ಕರ್ನಾಟಕ

karnataka

'ಕಾಂಗ್ರೆಸ್ ನಾಯಕರಿಗೆ ತಪ್ಪಿನ ಅರಿವಾಗಿದೆ, ಪಾದಯಾತ್ರೆ ಕೈಬಿಟ್ಟಿರುವುದು ಸಂತೋಷ'

By

Published : Jan 13, 2022, 5:23 PM IST

minister-ashwath-narayan

ಮೇಕೆದಾಟು ಕುಡಿಯುವ ನೀರು ಎಲ್ಲರಿಗೂ ಬೇಕಾಗಿದೆ. ರಾಜ್ಯದ ನೆಲ, ಜಲದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಸೇರುತ್ತೇವೆ. ಆದರೆ, ರಾಜಕೀಯ ಲಾಭಕ್ಕಾಗಿ ಮಾಡಿದ ಈ ಪಾದಯಾತ್ರೆಗೆ ಸೂಕ್ತ ಸಮಯ, ಸಂದರ್ಭ ಇದಾಗಿರಲಿಲ್ಲ ಎಂದು ಸಚಿವ ಅಶ್ವತ್ಥ್‌ ನಾರಾಯಣ ಹೇಳಿದರು.

ಬೆಂಗಳೂರು: ತಪ್ಪಿನ ಅರಿವಾಗಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿರುವುದು ಸಂತೋಷ ತಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮ್ಮ ತಪ್ಪಿನ ಅರಿವಾಗಿ ಇಂದು ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿದ್ದಾರೆ. ಈ ಮುಖೇನ ಅವರು ಸೂಕ್ತವಾದ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು.

ಮೇಕೆದಾಟು ಕುಡಿಯುವ ನೀರು ಎಲ್ಲರಿಗೂ ಬೇಕಾಗಿದೆ. ರಾಜ್ಯದ ನೆಲ, ಜಲದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಸೇರುತ್ತೇವೆ. ಆದರೆ, ರಾಜಕೀಯ ಲಾಭಕ್ಕಾಗಿ ಮಾಡಿದ ಈ ಪಾದಯಾತ್ರೆಗೆ ಸೂಕ್ತ ಸಮಯ, ಸಂದರ್ಭ ಇದಾಗಿರಲಿಲ್ಲ. ಮೇಕೆದಾಟು ಯೋಜನೆ ಯಾರೂ ಬೇಡ ಎಂದು ಹೇಳಿರಲಿಲ್ಲ, ವಿರೋಧವನ್ನೂ ಮಾಡಿರಲಿಲ್ಲ. ನಮಗೂ ಯೋಜನೆ ಆಗುವುದು ಮುಖ್ಯ ಎಂದು ಹೇಳಿದರು.


ಹೈಕೋರ್ಟ್ ಕೂಡಾ ಈ ವಿಚಾರವನ್ನು ಕೈಗೆತ್ತಿಕೊಂಡಿತ್ತು. ಈ ಕುರಿತು ಕೋರ್ಟ್, ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಸ್ಪಷ್ಟನೆ ಕೇಳಿತ್ತು‌‌. ಪಾದಯಾತ್ರೆಗೆ ನಾವು ಯಾವುದೇ ಅನುಮತಿ ಕೊಟ್ಟಿರಲಿಲ್ಲ. ನೀವು ಏನು ಮಾಡುತ್ತಿರೋ ಮಾಡಿ, ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಕಾನೂನಿನ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ.

ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಜೊತೆಗೆ, ಪಾದಯಾತ್ರೆಯಲ್ಲಿ ಭಾಗವಹಿಸಿರುವ ಜಿಲ್ಲೆಗಳಲ್ಲೂ ಕೋವಿಡ್ ಟೆಸ್ಟ್ ಮಾಡುತ್ತೇವೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹಲವಾರು ಕಾಂಗ್ರೆಸ್ ನಾಯಕರಿಗೆ ಕೋವಿಡ್ ಬಂದಿದೆ. ಅದನ್ನು ಆ ನಾಯಕರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂಓದಿ:ಸರ್ಕಾರಿ ಎಂಜಿನಿಯರಿಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಫ್ಯೂಚರ್ ಡಿಜಿಟಲ್ ಜಾಬ್ಸ್​​ಗೆ ಸಚಿವರಿಂದ ಚಾಲನೆ

TAGGED:

ABOUT THE AUTHOR

...view details