ಕರ್ನಾಟಕ

karnataka

ಚಿಕ್ಕೋಡಿಯಲ್ಲಿ ಎಂಟು ನವಿಲು ಬೇಟೆಯಾಡಿದ ದುರುಳರು; ಓರ್ವ ಪೊಲೀಸ್ ವಶಕ್ಕೆ

By ETV Bharat Karnataka Team

Published : Jan 13, 2024, 2:11 PM IST

Updated : Jan 13, 2024, 3:34 PM IST

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ 8 ನವಿಲುಗಳನ್ನು ಬೇಟೆಯಾಡಿದ ಪ್ರಕರಣ ನಡೆದಿದೆ.

ನವಿಲು ಬೇಟೆ
ನವಿಲು ಬೇಟೆ

ಮಾಂಸಕ್ಕಾಗಿ ನವಿಲುಗಳ ಬೇಟೆ

ಚಿಕ್ಕೋಡಿ:ಮಾಂಸಕ್ಕಾಗಿ ಎಂಟು ನವಿಲುಗಳನ್ನು ಬೇಟೆಯಾಡಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪ್ರಕರಣದಲ್ಲಿ ಮೂವರು ಭಾಗಿಯಾಗಿದ್ದು, ಸದ್ಯ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ನವಿಲು ಬೇಟೆಯಾಡಿದವರುನ್ನು ಹಿಡಿಯಲು ತೆರಳುತ್ತಿದ್ದಂತೆ, ನದಿ ನೀರಿನಲ್ಲಿ ಈಜಿ ದಡ ಸೇರಿ ಬಳಿಕ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಾಣಿ ಸ್ಥಳಕ್ಕೆ ಬಂದು, ಗ್ರಾಮಸ್ಥರಿಂದ ಮಾಹಿತಿ ಪಡೆದರು. ಬಳಿಕ ಮೃತ ನವಿಲುಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟನೆ ಸಂಬಂಧ ಆಳಂದದ ಝಳ್ಕಿ ಗ್ರಾಮದ ಮಂಜುನಾಥ್ ಬೇಷ್ಣು ಪವಾರ್ ಎಂಬ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಾಣಿ, ಒಟ್ಟು ಎಂಟು ನವಿಲುಗಳು ಮೃತಪಟ್ಟಿರುವ ಮಾಹಿತಿ ಇದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಬಳ್ಳಾರಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ನವಿಲಿಗೆ ಚಿಕಿತ್ಸೆ ನೀಡಿದ ವೈದ್ಯರು

Last Updated : Jan 13, 2024, 3:34 PM IST

ABOUT THE AUTHOR

...view details