ಕರ್ನಾಟಕ

karnataka

ಹಳ್ಳದಲ್ಲಿ ತೇಲಿಬಂದ 7 ಭ್ರೂಣಗಳು: ಹೌಹಾರಿದ ಬೆಳಗಾವಿ ಜನ!

By

Published : Jun 24, 2022, 2:22 PM IST

Updated : Jun 24, 2022, 5:47 PM IST

7 newborns floating in a ditch
7 newborns floating in a ditch ()

ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಹೀನಕೃತ್ಯವೊಂದು ಜರುಗಿದೆ. ಹಳ್ಳದಲ್ಲಿ 7 ಭ್ರೂಣಗಳು ತೇಲಿ ಬಂದಿದ್ದು ಶವ ನೋಡಿದ ಜನ ಹೌಹಾರಿದ್ದಾರೆ.

ಬೆಳಗಾವಿ:ಏಳು ಭ್ರೂಣಗಳ ಮೃತದೇಹಗಳನ್ನು ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಭ್ರೂಣಗಳ ಮೃತದೇಹಗಳನ್ನು ಕೀಚಕರು ಹಳ್ಳಕ್ಕೆ ಚೆಲ್ಲಿದ್ದಾರೆ. ಡಬ್ಬದಲ್ಲಿ ಹಾಕಿ ಹಳ್ಳಕ್ಕೆ ಬಿಡಲಾಗಿದ್ದು, ಶವ ನೋಡಿದ ಜನ ಹೌಹಾರಿದ್ದಾರೆ.

ಒಟ್ಟು ಐದು ಡಬ್ಬಿಗಳಲ್ಲಿ ಏಳು ಭ್ರೂಣಗಳನ್ನು ಹಾಕಿ ಹಳ್ಳಕ್ಕೆ ಎಸೆಯಲಾಗಿದೆ. ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಭ್ರೂಣಗಳ ಮೃತ ದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಮೃತದೇಹ ಕಂಡು ಮೂಡಲಗಿ ಜನರು ಹೌಹಾರಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಭ್ರೂಣಗಳ ಮೃತದೇಹ

ಡಿಎಚ್ಒ ಡಾ.ಮಹೇಶ ಕೋಣಿ ಹೇಳಿಕೆ:ಮೂಡಲಗಿ ಪಟ್ಟಣದ ಸೇತುವೆ ಕೇಳಗೆ ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಗಳ ಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಇವೆಲ್ಲವೂ ಐದು ತಿಂಗಳ ಭ್ರೂಣಗಳಾಗಿವೆ.

ಭ್ರೂಣಗಳನ್ನು ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು. ಇದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎನ್ನುವ ಬಗ್ಗೆ ತನಿಖೆ ಮಾಡಲಾಗುವುದು. ಭ್ರೂಣಗಳ ಹತ್ಯೆ ಕುರಿತು ತನಿಖೆಗೆ ಒಂದು ತಂಡ ಸಹ ರಚನೆ ಮಾಡಲಾಗುವುದು. ಈ ಕುರಿತು ಡಿಸಿ ಗಮನಕ್ಕೆ ತಂದು ತಂಡ ರಚನೆ ಮಾಡುತ್ತೇವೆ ಎಂದಿದ್ದಾರೆ.

ಇದನ್ನು ಓದಿ: ಡೇಟಿಂಗ್ ಆ್ಯಪಲ್ಲಿ ಪರಿಚಯವಾದ ಯುವತಿಗೆ ಮನಸೋತು 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್..!

Last Updated :Jun 24, 2022, 5:47 PM IST

ABOUT THE AUTHOR

...view details