ಕರ್ನಾಟಕ

karnataka

ಹೆಚ್​ಡಿಕೆ ನಾವೆಲ್ಲಿ ಊಟ ಮಾಡ್ತೀವಿ ಅಂತ ಗೂಢಚಾರಿಕೆ ಶುರು ಮಾಡಿದ್ರಾ? ಸಚಿವ ಅಶ್ವತ್ಥನಾರಾಯಣ ಪ್ರಶ್ನೆ

By

Published : Feb 8, 2023, 6:45 AM IST

Updated : Feb 8, 2023, 3:20 PM IST

ಬಿಎಂಎಸ್ ಟ್ರಸ್ಟ್ ಮುಖ್ಯಸ್ಥರ ಜತೆ ಸಚಿವ ಅಶ್ವತ್ಥ್ ನಾರಾಯಣ್ ಊಟ ಮಾಡುತ್ತಿರುವ ಫೋಟೋ ಪ್ರದರ್ಶಿಸಿದ್ದ ಹೆಚ್​ಡಿಕೆಗೆ ಟಾಂಗ್​- ಬಿಎಂಎಸ್ ನ ಶೇ 90 ಸೀಟ್​ಗಳು ಸಿಇಟಿ ಮೂಲಕ ಭರ್ತಿ ಆಗ್ತಿವೆ- ಕಾನೂನು ಮೀರಿ ಯಾವುದನ್ನೂ ಮಾಡಿಲ್ಲ- ಸಚಿವ ಅಶ್ವತ್ಥ್ ನಾರಾಯಣ್

Minister Ashwath Narayan
ಸಚಿವ ಅಶ್ವತ್ಥ್ ನಾರಾಯಣ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಾವು ಎಲ್ಲಿ ಊಟ ಮಾಡುತ್ತೇವೆ ಅಂತ ಗೂಢಚಾರಿಕೆ ಶುರು ಮಾಡಿದ್ದಾರಾ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಪ್ರಶ್ನಿಸಿದ್ದಾರೆ. ದಯಾನಂದ ಪೈ ಜತೆ ಊಟ ಮಾಡಿದ ಫೋಟೋ‌ ರಿಲೀಸ್ ಮಾಡಿ ತಮ್ಮ ವಿರುದ್ಧ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಎಂಎಸ್ ನ 90% ಸೀಟ್ ಗಳು ಸಿಇಟಿ ಮೂಲಕವೇ ಭರ್ತಿ ಆಗ್ತಿವೆ. ದಯಾನಂದ ಪೈ ಅವರು ಗೌರವಾನ್ವಿತ ವ್ಯಕ್ತಿ. ಸಾಕಷ್ಟು ಸಾಮಾಜಿಕ ಕೊಡುಗೆ ಕೊಟ್ಟಿರೋರು. ಕುಮಾರಸ್ವಾಮಿ, ದೇವೇಗೌಡ ಅವರಿಗೆ ಪರಿಚಯ ಇರೋರು ದಯಾನಂದ ಪೈ ಎಂದು ಹೇಳಿದರು.

ಕಾನೂನು ಮೀರಿ ಯಾವುದನ್ನೂ ಮಾಡಿಲ್ಲ: ಕುಮಾರಸ್ವಾಮಿ ಅವರಿಗೆ ಪರಿಚಯ ಇಲ್ಲದವರ ಜತೆ ಏನೂ ಕುಳಿತು ಊಟ ಮಾಡಿಲ್ಲ ನಾನು. ದಯಾನಂದ ಪೈ ಜತೆ ಊಟ ಮಾಡಿದ್ದನ್ನೂ ಪ್ರಶ್ನೆ ಮಾಡಿದ್ದಾರೆ. ಊಟ ಮಾಡಿದ್ದನ್ನು ಪ್ರಶ್ನಿಸುವ ಮಟ್ಟಕ್ಕೂ ಎಚ್ಡಿಕೆ ಇಳಿದಿದ್ದಾರೆ. ಇಂಥ ಕೆಳಮಟ್ಟಕ್ಕೂ ಇಳಿಯಬಹುದು ಅಂತ ಕುಮಾರಸ್ವಾಮಿ ಸಾಬೀತು ಮಾಡಿದ್ದಾರೆ ಇವತ್ತು. ಯಾರಿಗೂ ಯಾವುದನ್ನೂ ಬರೆದುಕೊಡಲು ಆಗಲ್ಲ. ಏನೇ ಆಗಿದ್ರೂ ಕಾನೂನು ಪ್ರಕಾರವೇ ಆಗಿದೆ. ಕಾನೂನು ಮೀರಿ ಯಾವುದನ್ನೂ ನಾನು ಮಾಡಿಲ್ಲ ಎಂದು ತಿರುಗೇಟು ನೀಡಿದರು.

