ETV Bharat / state

ಕಡಲೆಕಾಯಿ ಪರಿಷೆಗೆ ಬಂದು ಪೊಲೀಸರ ಕೈಗೆ ತಗಲಾಕ್ಕೊಂಡ ರೌಡಿಶೀಟರ್

author img

By

Published : Nov 23, 2022, 3:42 PM IST

Updated : Nov 23, 2022, 7:13 PM IST

ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ರೌಡಿಶೀಟರ್​​ ಬಸವನಗುಡಿ ಕಡಲೆಕಾಯಿ ಪರಿಷೆಗೆ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

rowdy-sheeter-arrested-in-basavanagudi-kadalekai-parishe
ಕಡಲೆಕಾಯಿ ಪರಿಷೆಗೆ ಬಂದು ಪೊಲೀಸರ ಕೈಗೆ ತಗಲಾಕಿಕೊಂಡ ರೌಡಿಶೀಟರ್

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು, ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ರೌಡಿಶೀಟರ್​​ನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ‌‌.‌ ಕಡಲೆಕಾಯಿ‌ ಪರಿಷೆಗೆ ಬಂದ ಸಂದರ್ಭದಲ್ಲಿ ಆರೋಪಿಯು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ಕೆ.ಜಿ ನಗರ ನಿವಾಸಿಯಾಗಿರುವ ರೌಡಿಶೀಟರ್‌ ಪೃಥಿಕ್ 2019ರಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ‌. ಕೆಲ ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ. ವಿಚಾರಣೆಗೆ ಹಾಜರಾಗಲು ಹಲವು ಬಾರಿ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ತಲೆಮರೆಸಿಕೊಂಡಿದ್ದ.

ಪ್ರಕರಣದ ಬಗ್ಗೆ ಡಿಸಿಪಿ ಕೃಷ್ಣಕಾಂತ್ ಮಾಹಿತಿ

ಆದರೆ ಪ್ರತಿ ವರ್ಷ ಬಸವನಗುಡಿ ಕಡಲೆಕಾಯಿ ಪರಿಷೆಗೆ ರೌಡಿಶೀಟರ್ ಬರುತ್ತಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರಿಂದ ಹೊಂಚು ಹಾಕಿದ್ದ ಪೊಲೀಸರು ಮಂಗಳವಾರ ರೌಡಶೀಟರ್​​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ: 'ಅಫ್ತಾಬ್ ನನ್ನ ಕೊಲೆ ಮಾಡ್ತಾನೆ, ಕಾಪಾಡಿ..' 2020ರಲ್ಲಿ ಶ್ರದ್ಧಾ ಬರೆದ ಪತ್ರ ಇಲ್ಲಿದೆ ನೋಡಿ

Last Updated : Nov 23, 2022, 7:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.