ಕರ್ನಾಟಕ

karnataka

ಯಾವುದೇ ತಾರತಮ್ಯ ಇಲ್ಲದೇ ಒತ್ತುವರಿ ತೆರವು ಮಾಡಲಿದ್ದೇವೆ: ಸಿಎಂ ಬೊಮ್ಮಾಯಿ ಭರವಸೆ

By

Published : Sep 14, 2022, 8:10 PM IST

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಯಾವುದೇ ತಾರತಮ್ಯ ಇಲ್ಲದೇ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

vacating-of-rajakaluve-encroachment-without-any-discrimination-says-cm-bommai
ಯಾವುದೇ ತಾರತಮ್ಯ ಇಲ್ಲದೇ ಒತ್ತುವರಿ ತೆರವು ಮಾಡಲಿದ್ದೇವೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಯಾವುದೇ ತಾರತಮ್ಯ ಇಲ್ಲದೇ ಒತ್ತುವರಿ ತೆರವು ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಅತಿವೃಷ್ಟಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಈ ಬಾರಿ ಹಿಂದೆಂದೂ ಆಗದ ಮಳೆಯಾಗಿದೆ. ಯಾವಾಗಲೂ ದೊಡ್ಡ ಮಳೆ ಬಂದಾಗ ಬೇರೆ ನಗರಗಳಲ್ಲೂ ನೆರೆ ಆಗುತ್ತದೆ. ಮುಂಬೈ, ಹೈದರಾಬಾದ್​​​ನಲ್ಲೂ ಮಳೆ ಬಂದಾಗ ನೆರೆ ಉಂಟಾಗುತ್ತದೆ. ಈ ಬಾರಿಯ ಮಳೆ ಭಿನ್ನವಾಗಿದೆ. ಇದಕ್ಕೆ ಯಾರು ಕಾರಣ ಎಂದು ಹುಡುಕುತ್ತಾ ಹೋದರೆ ಅದಕ್ಕೆ ಕೊನೆ ಇರುವುದಿಲ್ಲ ಎಂದು ಹೇಳಿದರು

ತಾರತಮ್ಯ ಇಲ್ಲದೇ ಒತ್ತುವರಿ ತೆರವು ಕಾರ್ಯ: ಇನ್ನು ಈ ರೀತಿಯಾಗದಂತೆ ಮುಂದೆ ಏನು ಮಾಡಬೇಕು ಎಂಬುದನ್ನು ನಾವು ಯೋಚಿಸಬೇಕು. ರಾಜಕಾಲುವೆ ನೀರು ಹರಿಯಲು ದಾರಿ ಬಿಡದೇ ಇದ್ದರೆ ನೆರೆ ಸಾಮಾನ್ಯವಾಗುತ್ತದೆ. ಹೀಗಾಗಿ ತಾರತಮ್ಯ ಇಲ್ಲದೇ ಒತ್ತುವರಿ ತೆರವು ಕ್ರಮ ಕೈಗೊಳ್ಳುತ್ತೇವೆ. ಒತ್ತುವರಿ ತೆರವು ಬಗ್ಗೆ ಲೋಕಾಯುಕ್ತ ನಿಯಮಾನುಸಾರ ಕ್ರಮ ವಹಿಸಿ ಎಂದು ಸೂಚಿಸಲಾಗಿದೆ ಎಂದರು.

ಸರ್ಕಾರ ಎಲ್ಲಾ ನಿಯಮ ಪಾಲಿಸಿ ಕ್ರಮ ತೆಗೆದುಕೊಳ್ಳಲಿದೆ. ರಾಜಕಾಲುವೆ ಒತ್ತುವರಿ ಮಾಡಿದರೆ ಕ್ರಮ ವಹಿಸುತ್ತೇವೆ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಬಡಾವಣೆಗಳಲ್ಲಿ ಮನೆಗಳನ್ನು ಕೆಡವದೇ ರಾಜಕಾಲುವೆ ಕೊಂಡೊಯ್ಯಲು ಆಗುತ್ತದೆ ಎಂದರೆ, ಈ ಬಗ್ಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ :ವಿಧಾನಸಭೆಯಲ್ಲಿ ಎಸ್ಟಿ ಮೀಸಲಾತಿ ವಿಚಾರ ಚರ್ಚೆ ಸಂಬಂಧ ಗದ್ದಲ: ಸಿಟ್ಟಾದ ಸ್ಪೀಕರ್ ಕಾಗೇರಿ

ABOUT THE AUTHOR

...view details