ಕರ್ನಾಟಕ

karnataka

ಸಚಿವ ಸಂಪುಟ‌ ವಿಸ್ತರಣೆಗೆ ಸಿದ್ಧತೆ... ನಾಳೆ ಯಾರಿಗೆಲ್ಲಾ ಸಿಗುತ್ತೆ ಸಚಿವರಾಗೋ ಭಾಗ್ಯ?

By

Published : Feb 5, 2020, 1:14 PM IST

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ‌ ವಿಸ್ತರಣೆ ನಾಳೆ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯಲಿದೆ. 13 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

new-minister-oath-taking-ceremony
new-minister-oath-taking-ceremonynew-minister-oath-taking-ceremony

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ‌ ವಿಸ್ತರಣೆ ನಾಳೆ ನಡೆಯುತ್ತಿದ್ದು, ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸರ್ಕಾರದ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಅನುಮತಿ ಕೋರಿದ್ದು, ಅದರಂತೆ ನಾಳೆ ಬೆಳಗ್ಗೆ 10.30 ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಧಿಕೃತವಾಗಿ ರಾಜಭವನದಿಂದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಆಹ್ವಾನವನ್ನು ಕಳಿಸಿಕೊಡಲಾಗಿದೆ.

ಸಚಿವ ಸಂಪುಟ‌ ವಿಸ್ತರಣೆ

ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ಕೊಟ್ಟು ಬಂದು ಗೆದ್ದವರಲ್ಲಿ 10 ಶಾಸಕರು ಮತ್ತು ಮೂಲ ಬಿಜೆಪಿಯ ಮೂವರು ಸೇರಿ ಒಟ್ಟು 13 ಜನ ನಾಳೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸಂಭಾವ್ಯ ಸಚಿವರ ಪಟ್ಟಿ:

  • ಉಮೇಶ್ ಕತ್ತಿ
  • ಅರವಿಂದ ಲಿಂಬಾವಳಿ
  • ಸಿ.ಪಿ ಯೋಗೀಶ್ವರ್/ಹಾಲಪ್ಪ ಆಚಾರ್
  • ಸೋಮಶೇಖರ್
  • ಬೈರತಿ ಬಸವರಾಜ್
  • ಸುಧಾಕರ್
  • ಬಿ.ಸಿ.ಪಾಟೀಲ್
  • ರಮೇಶ್ ಜಾರಕಿಹೊಳಿ
  • ಆನಂದ್ ಸಿಂಗ್
  • ಶ್ರೀಮಂತ ಪಾಟೀಲ್
  • ಶಿವರಾಮ್ ಹೆಬ್ಬಾರ್
  • ನಾರಾಯಣಗೌಡ
  • ಗೋಪಾಲಯ್ಯ

ABOUT THE AUTHOR

...view details