ಕರ್ನಾಟಕ

karnataka

ಕಾಂತರಾಜು ವರದಿ ಸ್ವೀಕರಿಸಲು ಸರ್ಕಾರ ಸಿದ್ಧ: ಸಚಿವ ಶಿವರಾಜ್ ತಂಗಡಗಿ

By ETV Bharat Karnataka Team

Published : Dec 1, 2023, 8:29 AM IST

Kantharaju report on caste census: ಕಾಂತರಾಜು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವೀಕಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ

shivaraj tangadagi
ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಶಾಸಕರ ಭವನದಲ್ಲಿ ಗುರುವಾರ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿ ಸ್ವೀಕಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ವರದಿ ಸಲ್ಲಿಕೆಯಾಗಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದು, ಆ ಬಳಿಕ ನಿರ್ಧಾರ ಮಾಡಲಾಗುವುದು. ವರದಿಯಲ್ಲೇನಿದೆ ಎಂದು ಯಾರಿಗೂ ಗೊತ್ತಿಲ್ಲ. ವರದಿ ಬಗ್ಗೆ ಮೊದಲೇ ಕಲ್ಪನೆ ಮಾಡಿಕೊಳ್ಳುವುದು ಬೇಡ ಎಂದರು.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿಸಿ ಸಮೀಕ್ಷೆ ಮಾಡಿಸಿರುವ ವರದಿಯನ್ನು ಸ್ವೀಕಾರ ಮಾಡಲ್ಲ ಎನ್ನಲು ಸಾಧ್ಯವೇ?, ಸರ್ಕಾರದಲ್ಲಿ ಸ್ವೀಕಾರ ಮಾಡಲಾಗಿರುವ ಇತರೆ ಹತ್ತಾರು ವರದಿಗಳಿವೆ. ಯಾವುದೇ ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದೆ. ಆ ಬಗ್ಗೆ ಚರ್ಚೆ ನಡೆದು ನಿರ್ಧಾರ ಆಗಲಿದೆ. ವರದಿ ಸ್ವೀಕಾರವಾಗದೆ ಕಾಂತರಾಜು ವರದಿ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಹಾಲಿ, ಮಾಜಿ ಶಾಸಕರನ್ನು ಟೈಮ್ ಬಂದಾಗ ವಿದೇಶಕ್ಕೆ ಕರೆದುಕೊಂಡು ಹೋಗೋಣ : ಸತೀಶ್​ ಜಾರಕಿಹೊಳಿ

ಒಕ್ಕಲಿಗ ಸಮುದಾಯದ ಮುಖಂಡರು ನನ್ನನ್ನು ಭೇಟಿಯಾಗಿ ಕಾಂತರಾಜು ವರದಿ ಸ್ವೀಕರಿಸದಂತೆ ಮನವಿ ಮಾಡಿದರು. ನಾನು ಅವರನ್ನು ಉದ್ದೇಶಿಸಿ, ಕಾಂತರಾಜು ವರದಿಯಲ್ಲಿ ಏನಿದೆ ಎಂಬುದು ನಿಮಗೆ ತಿಳಿದಿದೆಯೇ ಎಂದು ಕೇಳಿದೆ. ಈ ವೇಳೆ ಒಕ್ಕಲಿಗ ಸಮುದಾಯದ ಮುಖಂಡರು ಇಲ್ಲ ಎಂದರು. ಹೀಗಾಗಿ, ವರದಿ ಸ್ವೀಕರಿಸಿದ ಬಳಿಕ ವರದಿಯಲ್ಲಿ ಏನಿದೆ ಎಂಬುದು ಸರ್ಕಾರಕ್ಕೆ ತಿಳಿಯಲಿದ್ದು, ಈ ಹಂತದಲ್ಲಿ ವಿರೋಧ ಮಾಡುವ ಅಗತ್ಯವಿಲ್ಲ. ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಮನವರಿಕೆ ಮಾಡಿದ್ದೇನೆ ಎಂದು ವಿವರಿಸಿದರು.

ಇದನ್ನೂ ಓದಿ:ಕಾಂತರಾಜು ವರದಿ ಕುರಿತು ಡಿಸಿಎಂ ಪತ್ರ ನನಗೆ ತಲುಪಿಲ್ಲ : ಸಚಿವ ತಂಗಡಗಿ

ಇನ್ನು ವರದಿ ವಿರೋಧಿಸಿ ವೀರಶೈವ ಲಿಂಗಾಯತ ಸಮುದಾಯದಕ್ಕೆ ಸೇರಿದ ಹಿರಿಯ ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ಸಹಿ ಸಂಗ್ರಹ ಮಾಡುವುದಾಗಿ ಹೇಳಿಕೆ‌ ನೀಡಿದ್ದರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಗಮನ ಹರಿಸಲಿದ್ದಾರೆ ಎಂದರು.

ಇದನ್ನೂ ಓದಿ:ಕಾಂತರಾಜು ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲ್ಲ : ಸಚಿವ‌ ತಂಗಡಗಿ

ABOUT THE AUTHOR

...view details