ಕರ್ನಾಟಕ

karnataka

ರಿಕ್ಷಾದಲ್ಲಿ ಸ್ಫೋಟಕ ಪ್ರಕರಣ: ಗುಪ್ತಚರ ವೈಫಲ್ಯವಾಗಿಲ್ಲ.. ವೇದವ್ಯಾಸ ಕಾಮತ್

By

Published : Nov 20, 2022, 6:29 PM IST

ಈ ಘಟನೆಯಿಂದ ಮಂಗಳೂರಿನಲ್ಲಿ ಎನ್​ಐಎ ಘಟಕ ಮಾಡುವಂತೆ ಮತ್ತಷ್ಟು ಒತ್ತಾಯ ಮಾಡಲಿದ್ದೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

Etv Bharat
ವೇದವ್ಯಾಸ ಕಾಮತ್

ಮಂಗಳೂರು(ದಕ್ಷಿಣ ಕನ್ನಡ): ಇಲ್ಲಿನ ಗರೋಡಿ ಬಳಿ ರಿಕ್ಷಾದಲ್ಲಿ ನಡೆದ ಸ್ಫೋಟಕ ಪ್ರಕರಣ ವಿಚಾರದಲ್ಲಿ ಗುಪ್ತಚರ ಇಲಾಖೆ ವೈಫಲ್ಯವಾಗಿಲ್ಲ. ಏಕಾಂಗಿಯಾಗಿ ಬಂದು ಈ ಕೃತ್ಯವೆಸಗಲಾಗಿದೆ. ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ‌ ಸರ್ಕಾರ ವ್ಯವಸ್ಥೆ ಮಾಡುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಗುಪ್ತಚರ ವೈಫಲ್ಯವಾಗಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದರು

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಎನ್​ಐಎ ಘಟಕ ಸ್ಥಾಪಿಸಬೇಕೆಂದು ರಾಜ್ಯ ವಿಧಾನಸಭೆಯಲ್ಲಿ ಆಗ್ರಹಿಸಿದ್ದೇನೆ. ಮಂಗಳೂರು ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶ. ಇಂತಹ ಅಹಿತಕರ ಘಟನೆ ನಡೆದಾಗ ಅವರು ಕೇರಳ ರಾಜ್ಯಕ್ಕೆ ಹೋಗುವುದು. ಕೇರಳ ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆ ನಡೆಸಿ ಇಲ್ಲಿಗೆ ಬರುವುದು ನಡೆಯುತ್ತಿರುತ್ತದೆ. ಇದೀಗ ನಡೆದಿರುವ ಘಟನೆಯಿಂದ ಎನ್​ಐಎ ಘಟಕ ಮಾಡುವಂತೆ ಮತ್ತಷ್ಟು ಒತ್ತwಡ ತರುತ್ತೇವೆ ಎಂದರು.

ಇದನ್ನೂ ಓದಿ :ಪೊಲೀಸ್​ ವಿಚಾರಣೆ ಎದುರಿಸಿದ ಹುಬ್ಬಳ್ಳಿಯ ಪ್ರೇಮ್​ರಾಜ್.. ಮಂಗಳೂರಲ್ಲಿ ಸಿಕ್ಕಿರುವ ಆಧಾರ್​ ಕಾರ್ಡ್​ ಬಗ್ಗೆ ಸ್ಪಷ್ಟನೆ

ABOUT THE AUTHOR

...view details