ಕರ್ನಾಟಕ

karnataka

ಬೆಂಗಳೂರು: ಟಿಟಿಡಿ ದೇವಸ್ಥಾನಕ್ಕೆ ಪುನೀತ್‌ ಅಭಿಮಾನಿಗಳ ಮುತ್ತಿಗೆ ಯತ್ನ

By

Published : Apr 29, 2022, 7:42 PM IST

ತಿರುಮಲ ದೇವಸ್ಥಾನಕ್ಕೆ ಹೋಗುವ ದ್ವಾರದಲ್ಲಿ ಪೊಲೀಸರು ಕಾರಿಗೆ ಅಂಟಿಸಿದ್ದ ಪುನೀತ್ ರಾಜ್‍ಕುಮಾರ್ ಚಿತ್ರ ತೆರವು ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಟಿಟಿಡಿ ದೇವಸ್ಥಾನಕ್ಕೆ ಮುತ್ತಿಗೆ ಪ್ರಯತ್ನ
ಬೆಂಗಳೂರಿನ ಟಿಟಿಡಿ ದೇವಸ್ಥಾನಕ್ಕೆ ಮುತ್ತಿಗೆ ಪ್ರಯತ್ನ

ಬೆಂಗಳೂರು:ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಹೋಗುವ ಮುಖ್ಯದ್ವಾರದಲ್ಲಿ ಕನ್ನಡ ಭಾವುಟಕ್ಕೆ ಹಾಗೂ ಕನ್ನಡಿಗರ ವಾಹನಗಳಿಗೆ ಅವಮಾನ ಮಾಡಲಾಗಿದೆ. ಅಲ್ಲದೇ, ಕಾರಿನ ಮೇಲಿದ್ದ ಕರ್ನಾಟಕ ರತ್ನ ದಿ.ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ತೆಗೆಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಡಾ.ರಾಜ್‌ಕುಮಾರ್ ಅಭಿಮಾನಿಗಳ ಒಕ್ಕೂಟದ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಲಾಯಿತು.


ದೇವಸ್ಥಾನದ ಗೇಟ್ ಬಳಿಯೇ ಪ್ರತಿಭಟನಾನಿರತರನ್ನು ಪೊಲೀಸರು ಹಾಗೂ ಸಿಬ್ಬಂದಿ ತಡೆದರು‌. ಇದರಿಂದ ದೇವಳದ ಸಿಬ್ಬಂದಿಯೊಂದಿಗೆ ಅಭಿಮಾನಿಗಳು ವಾಗ್ವಾದ ನಡೆಸಿದರು. ಟಿಟಿಡಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದರೆ ಸಹಿಸುವುದಿಲ್ಲ. ಜತೆಗೆ ತಿರುಪತಿಯಲ್ಲಿ ನಡೆದ ಘಟನೆ ಬಗ್ಗೆ ಒಂದು ವಾರದೊಳಗೆ ಟಿಟಿಡಿ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕು. ಒಂದು ವೇಳೆ ಸ್ಪಷ್ಟನೆ ಕೊಡದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸಾವಿರಾರು ಕಾರುಗಳ ಮೂಲಕ ಆಂಧ್ರ ಪ್ರದೇಶಕ್ಕೆ ಹೋಗಿ ಪ್ರತಿಭಟನೆ ನಡೆಸಲಾಗುವುದು. ಮುಂದೆ ಆಗೋ ಅನಾಗುತಕ್ಕೆ ಟಿಟಿಡಿವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಪರಸ್ಪರ ಹೊಡೆದಾಟವೇ ಇಲ್ಲಿಯ ಆರಾಧನಾ ಕ್ರಮ : ಇದು ಉಳ್ಳಾಕುಲು ದೈವದ ನೇಮೋತ್ಸವದ ವಿಶೇಷ

ABOUT THE AUTHOR

...view details