ಕರ್ನಾಟಕ

karnataka

ರಾಜ್ಯದಲ್ಲಿಂದು 109 ಮಂದಿಗೆ ಕೋವಿಡ್ ಸೋಂಕು ದೃಢ.. ಇಬ್ಬರು ಸಾವು

By

Published : Mar 20, 2022, 9:20 PM IST

Karnataka COVID update: ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ ದರ 0.39% ರಷ್ಟಿದೆ. ಇತ್ತ 143 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,02,640 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1995 ರಷ್ಟಿದೆ. ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,037 ಏರಿಕೆ ಕಂಡಿದೆ.

corona test
ಕೊರೊನಾ ಟೆಸ್ಟ್

ಬೆಂಗಳೂರು: ರಾಜ್ಯದಲ್ಲಿಂದು 27,838 ಜನರಿಗೆ ಕೋವಿಡ್​ ಪರೀಕ್ಷೆ ನಡೆಸಿದ್ದು, ಅದರಲ್ಲಿ 109 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,44,714 ಕ್ಕೆ ಏರಿಕೆ ಆಗಿದೆ.‌

ಪಾಸಿಟಿವ್ ದರವೂ 0.39% ರಷ್ಟಿದೆ. ಇತ್ತ 143 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 39,02,640 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1995 ರಷ್ಟಿದೆ. ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,037 ಏರಿಕೆ ಕಂಡಿದೆ.

ಡೆತ್ ರೇಟ್​ 1.83% ರಷ್ಟಿದೆ. ವಿಮಾನ ನಿಲ್ದಾಣದಿಂದ 3,312 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 91 ಮಂದಿಗೆ ಸೋಂಕು ತಗುಲಿದ್ದು, 17,81,007 ಕ್ಕೆ ಏರಿಕೆ ಆಗಿದೆ. 125 ಮಂದಿ ಡಿಸ್ಚಾರ್ಜ್​ ಆಗಿದ್ದು, ಈವರೆಗೆ 17,62,349ಕ್ಕೆ ಏರಿಕೆ‌ ಕಂಡಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 16,951 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,706 ಕ್ಕೆ ತಲುಪಿದೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್..

ಅಲ್ಪಾ- 156

ಬೀಟಾ-08

ಡೆಲ್ಟಾ ಸಬ್​​ಲೈನೇಜ್- 4619

ABOUT THE AUTHOR

...view details