ಕರ್ನಾಟಕ

karnataka

ಮೈಸೂರು ಬೆಂಗಳೂರು ಹೈವೇ ಕ್ರೆಡಿಟ್ ಹೆಚ್​ ಡಿ ರೇವಣ್ಣಗೆ ಸಿಗಬೇಕು: ಸಿ ಎಂ ಇಬ್ರಾಹಿಂ

By

Published : Mar 9, 2023, 9:17 PM IST

ಜೈಲು - ಬೇಲು ಇಲ್ಲದವರಿಗೆ ಜೆಡಿಎಸ್ ಟಿಕೆಟ್ ಕೊಡ್ತಾ ಇದೆ. 17ರಲ್ಲಿ ಎಷ್ಟು ಜನ ಕಾಂಗ್ರೆಸ್ ಗೆ ಹೋಗ್ತಾ ಇದ್ದಾರೆ?. ಅವರಲ್ಲಿ ಯಾರನ್ನೂ ಜೆಡಿಎಸ್ ಸೇರಿಸಿಕೊಳ್ಳಲ್ಲ ಎಂದು ಸಿ ಎಂ ಇಬ್ರಾಹಿಂ ಸ್ಪಷ್ಟನೆ.

C M Ibrahim
ಸಿ ಎಂ ಇಬ್ರಾಹಿಂ

ಬೆಂಗಳೂರು:ಮೈಸೂರು - ಬೆಂಗಳೂರು ಹೆದ್ದಾರಿ ಕ್ರೆಡಿಟ್ ಹೆಚ್.ಡಿ.ರೇವಣ್ಣಗೆ ಹೋಗಬೇಕು. ಅವರ ಚಿಂತನೆಯಿಂದಲೇ ಅದು ಆಗಿರುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು. ಬೆಂಗಳೂರಿನ‌ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮೈಸೂರು - ಬೆಂಗಳೂರು ಹೆದ್ದಾರಿ ಕ್ರೆಡಿಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದರ ಕ್ರೆಡಿಟ್ ವಾರ್ ರೇವಣ್ಣ ಅವರಿಗೆ ಹೋಗಬೇಕು. ಅವರ ಚಿಂತನೆಯಿಂದ ಆಗಿರೋದು. ಇದನ್ನು ಬಿಜೆಪಿಯವರು ಚುನಾವಣೆಗೆ ಬಳಸಿದರೆ ಒಂದು ಸೀಟು ಬರಲ್ಲ ಎಂದು ಸ್ಪಷ್ಟಪಡಿಸಿದರು.

ಸುಮಲತಾ ಬಿಜೆಪಿಗೆ ನಾರಾಯಣಗೌಡ ಕಾಂಗ್ರೆಸ್​ಗೆ:ಸಂಸದೆ ಸುಮಲತಾ ಬಿಜೆಪಿಗೆ ಸೇರುತ್ತಾರೆ ಎಂದರೆ ಸಂತೋಷ ಎಂದ ಸಿಎಂ ಇಬ್ರಾಹಿಂ ನಾರಾಯಣಗೌಡ ಕಾಂಗ್ರೆಸ್​​ಗೆ ಹೋಗ್ತಾರೆ ಅಂತಾರೆ. ನಾರಾಯಣಗೌಡ ಕೂಡ ಸಿ.ಡಿ. ಸಂಬಂಧ ಸ್ಟೇ ತೆಗೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಜೈಲು ಬೇಲೂ ಇಲ್ಲದವರಿಗೆ ಜೆಡಿಎಸ್ ಟಿಕೆಟ್: ನೈತಿಕತೆ ಈಗ ಎಲ್ಲಿ ಉಳಿದಿದೆ ಎಂದು ಪ್ರಶ್ನಿಸಿದ ಜೆಡಿಎಸ್​ ರಾಜ್ಯಾಧ್ಯಕ್ಷರು, ಜೈಲು ಬೇಲೂ ಇಲ್ಲದವರಿಗೆ ಜೆಡಿಎಸ್ ಟಿಕೆಟ್ ಕೊಡ್ತಾ ಇದೆ. 17ರಲ್ಲಿ ಎಷ್ಟು ಜನ ಕಾಂಗ್ರೆಸ್ ಗೆ ಹೋಗ್ತಾ ಇದ್ದಾರೆ?. ಇವರಲ್ಲಿ ನಾವು ಯಾರನ್ನೂ ಸೇರಿಸಿಕೊಳ್ಳಲ್ಲ. ಅವರೇ ಬಂದರೂ ನಾವು ಕರ್ಕೊಳ್ಳಲ್ಲ. ಕಾರ್ಯಕ್ರಮದ ಮೇಲೆ ಚುನಾವಣೆಗೆ ಹೋಗ್ತಾ ಇದ್ದೇವೆ. ಬಿಜೆಪಿ ಮೋದಿ ಮೇಲೆ, ಕಾಂಗ್ರೆಸ್ ಸೋನಿಯಾ ಮೇಲೆ ಚುನಾವಣೆಗೆ ಹೋಗ್ತಾ ಇದ್ದಾರೆ. ಉಚಿತ ಖಚಿತ ಅಂತಾರೆ ಯಾರಿಗೆ ಕೊಡ್ತಾರೆ ಸೊಸೆಗಾ ಅಥವಾ ಅತ್ತೆಗಾ..?. ನಮ್ಮದು ವಿಜನ್ ಕ್ಲಿಯರ್ ಆಗಿದೆ ಎಂದರು.

