ಕರ್ನಾಟಕ

karnataka

ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ?: ಸರ್ಕಾರಕ್ಕೆ ಹೆಚ್​ಡಿಕೆ ಸವಾಲ್​

By

Published : Jul 4, 2023, 4:01 PM IST

ಕಾಂಗ್ರೆಸ್ ನವರು ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

h-d-kumaraswamy-challenge-to-the-state-government-for-transfer-scam
ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ: ಸರ್ಕಾರಕ್ಕೆ ಹೆಚ್​ಡಿಕೆ ಸಾವಲು

ಬೆಂಗಳೂರು: ಕುಮಾರಸ್ವಾಮಿಗೆ ತಾಕತ್ತು ಇರೋದ್ರಿಂದ ದಾಖಲೆ ಬಿಡುಗಡೆ ಮಾಡುತ್ತೇನೆ. ನಾನು ದಾಖಲೆ ಕೊಟ್ಟರೆ ಆ ಮಂತ್ರಿಯನ್ನು ವಜಾ ಮಾಡ್ತೀರಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಕೊಡೋ ದಾಖಲೆ ನೋಡಿ ಸಚಿವರಿಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಾ? ಅಂತ ಮೊದಲು ಅವರು ಹೇಳಲಿ. ಆ ಸಚಿವರನ್ನು ವಜಾ ಮಾಡುವ ತಾಕತ್ತು ನಿಮಗೆ ಇದ್ಯಾ?. ವಿಧಾನಸೌದದಲ್ಲಿ ದಾಖಲೆ ಇಡುತ್ತೇನೆ. ದಾಖಲೆ ಕೊಟ್ಟರೆ ನಿಮ್ಮ ಸರ್ಕಾರ ಇರುತ್ತಾ? ಎಂದು ಪ್ರಶ್ನಿಸಿದರು.

ಕಳೆದ ಎರಡು ವರ್ಷದಿಂದ ಒಂದು ದಾಖಲೆ ನೀಡಿಲ್ಲ. ಪ್ರತಿನಿತ್ಯ ತನಿಖೆ ಅಂತ ಹೇಳುತ್ತಿದ್ದಾರೆ. ಇನ್ನು ಹನಿಮೂನ್ ಪಿರಿಯಡ್ ಅಂತ ಹೇಳ್ತಾರೆ ಕಾಂಗ್ರೆಸ್‌ ನವರು. ದಾಖಲೆ ಕೊಡ್ತಿನಿ ತನಿಖೆ ಮಾಡೋ ಧಮ್ ನಿಮಗೆ ಇದ್ಯಾ?. ನನ್ನ ಕಾಲದಲ್ಲಿ ನಡೆದ ವರ್ಗಾವಣೆಯನ್ನು ತನಿಖೆ ಮಾಡಲಿ. ಕಾಂಗ್ರೆಸ್ ನವರು ಹಗಲು ದರೋಡೆಗೆ ಇಳಿದಿದ್ದಾರೆ. ವರ್ಗಾವಣೆ ದಂಧೆಗೆ ಹಣ ನಿಗದಿ ಮಾಡಿದ್ದೀರಾ ಅಂತ ಗೊತ್ತು. ಟೈಮ್ ಬಂದಾಗ ದಾಖಲೆ ಕೊಡುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರಾ ಇಲ್ಲವೋ ಅನ್ನೋದು ಗೊತ್ತಿಲ್ಲ. ಕೆಲವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಅಂತ ಹೇಳ್ತಾರೆ. ಈಗಾಗಲೇ ಡಿ. ಕೆ ಶಿವಕುಮಾರ್​ ಕೂಡ ಟಾವೆಲ್ ಹಾಕಿದ್ದಾರೆ. ಯಾರು ಸಿಎಂ ಆಗ್ತಾರೆ ಅಂತ ಗೊತ್ತಿಲ್ಲ. ಎಷ್ಟು ದಿನ ಸರ್ಕಾರ ಇರುತ್ತೆ ಅಂತ ನೋಡೋಣ. ಸುಧಾರಿಸಿಕೊಂಡು ಕೆಲಸ ಮಾಡಲಿ ಅಂತ ಬಿಟ್ಟಿದ್ದೇನೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮತ್ತೊಂದೆಡೆ, ಮುಖ್ಯಮಂತ್ರಿಗಳ ಸ್ಥಾನದಲ್ಲಿ ಯಾವ ರೀತಿ ನಡೆದುಕೊಳ್ಳಬಹುದು, ಮತ್ತೊಂದು ಮಗದೊಂದು ಎನ್ನುವುದನ್ನು ಕುಮಾರಸ್ವಾಮಿ ಅವರಿಂದ ಸಿದ್ದರಾಮಯ್ಯ ಕಲಿಯುವ ಅವಶ್ಯಕತೆ ಇಲ್ಲ ಎಂದು ಕೋಲಾರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್ ಹೇಳಿದ್ದಾರೆ. ಕೋಲಾರದಲ್ಲಿಂದು ಕುಮಾರಸ್ವಾಮಿ ಅವರ ವರ್ಗಾವಣೆ ದಂಧೆ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಹಿರಿಯರು, ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದವರು. ಮುಖ್ಯಮಂತ್ರಿ ಸ್ಥಾನದಲ್ಲಿ ಯಾವ ರೀತಿ ನಡೆದುಕೊಳ್ಳಬಹುದು ಎಂಬುದನ್ನ ಕುಮಾರಸ್ವಾಮಿ ಅವರಿಂದ ಸಿದ್ದರಾಮಯ್ಯ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಅಲ್ಲದೆ ಶೇ 40ರಷ್ಟು ಕಮಿಷನ್ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕುರಿತು ಟೀಕೆ ಮಾಡಿರುವ ನಾವು ಬಹಳ ಜವಾಬ್ದಾರಿಯಿಂದ ಸರ್ಕಾರ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಅವರು ಹೇಳಿದ ರೀತಿಯಲ್ಲಿ ವ್ಯವಸ್ಥೆ ಇಲ್ಲ. ಬಹುಶಃ ಅವರು ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕರ್ನಾಟಕದ ಅಜಿತ್ ಪವಾರ್ ಕಾಯುತ್ತಿದ್ದಾನೆ, 3 ತಿಂಗಳಲ್ಲೇ ಸಿದ್ದು ಸರ್ಕಾರ ಪತನ: ಈಶ್ವರಪ್ಪ

ABOUT THE AUTHOR

...view details