ಕರ್ನಾಟಕ

karnataka

ಪಲ್ಸ್ ಪೋಲಿಯೋ ಜನವರಿ 23ರಂದು ಅಲ್ಲ, ದಿನಾಂಕ ಮರುನಿಗದಿ ಮಾಡಿದ ಆರೋಗ್ಯ ಇಲಾಖೆ

By

Published : Jan 13, 2022, 7:17 PM IST

pulse polio

ಕೇಂದ್ರ ಆರೋಗ್ಯ ಇಲಾಖೆಯು ಪಲ್ಸ್ ಪೋಲಿಯೋ ಲಸಿಕೆ ನೀಡುವ ದಿನಾಂಕ ಮರು ನಿಗದಿಗೊಳಿಸಿ ಆದೇಶಿಸಿದ್ದು, ಅಭಿಯಾನದಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ.

ಬೆಂಗಳೂರು:ಪಲ್ಸ್ ಪೋಲಿಯೋ ಲಸಿಕೆ ನೀಡುವ ದಿನಾಂಕವನ್ನು ಮರುನಿಗದಿ ಮಾಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆಯು ಈ ಬಗ್ಗೆ ಆದೇಶಿಸಿದ್ದು, ಕೋವಿಡ್ ನಿಯಮ ಪಾಲಿಸಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿಸಲು ಸೂಚಿಸಲಾಗಿದೆ.

ಈ ಮೊದಲು ಜನವರಿ 23ರಂದು ನಡೆಸಲು ಯೋಜಿಸಲಾಗಿತ್ತು, ಆದರೆ ಇದೀಗ ಫೆಬ್ರವರಿ 27ರಂದು ಮರು ನಿಗದಿ ಮಾಡಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ಸೂಚನೆ

ಭಾರತವು ಈಗಾಗಲೇ ಪೋಲಿಯೋ ನಿರ್ಮೂಲನಾ ದೇಶವಾಗಿದ್ದರೂ, ಭವಿಷ್ಯದ ಮುನ್ನೆಚ್ಚರಿಕೆಯ ಉದ್ದೇಶದಿಂದ ಜ. 27ರಿಂದ ಆರಂಭವಾಗಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು. 0-5 ವರ್ಷದೊಳಗಿನ ಯಾವ ಮಕ್ಕಳೂ ಲಸಿಕೆಯಿಂದ ವಂಚಿತವಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 25,000 ಜನರಿಗೆ ಕೊರೊನಾ ದೃಢ: 1ಲಕ್ಷ ದಾಟಿತು ಸಕ್ರಿಯ ಪ್ರಕರಣಗಳ ಸಂಖ್ಯೆ!

ABOUT THE AUTHOR

...view details