ETV Bharat / state

ಗತವೈಭವ ಮರುಕಳಿಸಿ, ಪಂಡಿತರು ಮತ್ತೆ ಸ್ವಸ್ಥಾನಕ್ಕೆ ತೆರಳುವಂತಾಗಲಿ: ಪೇಜಾವರ ಶ್ರೀ

author img

By

Published : Mar 20, 2022, 8:39 PM IST

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಮತ್ತು ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ತಮ್ಮ 35 ಜನ ಶಿಷ್ಯರೊಂದಿಗೆ ಕಾಶ್ಮೀರ್​ ಫೈಲ್ಸ್ ಸಿನಿಮಾ ವೀಕ್ಷಣೆ ಮಾಡಿದರು.

Udupi Math pejavra Shree Watching Kashmiri Files Cinema
ಉಡುಪಿ ಮಠದ ಶ್ರೀಗಳಿಂದ ಕಾಶ್ಮೀರಿ ಫೈಲ್ಸ್​ ಸಿನಿಮಾ ವೀಕ್ಷಣೆ

ಉಡುಪಿ: ಕಾಶ್ಮೀರಿ ಪಂಡಿತರ ಸಂಕಟಗಳನ್ನು ಎಳೆಯಾಗಿ ಬಿಚ್ಚಿಟ್ಟಿರುವ ದಿ ಕಾಶ್ಮೀರ್​ ಫೈಲ್ಸ್ ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಮುಗಿಬಿದ್ದು ಹೋಗುತ್ತಿದ್ದಾರೆ. ಕೇವಲ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲ, ಗಣ್ಯರು ಮತ್ತು ಸಂತರನ್ನು ಕೂಡ ಈ ಸಿನಿಮಾ ಆಕರ್ಷಿಸಿದೆ.

ಉಡುಪಿ ಮಠದ ಶ್ರೀಗಳಿಂದ ಕಾಶ್ಮೀರಿ ಫೈಲ್ಸ್​ ಸಿನಿಮಾ ವೀಕ್ಷಣೆ

ಮಣಿಪಾಲದ ಚಿತ್ರ ಮಂದಿರದಲ್ಲಿ ಅಷ್ಟಮಠಾಧೀಶರಲ್ಲಿ ಒಬ್ಬರಾದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರೊಂದಿಗೆ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಇಂದು ಸಿನಿಮಾ ವೀಕ್ಷಿಸಿದರು.

35ಜನ ಶಿಷ್ಯರೊಂದಿಗೆ ಶನಿವಾರ ರಾತ್ರಿ ಕೊನೆಯ ಪ್ರದರ್ಶನಕ್ಕೆ ಯತಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು.

ಈ ಹಿಂದೆ ಉರಿ ಚಲನಚಿತ್ರ ಬಿಡುಗಡೆಯಾದಾಗ ಪೇಜಾವರ ಮಠದ ಹಿರಿಯ ಯತಿಗಳಾದ ಕೀರ್ತಿಶೇಷ ವಿಶ್ವೇಶತೀರ್ಥರು ತಮ್ಮ ಶಿಷ್ಯರೊಂದಿಗೆ ಸಿನಿಮಾ ನೋಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಗಂಗಾವತಿಯ ಓಕುಳಿಯ ಚಿತ್ರಗಳನ್ನು ಶೇರ್ ಮಾಡಿದ ದಿ ಕಾಶ್ಮೀರಿ ಫೈಲ್ಸ್ ಚಿತ್ರತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.