ಕರ್ನಾಟಕ

karnataka

ಮೃತ್ಯು ಕೂಪಗಳಾದ ರಾಜಧಾನಿ ರಸ್ತೆಗಳು: 2 ವರ್ಷಗಳಲ್ಲಿ ಗುಂಡಿಗಳಿಂದ ಸಾವನ್ನಪ್ಪಿದವರ ಸಂಖ್ಯೆ ದ್ವಿಗುಣ

By

Published : Feb 7, 2022, 7:54 PM IST

ರಾಜಧಾನಿ ಬೆಂಗಳೂರಲ್ಲಿ ಗುಂಡಿಗಳಿಂದ ಕೂಡಿದ ರಸ್ತೆಗಳು ಹೆಚ್ಚಾಗಿದ್ದು, ಸಾವಿನ ಪ್ರಕರಣಗಳು ವರದಿಯಾಗುತ್ತಿರುವೆ. ಬಿಬಿಎಂಪಿ ಅಂಕಿ - ಅಂಶದ ಪ್ರಕಾರ ರಸ್ತೆಯಲ್ಲಿನ ಗುಂಡಿಗಳಿಂದ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡು ವರ್ಷಗಳಲ್ಲಿ ಹೆಚ್ಚಾಗಿವೆ.

BBMP
ಬಿಬಿಎಂಪಿ

ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ಕಳೆದೆರಡು ವರ್ಷಗಳಿಂದ ರಸ್ತೆಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪಿದವರ ಸಂಖ್ಯೆ ದ್ವಿಗುಣವಾಗಿದೆ. ಪಾಲಿಕೆಯ ಅಂಕಿ- ಅಂಶಗಳಿಂದ ಆತಂಕಕಾರಿ ವಿಚಾರ ಹೊರ ಬಿದ್ದಿದೆ. ರಸ್ತೆ ಗುಂಡಿಗಳಿಂದ ಏಳು ಮಂದಿ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆ ದ್ವಿಗುಣಗೊಂಡಿದೆ. ಒಟ್ಟು ಹತ್ತು ಸವಾರರು ಮೃತಪಟ್ಟಿದ್ದಾರೆ ಎಂದು ಪಾಲಿಕೆ ತಿಳಿಸಿದೆ.

ಬೆಂಗಳೂರಿನ ಎಂಟು ವಲಯಗಳಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ವಿವರ:

ಪೂರ್ವ ವಲಯದಲ್ಲಿ -3,078

ಪಶ್ಚಿಮ ವಲಯದಲ್ಲಿ - 2,295

ದಕ್ಷಿಣ ವಲಯದಲ್ಲಿ - 931

ಬೊಮ್ಮನಹಳ್ಳಿ ವಲಯದಲ್ಲಿ -1,025

ದಾಸರಹಳ್ಳಿ ವಲಯದಲ್ಲಿ- 576

ಮಹಾದೇವಪುರ ವಲಯದಲ್ಲಿ- 625

ಆರ್​ಆರ್​ ನಗರ ವಲಯದಲ್ಲಿ- 2,792

ಯಲಹಂಕ ವಲಯದಲ್ಲಿ- 363

ಈ ಮೇಲಿನ ವಲಯಗಳಲ್ಲಿ ಒಟ್ಟು 11,685 ಗುಂಡಿ ಬಿದ್ದ ರಸ್ತೆಗಳಿವೆ. ಈ ಪೈಕಿ 9,927 ಗುಂಡಿ ಬಿದ್ದ ರಸ್ತೆಗಳ ಮೇಲೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ಉಳಿದ 1,758 ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಅಗತ್ಯವಿದೆ ಎಂದು ಪಾಲಿಕೆ ಹೇಳಿದೆ.

ಹೈಕೋರ್ಟ್​​​​​​​​​​​​ನಲ್ಲಿ ವಿಚಾರಣೆ:ಈ ವಿಚಾರದ ಕುರಿತು ಹೈಕೋರ್ಟ್​​​​​​​ನಲ್ಲಿ ವಿಚಾರಣೆ ನಡೆದಿದ್ದು, ಬಿಬಿಎಂಪಿಗೆ ಖಡಕ್ ಆದೇಶ ನೀಡಿತ್ತು. ಗುಂಡಿ ಮುಚ್ಚಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವಿವರ ನೀಡುವಂತೆ ಸೂಚನೆಯನ್ನೂ ನೀಡಿದೆ.

ಸಮರ್ಪಕ ಉತ್ತರ ನೀಡದ ಪಾಲಿಕೆ:ಬೆಂಗಳೂರಿನಲ್ಲಿರುವ ಗುಂಡಿಗಳನ್ನು ಮುಚ್ಚಲು ಏನು ಕ್ರಮ ತೆಗೆದುಕೊಂಡಿದ್ದೀರಿ, ಇದಕ್ಕೆ ಶಾಶ್ವತ ಪರಿಹಾರವಾಗಿ ಉತ್ತಮ ತಂತ್ರಜ್ಞಾನ ಬಳಕೆ ಮಾಡಬಹುದಲ್ಲವೇ ಎಂಬ ಪ್ರಶ್ನೆ ಹೈಕೋರ್ಟ್ ಕೇಳಿತ್ತು. ಆದರೆ ಈ ಪ್ರಶ್ನೆಗೆ ಬಿಬಿಎಂಪಿ ಸಮರ್ಪಕವಾದ ಉತ್ತರವನ್ನೇ ನೀಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಸಮವಸ್ತ್ರ ಸಂಹಿತೆ ಕಡ್ಡಾಯ ಸುತ್ತೋಲೆ : ಕ್ಯಾಂಪಸ್ ಫ್ರಂಟ್ ಹಾಗೂ ನ್ಯಾಷನಲ್ ವುಮನ್ಸ್ ಫ್ರಂಟ್​​ನಿಂದ ವಿರೋಧ

ABOUT THE AUTHOR

...view details