ಕರ್ನಾಟಕ

karnataka

ಪ್ರತ್ಯೇಕ ಪ್ರಕರಣ: ಪೇಂಟರ್ ₹6 ಲಕ್ಷದ ಚಿನ್ನ ಕದ್ದ; ಯೂಟ್ಯೂಬ್ ನೋಡಿ ಬೈಕ್ ಎಗರಿಸಿದ B.Tech ಪದವೀಧರರು ಸೆರೆ

By

Published : Aug 11, 2023, 9:34 PM IST

Bengaluru crime: ಚಿನ್ನ ಕದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಹಾಗು ಬೈಕ್ ಕಳ್ಳತನ ಮಾಡುತ್ತಿದ್ದ ಸ್ನೇಹಿತರಿಬ್ಬರನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಪ್ರತ್ಯೇಕ ಪ್ರಕರಣ
ಬೆಂಗಳೂರು ಪ್ರತ್ಯೇಕ ಪ್ರಕರಣ

ಬೆಂಗಳೂರು : ಬಣ್ಣ ಬಳಿಯಲು ಮನೆಗೆ ಬಂದು ಮಾಲೀಕನ ಮನೆಯಲ್ಲಿದ್ದ ಚಿನ್ನ ಕಳ್ಳತನ ಮಾಡಿದ್ದ ಪೇಂಟರ್‌ನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ಉಮೇಶ್ ಪ್ರಸಾದ್ ಜಾಧವ್ ಬಂಧಿತ ಆರೋಪಿ. ಈತನಿಂದ 6 ಲಕ್ಷ ಬೆಲೆಬಾಳುವ 100 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ವೃತ್ತಿಯಲ್ಲಿ ಪೇಂಟರ್ ಆಗಿರುವ ಉಮೇಶ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದ. ಕನಕಪುರ ರಸ್ತೆಯಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದ. ಕಳೆದ ತಿಂಗಳು ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರ ಮನೆಗೆ ಪೇಂಟಿಂಗ್ ಮಾಡಲು ಬಂದಿದ್ದ. ಈ ವೇಳೆ ಮಾಲೀಕರ ಕಣ್ತಪ್ಪಿಸಿ ಕಬೋರ್ಡ್​ನಲ್ಲಿದ್ದ 100 ಗ್ರಾಂ ಚಿನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಎರಡು ದಿನಗಳ ಬಳಿಕ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು‌.

ಬಸವನಗುಡಿ ಠಾಣೆ ಪೊಲೀಸರ ಕಾರ್ಯಾಚರಣೆ

ಈ ಸಂಬಂಧ ಪೇಂಟರ್ ವಿರುದ್ಧ ಬಸವನಗುಡಿ ಪೊಲೀಸರಿಗೆ ದೂರು ಮನೆ ಮಾಲೀಕರು ದೂರು ನೀಡಿದ್ದರು. ಕಳ್ಳತನ ಮಾಡಿದ್ದ ಉಮೇಶ್, ಊರಿಗೆ ಹೋಗಿದ್ದ. ಮನೆಯೊಂದಕ್ಕೆ ಪೇಂಟಿಂಗ್ ಮಾಡಿಸಬೇಕೆಂದು ನಗರಕ್ಕೆ ಕರೆಯಿಸಿಕೊಂಡ ‌ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಈತನಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಯೂಟ್ಯೂಬ್ ನೋಡಿ ಬೈಕ್ ಕಳ್ಳತನ :ಯೂಟ್ಯೂಬ್​ನಲ್ಲಿ ನೋಡಿ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶ ಮೂಲದ ಇಬ್ಬರನ್ನು ಹನುಮಂತನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಾದ ಹೇಮಾದ್ರಿ ಹಾಗೂ ಪವನ್ ಆಂಧ್ರದ ಬಾಲಯ್ಯಪಲ್ಲಿ ಮೂಲದವರಾಗಿದ್ದಾರೆ.

ಹನಮಂತನಗರ ಪೊಲೀಸರು ಕಾರ್ಯಾಚರಣೆ

ಇಬ್ಬರು ಜೊತೆ ಜೊತೆಗೆ ಓದಿ ಬೆಳೆದಿದ್ದು, ಬಿಟೆಕ್ ಪದವಿ ಮುಗಿಸಿದ ನಂತರ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಹುಟ್ಟೂರಿನಲ್ಲಿರುವ ಹಲವರಿಗೆ ತಮಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿದೆ ಅಂತ ಸುಳ್ಳು ಹೇಳುತ್ತಿದ್ದ ಆರೋಪಿಗಳು ಬೆಂಗಳೂರಿನಲ್ಲಿ ಕೆಲಸ ಸಿಗದೆ ಪರದಾಡುತ್ತಿದ್ದರು. ನಂತರ ಹುಟ್ಟೂರಿನಲ್ಲಿ ಕೊಟ್ಟ ಬಿಲ್ಡಪ್​ಗಾಗಿ ಕಳ್ಳತನದ ಹಾದಿ ಹಿಡಿದಿದ್ದರು.

ಇದನ್ನೂ ಓದಿ :Bengaluru crime: ಸಿನಿಮಾದಿಂದ ಪ್ರೇರಿತನಾಗಿ ಜ್ಯೋತಿಷಿ ಪುತ್ರನ ಅಪಹರಣ; 5 ಲಕ್ಷ ರೂ. ಬೇಡಿಕೆಯಿಟ್ಟಿದ್ದ ಕಿಡ್ನಾಪರ್​ ಬಂಧನ

ಇದಕ್ಕಾಗಿ ಯೂಟ್ಯೂಬ್​ನಲ್ಲಿ ಬೈಕ್ ಕದಿಯೋದನ್ನು ನೋಡಿ ಕರಗತ ಮಾಡಿಕೊಂಡಿದ್ದರು. ಬೆಂಗಳೂರಿನ ಹನುಮಂತನಗರ ಠಾಣಾ ವ್ಯಾಪ್ತಿಯ ಬುಲೆಟ್ ಬೈಕ್​ಗಳನ್ನು ಕದ್ದಿದ್ದ ಆರೋಪಿಗಳು ಊರಿಗೆ ತೆಗೆದುಕೊಂಡು ಹೋಗಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಹನಮಂತನಗರ ಪೊಲೀಸರು ಆಂಧ್ರಪ್ರದೇಶಕ್ಕೆ ಹೋಗಿ ಆರೋಪಿಗಳ ಬಂದಿಸಿದ್ದಾರೆ.

ಇದನ್ನೂ ಓದಿ :ಟೀ ಮಾರುವವ ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ: ಬೆಂಗಳೂರಿಗೆ ಬರುತ್ತಿದ್ದಂತೆ ಹಣಕ್ಕಾಗಿ ಪರಿಚಯಸ್ಥರಿಂದಲೇ ಕಿಡ್ನಾಪ್!

ABOUT THE AUTHOR

...view details