ಸೋಮಣ್ಣ ಕಾಂಗ್ರೆಸ್ ಗೆ ಹೋಗಲ್ಲ: ಸೋಮಣ್ಣ ಕಾಂಗ್ರೆಸ್ ಗೆ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸೋಮಣ್ಣ ಕಾಂಗ್ರೆಸ್ ಗೆ ಹೋಗಲ್ಲ. ನಾನು ಅವರ ಬಳಿ ಮಾತಾಡಿದ್ದೀನಿ. ಅವರಿಗೂ ಬಿಎಸ್​​​​ವೈಗೆ ಭಿನ್ನಾಭಿಪ್ರಾಯ ಅಷ್ಟೆ. ಅವರಿಗೂ ಇವರಿಗೂ, ವಿಜಯೇಂದ್ರಗೂ ಆಗ್ತಾ ಇಲ್ಲ ಅಷ್ಟೇ. ಆಂತರಿಕ ಸಮಸ್ಯೆ ಇದೆ ಎಂದರು. ಈಶ್ವರ್ ಖಂಡ್ರೆಗೂ ಶಾಮನೂರ್ ಅವರಿಗೂ ಒಂದು ಮತ ಬರಲಿಲ್ಲ. ಅವರ ಹೆಂಡತಿನೇ ಒಂದು ಮತ ಹಾಕಿಲ್ವೇನೋ ಗೊತ್ತಿಲ್ಲ. ಮತ ಹಾಕೋದು ಸಾಬ್ರದು, ಆದರೆ ಹೇಳೋದು ವೀರಶೈವ ಅಂತ ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ ಇಬ್ರಾಹಿಂದ ಹರಿಹಾಯ್ದರು.

ಇಂದು ನಮ್ಮ ಪ್ರತಿನಿಧಿಗಳು ಚುನಾವಣಾ ಆಯೋಗ ಮೀಟಿಂಗ್ ಹೋಗಿದ್ದಾರೆ. ಅನೇಕ‌ ಕಡೆ ಕುಕ್ಕರ್, ಸೀರೆ ಹಂಚಿದ್ದಾರೆ. ಹುಮ್ನಾಬಾದ್ ನಲ್ಲಿ ಕುಕ್ಕರ್ ಕೊಟ್ಟಿದ್ದಾರೆ. ಬ್ಲಾಸ್ಟ್ ಆಗಿ ಸಮಸ್ಯೆ ಆಗಿದೆ. ಇದನ್ನು ಪೊಲೀಸರು ಸರಿಯಾಗಿ ಪರಿಗಣಿಸಬೇಕು. ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಕ್ರಮ ಆಗದೇ ಹೋದರೆ ಹುಮ್ನಾಬಾದ್ ಡಿಸಿ ಕಚೇರಿ‌ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದರು.

ಎರಡನೇ ಪಟ್ಟಿ ಬಗ್ಗೆ ಚರ್ಚೆ ಆಗ್ತಾ ಇದೆ: ಎರಡನೇ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದ ಟಿಕೆಟ್ ರಿಲೀಸ್ ಆಗಲಿ ಅಂತ ಹೇಳಿದ್ದೇವೆ. ಚರ್ಚೆ ಇನ್ನೂ ಮುಗಿದಿಲ್ಲ, ಹಾಗಾಗಿ ಪಟ್ಟಿ ರಿಲೀಸ್ ಫೈನಲ್ ಆಗಿಲ್ ಅಪ್ಲಿಕೇಷನ್ ಫೀಸ್ ಒಂದು ಲಕ್ಷ ಮಾಡಿದ್ದೇವೆ. 50 ಸಾವಿರ ರೂ. ದಲಿತ ಅಭ್ಯರ್ಥಿಗಳಿಗೆ ಮಾಡಿದ್ದೇವೆ. ಕುರುಬ ನಾಯಕರು ಇದ್ದೇ ಇದ್ದಾರೆ. ಜಿಲ್ಲೆಗೊಂದು ತಾಲೂಕಿಗೊಂದು ಅಂತೇನಿಲ್ಲ. ಸಾಮಾಜಿಕ ನ್ಯಾಯ ಮನಸ್ಸಿನಲ್ಲಿ ಇಟ್ಟುಕೊಂಡು ಮಾಡ್ತಾ ಇದ್ದೇವೆ ಎಂದರು.

ಇದನ್ನೂಓದಿ:170 ಕ್ಷೇತ್ರದ ಅಭ್ಯರ್ಥಿಗಳ ಕುರಿತು ಚರ್ಚೆ ಮಾಡಲಾಗಿದ್ದು, 50 ಕ್ಷೇತ್ರಗಳಷ್ಟೇ ಬಾಕಿ ಇದೆ: ಡಿಕೆಶಿ

ABOUT THE AUTHOR

...view details