ಕರ್ನಾಟಕ

karnataka

ಬೆಳಗಾವಿ ಅಧಿವೇಶನ ನಾಳೆಯೇ ಮುಕ್ತಾಯ; ಕಾರ್ಯಕಲಾಪ ಒಂದು ದಿನ ಮೊಟಕು

By

Published : Dec 28, 2022, 9:37 PM IST

ಶುಕ್ರವಾರ ಮುಗಿಯಬೇಕಿದ್ದ ಚಳಿಗಾಲದ ಅಧಿವೇಶನವನ್ನು ಒಂದು ದಿನದ ಮುಂಚೆಯೇ ಮೊಟಕುಗೊಳಿಸಲು ಸರ್ಕಾರ ನಿರ್ಧರಿಸಿದೆ.

Belagavi session ends tomorrow
Belagavi session ends tomorrow

ಬೆಳಗಾವಿ/ಬೆಂಗಳೂರು: ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ನಾಳೆ (ಗುರುವಾರ) ಮುಕ್ತಾಯವಾಗಲಿದೆ. ಅಧಿವೇಶನವನ್ನು ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ಈ ವಿಷಯವನ್ನು ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ ಸದನ ಸದಸ್ಯರ ಗಮನಕ್ಕೆ ತಂದರು.

ಬೇರೆ ಬೇರೆ ಕಾರಣಗಳಿಂದ ನಾಳೆನೇ ಕಲಾಪವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಗುರುವಾರ ಸಂಜೆ 5-6 ಗಂಟೆವರೆಗೆ ಕಲಾಪ ನಡೆಸಲಾಗುವುದು. ನಾಳೆ ಶೂನ್ಯ ವೇಳೆ ಇರುವುದಿಲ್ಲ ಎಂದು ಅವರು ತಿಳಿಸಿದರು.

ಮಂಗಳವಾರ ಸಭಾಪತಿ ಹೊರಟ್ಟಿ, ಸಿಎಂ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಜೆಡಿಎಸ್ ನಾಯಕ ಟಿ.ಎ.ಶರವಣ ಸೇರಿ ನಡೆಸಿದ ಸಭೆಯಲ್ಲಿ ಕಾರ್ಯಕಲಾಪ ಒಂದು ದಿನ ಮೊದಲೇ ಮೊಟಕು ಗೊಳಿಸಲು ನಿರ್ಧಾರ ಮಾಡಲಾಗಿತ್ತು.

ಡಿಸೆಂಬರ್ 30ರ ಶುಕ್ರವಾರದ ತನಕ ಅಧಿವೇಶನ ನಡೆಸಬೇಕಾಗಿತ್ತು. ಆದರೆ, ಡಿ.30ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಲಿದ್ದು ಮಂಡ್ಯ, ಬೆಂಗಳೂರಿನಲ್ಲಿ ವಿವಿಧ ಬಿಜೆಪಿ ಕಾರ್ಯಕ್ರಮಗಳು ನಡೆಯಲಿವೆ. ಅದೇ ದಿನ ಕಾಂಗ್ರೆಸ್‌ನಿಂದ ವಿಜಯಪುರದಲ್ಲಿ ಕೃಷ್ಣಾ ನೀರಾವರಿ ಯೋಜನೆಗಳಲ್ಲಿ ಬಿಜೆಪಿ ನೀತಿ ಖಂಡಿಸಿ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಉಭಯ ಪಕ್ಷಗಳ ನಾಯಕರು ಪಾಲ್ಗೊಳ್ಳಬೇಕಿರುವುದರಿಂದ ಒಂದು ದಿನದ ಮುಂಚೆಯೇ ಚಳಿಗಾಲದ ಅಧಿವೇಶನವನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜಿಲ್ಲಾ, ತಾಲ್ಲೂಕು ಕೇಂದ್ರದಿಂದ ಪ್ರವೇಶಕ್ಕೆ ಕೇಂದ್ರಕ್ಕೆ ಮನವಿ

ABOUT THE AUTHOR

...view details