ಕರ್ನಾಟಕ

karnataka

ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್‌ನೊಂದಿಗೆ ಪರಾರಿಯಾಗುತ್ತಿದ್ದ ಇಬ್ಬರ ಬಂಧನ

By

Published : Nov 25, 2022, 10:17 AM IST

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಮೊಸ ಮಾಡಿ ಸ್ಕೂಟರ್, ಬೈಕ್​ ಸಮೇತ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

two arrested for stealing bikes
ಇಬ್ಬರ ಬಂಧನ

ಯಲಹಂಕ: ಒಎಲ್​ಎಕ್ಸ್​​ನಲ್ಲಿ ಜಾಹೀರಾತು ಕೊಡುವ ಬೈಕ್ ಮಾಲೀಕರನ್ನು ಫೋನ್ ಮಾಡಿ ಭೇಟಿಯಾಗಿ, ಬಳಿಕ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಬೈಕ್ ಸಮೇತ ಪರಾರಿಯಾಗುತ್ತಿದ್ದ ಇಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ನಸೀಫ್ ಎಂಬುವರು ಯಲಹಂಕದ ರೇವಾ ಸರ್ಕಲ್ ಬಳಿ ಬೈಕ್ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದರು. ಇವರಿಗೆ ಫೋನ್​ಗೆ ಕರೆ ಮಾಡಿದ ಬೈಕ್ ಕಳ್ಳರು, ನವೆಂಬರ್ 13 ರ ರಾತ್ರಿ 9 ಗಂಟೆಗೆ ಬೈಕ್ ನೋಡಲು ಸ್ಥಳಕ್ಕೆ ಬಂದಿದ್ದಾರೆ. ಅನಂತರ ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ, ಬೈಕ್​ನೊಂದಿಗೆ ಪರಾರಿಯಾಗಿದ್ದರು. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಯಾದಗಿರಿ: ಅಕ್ರಮ ಗಾಂಜಾ ಬೆಳೆ ಜಪ್ತಿ: ಮೂವರು ಆರೋಪಿಗಳ ಬಂಧನ..

ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಬೆಂಗಳೂರಿನ ದೇವರಜೀವನಹಳ್ಳಿ ನಿವಾಸಿ ಯಾಸೀನ್ ಬೇಗ್ (22), ಬೆಂಗಳೂರಿನ ಗೋವಿಂದಪುರದ ನಿವಾಸಿ ಇಮ್ರಾನ್ ಖಾನ್ (24) ಎಂಬಿಬ್ಬರನ್ನು ಬಂಧಿಸಿದ್ದಾರೆ. 15 ಲಕ್ಷ ರೂ. ಮೌಲ್ಯದ 19 ಸ್ಕೂಟರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 19 ಸ್ಕೂಟರ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕಡಲೆಕಾಯಿ ಪರಿಷೆಗೆ ಬಂದು ಪೊಲೀಸರ ಕೈಗೆ ತಗಲಾಕ್ಕೊಂಡ ರೌಡಿಶೀಟರ್

ABOUT THE AUTHOR

...view details