ಕರ್ನಾಟಕ

karnataka

ಅಭಿಮಾನಿಗಳ ಸೆಲ್ಫಿಗೆ ಪೋಸ್ ಕೊಟ್ಟ ತ್ರಿಬಲ್ ರೈಡಿಂಗ್ ಸಿನಿಮಾ ಸುಂದರಿಯರು

By

Published : Nov 30, 2022, 5:31 PM IST

Updated : Nov 30, 2022, 6:21 PM IST

ತ್ರಿಬಲ್ ರೈಡಿಂಗ್ ಸಿನಿಮಾ ಯಶಸ್ವಿಯಾದ ಬಳಿಕ ಮೈಸೂರಿನ ಎಟಿಎಂಇ ಕಾಲೇಜ್ ಆಫ್ ಇಂಜನಿಯರಿಂಗ್ ಕಾಲೇಜ್​ಗೆ ತ್ರಿಬಲ್ ರೈಡಿಂಗ್ ನಟಿಯರು ಭೇಟಿ ನೀಡಿ ಕಾಲೇಜ್ ವಿದ್ಯಾರ್ಥಿಗಳ ಜೊತೆ ಚಿತ್ರದ ಸಕ್ಸಸ್​ ಖುಷಿಯನ್ನ ಹಂಚಿಕೊಂಡಿದ್ದಾರೆ.

Kn_Bng_
ತ್ರಿಬಲ್ ರೈಡಿಂಗ್ ನಟಿಯರು

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ವರ್ಷದ ನಿರೀಕ್ಷಿತ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆ ಆದ ಎಲ್ಲಾ ಚಿತ್ರಮಂದಿಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಲವ್ ಸ್ಟೋರಿ ಜೊತೆಗೆ ಔಟ್ ಆ್ಯಂಡ್ ಔಟ್ ಕಾಮಿಡಿ ಕಿಕ್ಕು ಹೊಂದಿರುವ ತ್ರಿಬಲ್ ರೈಡಿಂಗ್ ಸಿನಿಮಾ ನೋಡಿದ ಪ್ರೇಕ್ಷಕರು ಗಣೇಶ್ ಅಭಿನಯಕ್ಕೆ ಹಾಗೂ ಲವರ್ ಬಾಯ್ ಇಮೇಜ್​ಗೆ ಫಿದಾ ಆಗಿದ್ದಾರೆ.

ಇನ್ನು, ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ಗಣಿ ಜೊತೆ ಸಖತ್ತಾಗಿ ರೊಮ್ಯಾನ್ಸ್ ಮಾಡಿದ್ದಾರೆ. ಕಿರುತೆರೆಯಲ್ಲಿ ಮೋಡಿ ಮಾಡಿದ ಮೇಘಾ ಶೆಟ್ಟಿ ಬಿಗ್ ಸ್ಕ್ರೀನ್ ಮೂಲಕ ಅಭಿಮಾನಿಗಳ ಮನಸು ಕದ್ದು ಸಕ್ಸಸ್ ಆಗಿದ್ದಾರೆ. ಇನ್ನು ಹೆಂಗೆ ನಾವು ರಚನಾ ಇಂದರ್ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಇವತ್ತಿನ ಜನರೇಷನ್ ಬೋಲ್ಡ್ ಹುಡುಗಿಯಾಗಿ ಇಷ್ಟ ಆಗ್ತಾರೆ.

ಸದ್ಯ ಕಳೆದೆ ವಾರ ತೆರೆಕಂಡ ತ್ರಿಬಲ್ ರೈಡಿಂಗ್ ಚಿತ್ರ ಎಲ್ಲಾ ಕಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಅಭಿಮಾನಿಗಳನ್ನು ಭೇಟಿ ಮಾಡುವ ಸಕ್ಸಸ್ ಯಾತ್ರೆಯನ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಮಹೇಶ್ ಗೌಡ ಹಾಗೂ ಇಬ್ಬರು ಸುಂದರ ನಟಿಯರಾದ ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ಮೈಸೂರಿನ ಗಾಯಿತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಆ ಸಂಧರ್ಭದಲ್ಲಿ ಅಭಿಮಾನಿಗಳಿ ಇಬ್ಬರು ಚೆಂದುಳ್ಳಿ ಹುಡಗಿಯರ ಜೊತೆ ಸೆಲ್ಫಿ ತೆಗೆದುಕೊಳ್ಳೊದಿಕ್ಕೆ ಮುಗಿ ಬಿದ್ದಿದ್ದರು.

ಸೆಲ್ಫಿಗೆ ಪೋಸ್ ಕೊಟ್ಟ ತ್ರಿಬಲ್ ರೈಡಿಂಗ್ ಸಿನಿಮಾ ಸುಂದರಿಯರು

ಇನ್ನು, ಮೈಸೂರಿನ ಎಟಿಎಂಇ ಕಾಲೇಜ್ ಆಫ್ ಇಂಜನಿಯರಿಂಗ್ ಕಾಲೇಜ್​ಗೆ ತ್ರಿಬಲ್ ರೈಡಿಂಗ್ ಬೆಡಗಿಯರು ಭೇಟಿ ನೀಡಿ ಕಾಲೇಜ್ ವಿದ್ಯಾರ್ಥಿಗಳ ಜೊತೆ ಸಾಕಷ್ಟು ವಿಚಾರಗಳನ್ನು ಮಾತನಾಡುವ ಮೂಲಕ ಸಕ್ಸಸ್ ಖುಷಿಯನ್ನು ಮೇಘಾ ಶೆಟ್ಟಿ, ರಚನಾ ಇಂದರ್, ನಿರ್ದೇಶಕ ಮಹೇಶ್ ಗೌಡ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ಹಂಚಿಕೊಂಡರು.

ಯಾವುದೇ ಅಬ್ಬರ ಹಾಗೂ ಡಬಲ್ ಮೀನಿಂಗ್ ಡೈಲಾಗ್ ಇಲ್ಲದ ತ್ರಿಬಲ್ ರೈಡಿಂಗ್ ಸಿನಿಮಾವನ್ನು ನಿರ್ಮಾಪಕ ವೈ.ಎಮ್​​. ರಾಮ್ ಗೋಪಾಲ್ ಫ್ಯಾಮಿಲಿ ಮಾಡಿದ್ದಾರೆ. ಗಣೇಶ್, ಮೇಘಾ ಶೆಟ್ಟಿ, ಅದಿತಿ ಪ್ರಭುದೇವ, ರಚನಾ ಇಂದರ್, ಅಲ್ಲದೇ ಸಾಧುಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು ಹೀಗೆ ಖಳ ನಟ ರವಿಶಂಕರ್ ಕಾಮಿಡಿ ಕಿಕ್ ನೋಡುಗರಿಗೆ ಇಷ್ಟ ಆಗುತ್ತಿದೆ.

ಇದನ್ನೂ ಓದಿ:ಬೊಂಬಾಟ್ ಆಗಿದೆ ಅಭಿಷೇಕ್ ಅಂಬರೀಷ್ ಅಭಿನಯದ ಕಾಳಿ ಚಿತ್ರದ ಮೇಕಿಂಗ್

Last Updated : Nov 30, 2022, 6:21 PM IST

ABOUT THE AUTHOR

...view details