ನಾಟಕ

karnataka

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಶ್ರೀರಾಮುಲು ಲೇವಡಿ

By

Published : Nov 18, 2022, 7:17 PM IST

minister sriramulu
ಸಚಿವ ಶ್ರೀರಾಮುಲು ()

ಮಾಜಿ ಮುಖ್ಯ ಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುವ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕ ಆಗಿಲ್ಲ ಎಂದು ಲೇವಡಿ ಮಾಡಿದ ಸಾರಿಗೆ ಸಚಿವ ಶ್ರೀರಾಮುಲು.

ಬಳ್ಳಾರಿ:ಬಳ್ಳಾರಿ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮುಲು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುವ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕ ಆಗಿಲ್ಲ. ಚಾಮುಂಡೇಶ್ವರಿಯಲ್ಲಿ ಸೋತ ನಂತರ ಬಾದಾಮಿಯಲ್ಲಿ ಕಷ್ಟಪಟ್ಟು ಗೆದ್ದಿದ್ದ ಅವರು, ಕೈಹಿಡಿದ ಅದೇ ಜನರಿಗೆ ಕೈಕೊಟ್ಟು ಇದೀಗ ಕೋಲಾರದ ಕಡೆ ಮುಖ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಅವರು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಟಾಂಗ್​ ಕೊಟ್ಟ ಸಚಿವ ಶ್ರೀರಾಮುಲು

ನತಂರ ಮಾತನಾಡಿದ ಅವರು ಚಾಮುಂಡೇಶ್ವರಿಯಲ್ಲಿ ಸೋಲು ಕಟ್ಟಿಟ್ಟಬುತ್ತಿ ಎಂದು ತಿಳಿದು ಬಾದಾಮಿಗೆ ಬಂದರು. ಅಲ್ಲಿ ಅಲ್ಪ ಮತಗಳಿಂದ ಗೆದ್ದು, ರಾಜಕೀಯ ಮರುಜನ್ಮ ಪಡೆದರು. ಈಗ ಬಾದಾಮಿಯಲ್ಲೂ ಸೋಲುವ ಭಯದಿಂದ ಬೇರೊಂದು ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ. ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂಬ ಸ್ಪಷ್ಟತೆ ಅವರಿಗೆ ಇನ್ನೂ ದೊರೆತಿಲ್ಲ ಎಂದು ಕಾಣುತ್ತದೆ ಎಂದು ಅವರು ಹೇಳಿದರು.

ಕಳೆದ ಬಾರಿಯಂತೇ ಸಿದ್ದರಾಮಯ್ಯ ವಿರುದ್ಧ ಮುಖಾಮುಖಿ ಸ್ಪರ್ಧೆಗೆ ಇಳಿಯುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ನಿರ್ಧಾರಕ್ಕೆ ಬಂದು ಅರ್ಜಿಸಲ್ಲಿಸಲಿ, ಬಳಿಕ ನನ್ನ ನಿರ್ಧಾರವನ್ನು ತಿಳಿಸುವೆ ಎಂದರು.

ಇನ್ನು ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವೆ. ಪಕ್ಷ ಹೇಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯ ಅವರನ್ನು ದೋಸ್ತ್ ಎಂದು ಕರೆದ ಶ್ರೀರಾಮುಲು ಮುಂದುವರೆದು ಮಾತನಾಡುತ್ತಾ, ನನ್ನ ದೋಸ್ತ್ ಸಿದ್ದರಾಮಯ್ಯ ಹೇಳಿದ್ದಾರೆ, ರಾಜ್ಯ ನಾಯಕ ಎಲ್ಲಿಯಾದರೂ ಸ್ಪರ್ಧೆ ಮಾಡಬಹುದು ಎಂದು. ಆ ಮಾತಿನಂತೆಯೇ ನಾನು ರಾಜ್ಯ ಮಟ್ಟದ ನಾಯಕ. ಹಾಗಾಗಿ ಎಲ್ಲಿಯಾದರೂ ಸ್ಪರ್ಧೆ ಮಾಡ್ತೇನೆ ಎಂದರು.


ಇದನ್ನೂ ಓದಿ:ಮತದಾರರ ಪಟ್ಟಿ ಪರಿಷ್ಕರಣೆ ಕೆಜಿಎಫ್​ ಸೇಡಿನ​, ಕಾಂತಾರದ ಪಂಜುರ್ಲಿಯ ಕಥೆಯಲ್ಲ: ಸಿದ್ದರಾಮಯ್ಯ ಟ್ವೀಟ್​

ABOUT THE AUTHOR

...view details