ಕರ್ನಾಟಕ

karnataka

ರಾಜಧಾನಿಯಲ್ಲಿ ನವರಾತ್ರಿ ಸಂಭ್ರಮ.. ರಾಮಾಯಣದ ಥೀಮ್ ದಸರಾ ಗೊಂಬೆಗಳ ಪ್ರದರ್ಶನ

By

Published : Oct 3, 2022, 6:18 AM IST

Updated : Oct 3, 2022, 1:09 PM IST

Ramayana themed Dussehra puppet show
ರಾಮಾಯಣದ ಥೀಮ್ ದಸರಾ ಗೊಂಬೆಗಳ ಪ್ರದರ್ಶನ

ಭಾರತೀಯ ವಿದ್ಯಾ ಭವನದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಎಲ್ಲಾ ಗೊಂಬೆಗಳನ್ನು ರಂಗಪುತ್ಥಳಿ ತಂಡದ ಸೃಜನಶೀಲ ಕಲಾವಿದೆ ಸೌಮ್ಯ ಶ್ರೀಕಾಂತ್ ತನ್ನ ಕೈಯಿಂದ ಮಾಡಿದ್ದಾರೆ.

ಬೆಂಗಳೂರು:ನಗರದಲ್ಲಿನ ಭಾರತೀಯ ವಿದ್ಯಾಭವನದಲ್ಲಿ ದಸರಾ ಹಬ್ಬದ ಪ್ರಯುಕ್ತ ವಿಶೇಷ ಉಪನ್ಯಾಸ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಸೂತ್ರದ ಗೊಂಬೆಗಳ ಪ್ರದರ್ಶನ ಆಯೋಜಿಸಲಾಗಿದೆ.

ನವರಾತ್ರಿಯನ್ನು ವಿವಿಧ ಸಮುದಾಯಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಅನೇಕ ಕುಟುಂಬಗಳು ಗೊಂಬೆ ಹಬ್ಬವನ್ನು ಹೊಸ ಮತ್ತು ಹಳೆ ಗೊಂಬೆಗಳು ಜೋಡಿಸುವ ಮೂಲಕ ಸಂಭ್ರಮಿಸುತ್ತಾರೆ. ಇಂತಹ ಗೊಂಬೆಗಳನ್ನು, ಸಾಮಾನ್ಯವಾಗಿ ಜೇಡಿಮಣ್ಣು ಅಥವಾ ಮರದಿಂದ ತಯಾರಿಸಲಾಗಿರುತ್ತದೆ.

ರಾಮಾಯಣದ ಥೀಮ್ ದಸರಾ ಗೊಂಬೆಗಳ ಪ್ರದರ್ಶನ

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಯೊಂದಿಗೆ ಮಾಡಲಾಗುತ್ತಿದೆ. ಆದರೆ ಭಾರತೀಯ ವಿದ್ಯಾ ಭವನದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಎಲ್ಲಾ ಗೊಂಬೆಗಳನ್ನು ರಂಗಪುತ್ಥಳಿ ತಂಡದ ಸೃಜನಶೀಲ ಕಲಾವಿದೆ ಸೌಮ್ಯ ಶ್ರೀಕಾಂತ್ ತನ್ನ ಕೈಯಿಂದ ಮಾಡಿದ್ದಾರೆ. ಆಕೆ ಒಂದು ವಿಷಯವನ್ನು ತೆಗೆದುಕೊಂಡು ನಂತರ ಸೂಕ್ತವಾದ ಬಟ್ಟೆಯೊಂದಿಗೆ ಗೊಂಬೆಗಳಿಗೆ ಅಂತಿಮ ರೂಪ ಕೊಟ್ಟಿದ್ದಾರೆ. ಅನಂತರ ಬ್ಯಾಕ್ ಡ್ರಾಪ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ.

ರಾಮಾಯಣದ ಥೀಮ್ ದಸರಾ ಗೊಂಬೆಗಳ ಪ್ರದರ್ಶನ

ರಾಮಾಯಣದ ಕಥೆಯ ಥೀಮ್:ಈ ಬಾರಿ ರಾಮಾಯಣದ ಕಥೆಯೊಂದಿಗೆ ಬೊಂಬೆಗಳನ್ನು ಭಾರತಿ ವಿದ್ಯಾಭವನದಲ್ಲಿ ಜೋಡಣೆ ಮಾಡಲಾಗಿದೆ. ಪಂಚಭೂತಗಳ ಸಮೇತ ಸೀತಾರಾಮರ ಪ್ರೀತಿಯನ್ನು ಬಿಂಬಿಸುವ ಥೀಮ್, ಹನುಮಂತ, ಶಬರಿ, ಕೃಷ್ಣನಿಂದ ನರಾಕುಸುರನ ಸಂಹಾರ, ಸತ್ಯಭಾಮ ಹಾಗೂ ಕೊರವಂಜಿ, ಅಯೋಧ್ಯೆಯಲ್ಲಿ ನಡೆಯುವ ಹಬ್ಬಗಳ ಕಥೆಯನ್ನು ಗೊಂಬೆಗಳ ಮೂಲಕ ಹೊರತಂದಿದ್ದಾರೆ.

ರಾಮಾಯಣದ ಥೀಮ್ ದಸರಾ ಗೊಂಬೆಗಳ ಪ್ರದರ್ಶನ

ವೆಂಟ್ರಿಲೋಕ್ವಿಸ್ ಪ್ರದರ್ಶನ:ಪ್ರದರ್ಶನದಲ್ಲಿ ಮಾತನಾಡುವ ಗೊಂಬೆ, (ವೆಂಟ್ರಿಲೋಕ್ವಿಸ್) ಧ್ವನಿ ಕಲಾವಿದೆ, ಇಂದುಶ್ರೀ ರವೀಂದ್ರ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಡಿಂಕು ಹಾಗೂ ವಿಂಕಿ ತಾತಾ ಗೊಂಬೆಗಳಿಂದ ಗೊಂಬೆಯಾ‍ಟ ಪ್ರದರ್ಶನವನ್ನು ಪ್ರದರ್ಶಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಯುನೆಸ್ಕೋ ಫೆಲೋ ಡಾ. ಚೂಡಾಮಣಿ ನಂದಗೋಪಾಲ್, ಪತ್ರಿಕೋದ್ಯಮಿ ಹಾಗೂ ಸಾಹಿತಿ ರಾಮನಾಥ್ ಭಾರತೀಯ ವಿದ್ಯಾಭವನದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ರಾಮಾಯಣದ ಥೀಮ್ ದಸರಾ ಗೊಂಬೆಗಳ ಪ್ರದರ್ಶನ

ಇದನ್ನೂ ಓದಿ:ರಾಜವಂಶಸ್ಥರಿಂದ ಸಾಂಪ್ರದಾಯಿಕ ಸರಸ್ವತಿ ಪೂಜೆ.. ವೀರಭದ್ರ ಕುಣಿತಕ್ಕೆ ಹೆಜ್ಜೆ ಹಾಕಿದ ಸಚಿವ ಸೋಮಶೇಖರ್​

Last Updated :Oct 3, 2022, 1:09 PM IST

ABOUT THE AUTHOR

...view details