ಸಚಿವ ಅಶ್ವತ್ಥ್ ನಾರಾಯಣ್ ವಾಕ್ಸಮರ: ಆ ಮೂಲಕ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಕುಮಾರಸ್ವಾಮಿ ನಡುವೆ ವಾಕ್ಸಮರ ಜೋರಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜಾತಿ ಹೆಸರಲ್ಲಿ ಹೇಳಿಕೆ ನೀಡಿರುವುದನ್ನು ಸಚಿವ ಅಶ್ವತ್ಥನಾರಾಯಣ್ ಸುದ್ದಿಗೋಷ್ಟಿ ನಡೆಸಿ ಖಂಡಿಸಿದ್ದರು. ಹೆಚ್​ಡಿಕೆ ಇಷ್ಟು ಕೆಳಮಟ್ಟಕ್ಕೆ ಹೋಗುತ್ತಾರೆ ಎಂದುಕೊಂಡಿರಲಿಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.

ಪೈ ಜತೆ ಅಶ್ವತ್ಥ್​ ಊಟ, ಅಕ್ರಮದ ಆರೋಪ :ಈ ಸಂಬಂಧ ಕುಮಾರಸ್ವಾಮಿ ಮಾಧ್ಯಮಗೋಷ್ಟಿ ನಡೆಸಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಬಿಎಂಎಸ್ ಅಕ್ರಮದ ಆರೋಪ ಮಾಡಿ, ಬಿಎಂಎಸ್ ಟ್ರಸ್ಟ್ ಮುಖ್ಯಸ್ಥ ದಯಾನಂದ ಪೈ ಜೊತೆ ಸಚಿವ ಅಶ್ವತ್ಥ್ ನಾರಾಯಣ ಅವರು ಊಟ ಮಾಡುತ್ತಿರುವ ಫೋಟೋವನ್ನು ಪ್ರದರ್ಶಿಸಿದ್ದರು.‌

ಕೆಳಮಟ್ಟಕ್ಕೆ ಇಳಿದು ಹೆಚ್​ಡಿಕೆ ಆರೋಪ: ಇದಕ್ಕೆ ತಿರುಗೇಟು ನೀಡಿದ ಸಚಿವ ಅಶ್ವತ್ಥ್ ನಾರಾಯಣ ಹೆಚ್ ಡಿಕೆ ಅವರು ನಾವು ಎಲ್ಲಿ ಊಟ ಮಾಡುತ್ತೇವೆ ಅಂತ ಗೂಢಚಾರಿಕೆ ಶುರು ಮಾಡಿದ್ದಾರಾ?. ಕುಮಾರಸ್ವಾಮಿ ಅವರಿಗೆ ಪರಿಚಯ ಇಲ್ಲದವರ ಜತೆ ಏನೂ ಕೂತು ಊಟ ಮಾಡಿಲ್ಲ ನಾನು. ದಯಾನಂದ ಪೈ ಜತೆ ಊಟ ಮಾಡಿದ್ದನ್ನೂ ಪ್ರಶ್ನೆ ಮಾಡಿದ್ದಾರೆ. ಊಟ ಮಾಡಿದ್ದನ್ನು ಪ್ರಶ್ನಿಸುವ ಮಟ್ಟಕ್ಕೂ ಎಚ್ಡಿಕೆ ಇಳಿದಿದ್ದಾರೆ. ಇಂಥ ಕೆಳಮಟ್ಟಕ್ಕೂ ಇಳಿಯಬಹುದು ಅಂತ ಕುಮಾರಸ್ವಾಮಿ ಸಾಬೀತು ಮಾಡಿದ್ದಾರೆ ಇವತ್ತು ಎಂದು ವಾಗ್ದಾಳಿ ನಡೆಸಿದರು.

