ಕರ್ನಾಟಕ

karnataka

ಬೆಂಗಳೂರು ಉಸ್ತುವಾರಿ ಸಂಬಂಧ ಎಲ್ಲರ ಜತೆ ಚರ್ಚಿಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವೆ : ಸಿಎಂ ಬೊಮ್ಮಾಯಿ

By

Published : Oct 9, 2021, 8:14 PM IST

Updated : Oct 9, 2021, 8:29 PM IST

CM Bommai
ಸಿಎಂ ಬಸವರಾಜ ಬೊಮ್ಮಾಯಿ

ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಂಗಳೂರು ‌ಬಹಳ ಮಹತ್ವದ್ದಾಗಿದೆ. ಉಸ್ತುವಾರಿ ಸಚಿವರ ನೇಮಕ ಸಂಬಂಧ ಎಲ್ಲರ ಜೊತೆ ಚರ್ಚೆ ನಡೆಸುತ್ತೇನೆ. ಎಲ್ಲರೂ ನಮ್ಮವರೇ ಇದ್ದಾರೆ. ಯಾವುದೇ ರೀತಿಯ ತೊಂದರೆ ಆಗದ ರೀತಿ ನಿರ್ಧಾರ ಮಾಡ್ತೇನೆ..

ಬೆಂಗಳೂರು :ಬೆಂಗಳೂರು ‌ನಗರ ಬಹಳ ಮಹತ್ವದ್ದಾಗಿದೆ. ಯಾರಿಗೆ ಉಸ್ತುವಾರಿ ನೀಡಬೇಕು ಅನ್ನೋದರ ಸಂಬಂಧ ಎಲ್ಲರ ಜೊತೆ ಚರ್ಚಿಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನದ ಕುರಿತಂತೆ ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿರುವುದು..

ದೆಹಲಿಯಿಂದ‌ ಮರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಂಗಳೂರು ‌ಬಹಳ ಮಹತ್ವದ್ದಾಗಿದೆ. ಉಸ್ತುವಾರಿ ಸಚಿವರ ನೇಮಕ ಸಂಬಂಧ ಎಲ್ಲರ ಜೊತೆ ಚರ್ಚೆ ನಡೆಸುತ್ತೇನೆ. ಎಲ್ಲರೂ ನಮ್ಮವರೇ ಇದ್ದಾರೆ. ಯಾವುದೇ ರೀತಿಯ ತೊಂದರೆ ಆಗದ ರೀತಿ ನಿರ್ಧಾರ ಮಾಡ್ತೇನೆ ಎಂದರು.

ಕ್ಯಾಬಿನೆಟ್​ ವಿಸ್ತರಣೆ :ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಆದರೆ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡೋಕೆ ಪ್ರಯತ್ನ ಮಾಡಿದೆ. ಆದರೆ, ಅವರು ಬೇರೆ ಕಾರ್ಯಕ್ರಮದಲ್ಲಿದ್ದ ಕಾರಣ ಅವರ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದರು.

ಕಲ್ಲಿದ್ದಲು ಕೊರತೆಯಾಗದಂತೆ ಭರವಸೆ :ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕಲ್ಲಿದ್ದಲ್ಲು ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಕೇಂದ್ರ ಗಣಿ ಸಚಿವರನ್ನು ಭೇಟಿ ಮಾಡಿದ್ದೇನೆ. ನಮ್ಮ ಬೇಡಿಕೆ ಏನಿದೆ ಎಂದು ಅವರ ಬಳಿ ಹೇಳಿದ್ದೇವೆ. ನಮಗೆ 10 ರ್ಯಾಕ್ ಕಲ್ಲಿದ್ದಲು ಬರುತ್ತಿದೆ.

ಅದನ್ನು 14 ರ್ಯಾಕ್​ಗೆ ಏರಿಕೆ ಮಾಡಿದರೆ ಕೊರತೆ ನೀಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಮೂರು ಮೈನಿಂಗ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಲಸಿಕೆ ವಿಚಾರ :ಕೋವಿಡ್ ಲಸಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲನೇ ಡೋಸ್ ಈಗಾಗಲೇ ಶೇ.81 ರಷ್ಟಾಗಿದೆ. ನಮ್ಮ ಗುರಿ ಡಿಸೆಂಬರ್ ಒಳಗೆ ಶೇ.90 ರಷ್ಟು ಕಂಪ್ಲೀಟ್ ಮಾಡಬೇಕು. ಅದಕ್ಕೆ ಕೇಂದ್ರ ಆರೋಗ್ಯ ಸಚಿವರು ಸಹಕಾರ ಕೊಡ್ತೀನಿ ಎಂದಿದ್ದಾರೆ. ಇದೇ ರೀತಿ 2ನೇ ಡೋಸ್ ಕೂಡ ಶೇ.38ರಷ್ಟಿದೆ. ಅದನ್ನು ಶೇ.70ಕ್ಕೆ ಹೆಚ್ಚಿಸಬೇಕು. ರಾಜ್ಯದ ಜನಸಂಖ್ಯೆಯನ್ನು ವ್ಯಾಕ್ಸಿನೇಷನ್‌ನಡಿ ತರಬೇಕು. ಅದು ಕೂಡ ಈ ವರ್ಷದ ಅಂತ್ಯದಲ್ಲಿ ತರಬೇಕೆಂಬ ಪ್ಲ್ಯಾನ್ ಇದೆ. ಈಗಾಗಲೇ ಸಪೋರ್ಟ್ ಮಾಡ್ತಾ ಇದ್ದಾರೆ. ಮುಂದೆ ಕೂಡ ಸಪೋರ್ಟ್ ಮಾಡ್ತಾರೆ ಎಂದರು.

ರಸಗೊಬ್ಬರ ಪೂರೈಕೆ :10 ಸಾವಿರ ಮೆಟ್ರಿಕ್ ಟನ್ MOP ಪೂರೈಕೆಗೆ ಕೇಂದ್ರ ರಸಗೊಬ್ಬರ ಸಚಿವರ ಭೇಟಿಯಾಗಿ ಮನವಿ ಮಾಡಲಾಗಿದೆ. ಇದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆ. ಒಂದು ವಾರದೊಳಗೆ ಅದನ್ನು ಪೂರೈಕೆ ಮಾಡೋದಾಗಿ ಭರವಸೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: ಯಾರಿಗೇ ಬೆಂಗಳೂರು ಉಸ್ತುವಾರಿ ಕೊಟ್ರು ಅವರ ಜತೆ ಕೆಲಸ ಮಾಡ್ತೀನಿ.. ಸಚಿವ ಆರ್.ಅಶೋಕ್

ಇದನ್ನೂ ಓದಿ: ಬೆಂಗಳೂರು ಉಸ್ತುವಾರಿಗೆ ಪೈಪೋಟಿ: ನಾನು ಸೀನಿಯರ್; ನನ್ನನ್ನೂ ಪರಿಗಣಿಸಬೇಕೆಂದ ಸಚಿವ ವಿ ಸೋಮಣ್ಣ

Last Updated :Oct 9, 2021, 8:29 PM IST

ABOUT THE AUTHOR

...view details