ಕರ್ನಾಟಕ

karnataka

ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಕು ಇರಿದ ತಂದೆ, ಹಾರಿಹೋಯ್ತು ಮಗನ ಪ್ರಾಣ

By

Published : Oct 11, 2021, 6:41 PM IST

Updated : Oct 12, 2021, 1:00 AM IST

ಮಗನ ಬರ್ಬರ ಹತ್ಯೆ
ಮಗನ ಬರ್ಬರ ಹತ್ಯೆ ()

ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಚಾಕುನಿಂದ ಇರಿದು ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು:ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಚಾಕುನಿಂದ ಇರಿದು ಕೊಲೆಗೈದಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಕೆಹೆಚ್‌ಬಿ ಕಾಲೋನಿ ನಿವಾಸಿ ಸಂತೋಷ್ (28) ಕೊಲೆಯಾದ ಮಗ. ಈ ಸಂಬಂಧ ಕೃತ್ಯ ಎಸಗಿದ ಆರೋಪಿ ತಂದೆ ಗುರುರಾಜ್ (58) ಎಂಬಾತನನ್ನು ಬಂಧಿಸಲಾಗಿದೆ. ಈತ ಮದ್ಯದ ಅಮಲಿನಲ್ಲಿ ಇರುವುದರಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಮದ್ಯದ ಅಮಲಿನಲ್ಲಿ ಚಾಕು ಇರಿತ:

ಗುರುರಾಜ್ ಕೆಹೆಚ್‌ಬಿ ಕಾಲೋನಿಯಲ್ಲಿ ಭಾರತಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಪುತ್ರ ಸಂತೋಷ್​ ಮತ್ತು ಪತ್ನಿ ಕೂಡ ಜೊತೆಯಲ್ಲೇ ಡ್ರೈವಿಂಗ್ ಸ್ಕೂಲ್​ ನಿರ್ವಹಿಸುತ್ತಿದ್ದರು. ಜೊತೆಗೆ ಆರ್‌ಟಿಒ ಏಜೆಂಟ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದ. ಈ ನಡುವೆ ಗುರುರಾಜ್ ಮದ್ಯದ ದಾಸನಾಗಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಂತೋಷ್ ವಾಹನವೊಂದರ ದಾಖಲೆ ಕುರಿತು ತಂದೆಗೆ ಪ್ರಶ್ನಿಸಿದ್ದಾನೆ. ಆಗ ಕಂಠಪೂರ್ತಿ ಮದ್ಯ ಸೇವಿಸಿದ್ದ ಗುರುರಾಜ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದರಿಂದ ಕೋಪಗೊಂಡ ಸಂತೋಷ್, ತಂದೆಯ ಮೊಬೈಲ್ ಕಸಿದು ಎಸೆದಿದ್ದಾನೆ.

ಮೃತ ಸಂತೋಷ್

ಆಗ ಗುರುರಾಜ್, ಚಾಕುವಿನಿಂದ ಸಂತೋಷ್ ಎದೆಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಮಗ ಕೆಳಗೆ ಬಿದ್ದಿದ್ದಾನೆ. ಅದೇ ಸಂದರ್ಭದಲ್ಲಿ ಆರ್‌ಟಿಒ ಕಚೇರಿಯಲ್ಲಿದ್ದ ತಾಯಿಗೆ ಕರೆ ಮಾಡಿ ತಂದೆಯ ಕೃತ್ಯದ ಬಗ್ಗೆ ಅಕ್ಕ ಪಕ್ಕದವರು ಮಾಹಿತಿ ನೀಡಿದ್ದರು. ಬಳಿಕ ತಾಯಿ, ತನ್ನ ಸಹೋದರನಿಗೆ ಮನೆ ಬಳಿ ಹೋಗುವಂತೆ ಸೂಚಿಸಿದ್ದಾರೆ. ಸ್ಥಳಕ್ಕೆ ಬಂದು ಸಂತೋಷ್​ನನ್ನು ಆಸ್ಪತ್ರೆಗೆ ಕರೆದೊಯ್ದರೂ ಕೂಡ ಆತ ಮೃತಪಟ್ಟಿರುವುದಾಗಿ ಮೈದ್ಯರು ದೃಢಪಡಿಸಿದ್ದಾರೆ.

ಸಾಕ್ಷ ನಾಶಕ್ಕೆ ಯತ್ನ:

ಸಂತೋಷ್‌ನನ್ನು ಆತನ ಸೋದರ ಮಾವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಆರೋಪಿ ಗುರುರಾಜ್ ಮನೆಯ ಕೊಣೆಯಲ್ಲಿದ್ದ ರಕ್ತದ ಕಲೆ ಮತ್ತು ಚಾಕುವನ್ನು ನೀರಿನಲ್ಲಿ ತೊಳೆದು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾನೆ. ಆದರೆ, ಗೋಡೆಗೆ ಅಂಟಿದ್ದ ರಕ್ತದ ಕಲೆಯನ್ನು ತೊಳೆಯಲು ಸಾಧ್ಯವಾಗದೆ ಮದ್ಯದ ಅಮಲಿನಲ್ಲಿ ಅಲ್ಲಿಯೇ ಮಲಗಿದ್ದ. ಬಳಿಕ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ಕಂಠಪೂರ್ತಿ ಮದ್ಯ ಸೇವಿಸಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಅರೆಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ.. ತಾಯಿ-ಮಗುವನ್ನು ಇರಿದು ಕೊಂದಿದ್ದ ಆರೋಪಿ ಅಂದರ್..​​

Last Updated :Oct 12, 2021, 1:00 AM IST

ABOUT THE AUTHOR

...view details