ಹೆಚ್ ಡಿಕೆ ಆರೋಪ ಏನು? ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿಎಂಎಸ್‌ ಎಜ್ಯುಕೇಷನ್‌ ಟ್ರಸ್ಟ್‌ ನ್ನು ಅಕ್ರಮವಾಗಿ ಖಾಸಗಿ ಟ್ರಸ್ಟ್‌ ಆಗಿ ಮಾರ್ಪಡಿಸಲು ಸಚಿವ ಅಶ್ವತ್ಥ ನಾರಾಯಣ ಸಹಕರಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಬಿಎಂಎಸ್ ಟ್ರಸ್ಟ್ ಮುಖ್ಯಸ್ಥ ರೊಂದಿಗೆ ಅಶ್ವತ್ಥನಾರಾಯಣ್ ಊಟ ಮಾಡುತ್ತಿರುವ ಫೋಟೋ ಪ್ರದರ್ಶನ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದರು.

ಪಾಪ ಅಶ್ವತ್ಥನಾರಾಯಣ್ ನನ್ನ ವಿರುದ್ಧ ಆರೋಪ ಮಾಡಿದ್ದೇ ಮಾಡಿದ್ದು. ಬಿಎಂಎಸ್ ಟ್ರಸ್ಟ್ ನಲ್ಲಿ ಯಾರು ತಿಂದಿದ್ದು ನೀವೇ ಹೇಳಿ. ನಾನು ಸದನದಲ್ಲಿ ಇದನ್ನು ಸುಮ್ಮನೇ ಪ್ರಸ್ತಾಪ ಮಾಡಿದ್ದಲ್ಲ. ನಾನು ಇದನ್ನು ಸುಮ್ಮನೆ ಬಿಡಲ್ಲ. ನಮ್ಮ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದೇನೆ ಎಂದು ಅಶ್ವತ್ಥನಾರಾಯಣ್ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದ್ದರು.

ಅಕ್ರಮದಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರು ನೇರವಾಗಿ ಭಾಗಿಯಾಗಿದ್ದು, ಈ ಕುರಿತು ತನಿಖೆಯಾಗಬೇಕು ಎಂದು ಜೆಡಿಎಸ್ ಈ ಹಿಂದೆ ನಡೆದ ಅಧಿವೇಶನದಲ್ಲಿ ಧರಣಿ ನಡೆಸಿತ್ತು. ಸದನದಲ್ಲೇ ಈ ಅಕ್ರಮಕ್ಕೂ ನನಗೂ ಸಂಬಂಧವಿಲ್ಲವೆಂದು ಸಚಿವ ಅಶ್ವತ್ಥನಾರಾಯಣ ಅವರು ಆರೋಪವನ್ನು ತಳ್ಳಿಹಾಕಿದ್ದರು ಎಂದು ಹೆಚ್​ಡಿಕೆ ಹೇಳಿದ್ದರು.

ಇದನ್ನೂಓದಿ:ಬಿಎಂಎಸ್ ಹಗರಣದಲ್ಲಿ ಸಚಿವ ಅಶ್ವತ್ಥನಾರಾಯಣ ನೇರ ಶಾಮೀಲು: ಹೆಚ್​ ಡಿ ಕುಮಾರಸ್ವಾಮಿ ಆರೋಪ

Last Updated :Feb 8, 2023, 3:20 PM IST

ABOUT THE AUTHOR

...view details