ಕರ್ನಾಟಕ

karnataka

ಬೆಳಗ್ಗೆ- ರಾತ್ರಿ ವೇಳೆ 15 ನಿಮಿಷಕ್ಕೊಮ್ಮೆ ನಮ್ಮ ಮೆಟ್ರೋ ರೈಲು ಸಂಚಾರ

By

Published : Aug 6, 2022, 8:27 PM IST

reduction-in-time-between-metro-train-services-in-bengaluru

ಬೆಳಗ್ಗೆ ದೂರದ ಊರಿನಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡುವಿನ ಅವಧಿ ಇಳಿಕೆ ಮಾಡಲಾಗಿದೆ.

ಬೆಂಗಳೂರು: ಮೆಟ್ರೋ ರೈಲು ಸಂಚಾರ ನಡುವಿನ ಅವಧಿ ಇಳಿಕೆ ಮಾಡುವ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಆಗಸ್ಟ್​ 8ರಿಂದ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಮತ್ತು ರಾತ್ರಿ 10 ಗಂಟೆಯಿಂದ 11 ಗಂಟೆಯವರೆಗೆ ಈಗಿನ 20 ನಿಮಿಷಗಳ ಮಧ್ಯಂತರದ ಬದಲಾಗಿ 15 ನಿಮಿಷಗಳ ಮಧ್ಯಂತರದಲ್ಲಿ ಮೆಟ್ರೋ ರೈಲುಗಳು ಚಲಿಸಲಿವೆ.

ಬೆಳಗ್ಗೆ ದೂರದ ಊರಿನಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರು ಬೆಳಗ್ಗೆ ಮೆಟ್ರೋ ರೈಲು ಟ್ರಿಪ್ ಕಡಿಮೆ ಇರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಮುಂಜಾನೆ ಹಾಗೂ ತಡರಾತ್ರಿ ಮೆಟ್ರೋ ಟ್ರಿಪ್ ಹೆಚ್ಚಿಸುವಂತೆ ಆಗ್ರಹಿಸಿದ್ದರು.

ಇದೀಗ ನಮ್ಮ ಮೆಟ್ರೋ ಸಂಚಾರ ನಡುವಿನ ಅವಧಿ ಇಳಿಕೆ ಮಾಡುವ ಮೂಲಕ ಮೆಟ್ರೋ ರೈಲು ಟ್ರಿಪ್ ಹೆಚ್ಚಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ - ಧಾರವಾಡ: ಸಂಚಾರ ನಿಯಮ ಉಲ್ಲಂಘನೆ, ಮೊಬೈಲ್ ಮೂಲಕವೇ ದಂಡ ಪಾವತಿಸಿ

ABOUT THE AUTHOR

...view details