ಕರ್ನಾಟಕ

karnataka

ಬೆಳಗಾವಿಯಲ್ಲಿ ಲೀಡ್ ಬ್ಯಾಂಕ್ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

By

Published : Jan 13, 2020, 4:54 PM IST

ಬ್ಯಾಂಕ್​ಗಳ ವರ್ತನೆ ಖಂಡಿಸಿ ರೈತರು ಜಿಲ್ಲೆಯ ಲೀಡ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

belagavi
ರೈತರ ಪ್ರತಿಭಟನೆ

ಬೆಳಗಾವಿ:ಬ್ಯಾಂಕ್​ಗಳ ವರ್ತನೆ ಖಂಡಿಸಿ ರೈತರು ಜಿಲ್ಲೆಯ ಲೀಡ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರವಾಹದಿಂದ ತತ್ತರಿಸಿರುವ ರೈತರ ಜೊತೆಗೆ ಜಿಲ್ಲೆಯ ಬ್ಯಾಂಕ್​ಗಳು ಇನ್ನೂ ಚೆಲ್ಲಾಟವಾಡುತ್ತಿದ್ದು, ಪ್ರಧಾನ ಮಂತ್ರಿ ಸನ್ಮಾನ್ ಯೋಜನೆಯಡಿ ಬಿಡುಗಡೆ ಆಗಿರುವ ಎರಡನೇ ಕಂತಿನ ಎರಡು ಸಾವಿರ ಹಣವನ್ನು ಬ್ಯಾಂಕ್​ಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪ್ರೋತ್ಸಾಹದ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಲೀಡ್ ಬ್ಯಾಂಕ್ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

ಈ ವೇಳೆ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್​ಗೆ ಮನವಿ ಸಲ್ಲಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ABOUT THE AUTHOR

...view details