ಕರ್ನಾಟಕ

karnataka

ಆಮ್ ಆದ್ಮಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಆಯ್ಕೆ

By

Published : Jul 13, 2023, 6:58 AM IST

ಆಮ್ ಆದ್ಮಿ ಪಕ್ಷದ (ಎಎಪಿ) ನೂತನ ರಾಜ್ಯಾಧ್ಯಕ್ಷರಾಗಿ ಹಿರಿಯ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರನ್ನು ನೇಮಕ ಮಾಡಲಾಗಿದೆ.

mukhyamantri chandru
ಮುಖ್ಯಮಂತ್ರಿ ಚಂದ್ರು

ನವದೆಹಲಿ/ಬೆಂಗಳೂರು : ರಾಜ್ಯದ ಹೆಸರಾಂತ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರನ್ನು ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ದೆಹಲಿಯಲ್ಲಿ ಈ ಘೋಷಣೆ ಮಾಡಿದ್ದಾರೆ. ಇವರೊಂದಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬಿ.ಟಿ.ನಾಗಣ್ಣ ಹಾಗೂ ಅರ್ಜುನ್ ಪರಪ್ಪ ಹಲಗಿಗೌಡರ್ ಅವರನ್ನು ನೇಮಿಸಲಾಗಿದೆ. ಪಕ್ಷದ ಈ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿ ರೆಡ್ಡಿ ಅವರಿಗೆ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಹೊಣೆ ವಹಿಸಲಾಗಿದೆ.

ಆಮ್ ಆದ್ಮಿ ಪಕ್ಷದ ಪ್ರಕಟಣೆ

ಇದನ್ನೂ ಓದಿ :ಮೀಸಲಾತಿ ಪರಿಷ್ಕರಣೆ, ಮೂಗಿಗೆ ತುಪ್ಪ ಸವರುವ ಕೆಲಸವನ್ನು ಬಿಜೆಪಿ ಮಾಡಿದೆ: ಮುಖ್ಯಮಂತ್ರಿ ಚಂದ್ರು

ಈ ಕುರಿತು ಟ್ವೀಟ್​ ಮಾಡಿರುವ ಪೃಥ್ವಿ ರೆಡ್ಡಿ, "ನಮ್ಮ ನೂತನ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕರ್ನಾಟಕದ ಜನರ ಪ್ರೀತಿ ಗಳಿಸಿದ ನಿಸ್ವಾರ್ಥ, ಬದ್ಧತೆಯ ವ್ಯಕ್ತಿ. ಆಮ್ ಆದ್ಮಿ ಪಕ್ಷ ಮತ್ತು ನಮ್ಮ ರಾಜ್ಯದ ಜನತೆಗೆ ಅವರು ಬಹುದೊಡ್ಡ ಆಸ್ತಿ" ಎಂದಿದ್ದಾರೆ. ಇದರ ಜೊತೆಗೆ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಬಿ.ಟಿ.ನಾಗಣ್ಣ ಮತ್ತು ಅರ್ಜುನ್ ಹಲಗಿಗೌಡರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :'ನಮ್ಮ ಜನಪರ ಕಾರ್ಯಗಳನ್ನು ಬಿಜೆಪಿ, ಕಾಂಗ್ರೆಸ್ ಕಾಪಿ ಹೊಡೆಯುತ್ತಿದೆ': ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿ ಚಂದ್ರು ಅವರು 1985 ರಿಂದ 1989ರ ಅವಧಿಯಲ್ಲಿ ಗೌರಿಬಿದನೂರು ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. 1998ರಿಂದ 2010ರ ಅವಧಿಗೆ ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 2008ರಿಂದ 2014ರ ಅವಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಟ, ರಂಗಭೂಮಿ ಕಲಾವಿದರಾಗಿ ಸಾಕಷ್ಟು ಹೆಸರು ಮಾಡಿದ್ದ ಮುಖ್ಯಮಂತ್ರಿ ಚಂದ್ರು, ಅನೇಕ ಧಾರವಾಹಿಗಳಲ್ಲಿಯೂ ಅಭಿನಯಿಸುವ ಮೂಲಕ ಮನೆಮಾತಾದವರು.

ಇದನ್ನೂ ಓದಿ :ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಹುಟ್ಟುಹಾಕಿದೆ: ಮುಖ್ಯಮಂತ್ರಿ ಚಂದ್ರು

ABOUT THE AUTHOR

...view details