ಕರ್ನಾಟಕ

karnataka

ನೀರಿನ ಸಂಪ್‌ ಸ್ವಚ್ಛಗೊಳಿಸುವಾಗ ದುರಂತ.. ಬೆಂಗಳೂರಲ್ಲಿ ತಂದೆ-ಮಗ ದಾರುಣ ಸಾವು

By

Published : Jan 19, 2022, 4:14 PM IST

Updated : Jan 19, 2022, 11:35 PM IST

ನೀರಿನ ಸಂಪ್ ಸ್ವಚ್ಛಗೊಳಿಸುವಾಗ ವಿದ್ಯುತ್ ಪ್ರವಹಿಸಿ ತಂದೆ-ಮಗ ಸಾವನ್ನಪ್ಪಿರುವ ದುರಂತ ಬೆಂಗಳೂರಿನಲ್ಲಿ ನಡೆದಿದೆ.

father-and-son-died-by-power-shock-in-bengaluru-apartment
ತಂದೆ-ಮಗ ಸ್ಥಳದಲ್ಲೇ ಸಾವು

ಬೆಂಗಳೂರು: ಈತ ಏರಿಯಾದ ಚಿರಪರಿಚಿತ ವ್ಯಕ್ತಿ, ಅಪಾರ್ಟ್‌ಮೆಂಟ್ ವೊಂದರಲ್ಲಿ ಸೆಕ್ಯೂರಿಟಿ ಆಗಿದ್ದ ಇವನು ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ. ಇವತ್ತು ಬೆಳಗ್ಗೆ ಎದ್ದವನೇ ಅಪಾರ್ಟ್‌ಮೆಂಟ್ ಸಂಪ್ ಕ್ಲೀನಿಂಗ್​​​ಗೆ ಅಂತ ಇಳಿದಿದ್ದ. ಆದ್ರೆ, ಈ ವೇಳೆ ನಡೆದ ಅದೊಂದು ಎಡವಟ್ಟಿಗೆ ಆತನ ಜೊತೆ ಇನ್ನೂ ಸಹ ಸರಿಯಾಗಿ ಪ್ರಪಂಚ ಕಾಣದ ಮಗನು ಇಹಲೋಕ ತ್ಯಜಿಸಿದ್ದಾನೆ.

ಮೂಲತಃ ತಮಿಳುನಾಡಿನವನಾದ ರಾಜು 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಪೊಷಕರು ನಿಶ್ಚಯಿಸಿದಂತೆ ಮದುವೆ ಕೂಡ ಆಗಿದ್ದ. ಇದಾದ ನಂತರ ಜೀವನಕ್ಕೆ ಸುಲ್ತಾನ್ ಪಾಳ್ಯದ ರಾಮಕೃಷ್ಣ ಅಪಾರ್ಟ್‌ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದ. ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತಿದ್ದ ರಾಜು, ಇವತ್ತು ಅಚಾನಕ್ ಆಗಿ ಸಂಪ್ ನಲ್ಲಿ ಶವವಾಗಿ ಕಂಡು ಬಂದಿದ್ದಾನೆ. ಅಷ್ಟೇ ಅಲ್ಲ ಆತನ ಜೊತೆ 11 ವರ್ಷದ ಮಗನೂ ಸಾವಿಗೀಡಾಗಿದ್ದಾನೆ.

ನೀರಿನ ಸಂಪ್‌ ಸ್ವಚ್ಛಗೊಳಿಸುವಾಗ ದುರಂತ

ಏನಿದು ಘಟನೆ?

ಅಸಲಿಗೆ ರಾಮಕೃಷ್ಣ ಅಪಾರ್ಟ್‌ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವ ರಾಜು, ಅಲ್ಲೇ ಪುಟ್ಟ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದ. ಇಂದು ಬೆಳಗ್ಗೆ ರಾಜು ಪತ್ನಿ ಎದ್ದು ಹೊರಗೆ ಹೊಗಿದ್ದಾಳೆ. ಈ ವೇಳೆ ಅಪಾರ್ಟ್‌ಮೆಂಟ್ ನ ಸಂಪ್ ಕ್ಲೀನ್ ಮಾಡುವುದಕ್ಕೆ ಎಂದು ರಾಜು ಸಹ ತೆರಳಿದ್ದಾನೆ. ಇನ್ನು ಆತನ ಹಿಂದೆ 11 ವರ್ಷದ ಮಗ ಸಾಯಿನಾಥ್ ನಡೆದು ಬಂದಿದ್ದಾನೆ. ದುರಂತ ಎಂದರೆ ಸಂಪ್​ ತೆರೆದು ಒಳಗೆ ಹೋದ ತಕ್ಷಣವೇ ಆತನಿಗೆ ವಿದ್ಯುತ್​ ಪ್ರವಹಿಸಿ ಸಾವಿಗೀಡಾಗಿದ್ದಾನೆ.

ತಂದೆಯ ಸ್ಥಿತಿ ಕಂಡು ಮಗ ಹತ್ತಿರ ಹೋದಾಗ ಆತನಿಗೂ ವಿದ್ಯುತ್ ಹರಿದಿದ್ದು, ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದಾರೆ. ಅಪಾರ್ಟ್‌ಮೆಂಟ್ ನಲ್ಲಿ ಎಲೆಕ್ಟ್ರಿಕಲ್ ನ ಅಗತ್ಯ ಕ್ರಮಗಳಿಲ್ಲ ಜೊತೆಗೆ ಯಾವುದೇ ಮೆಂಟೇನೆನ್ಸ್​ ಸಹ ಇಲ್ಲ. ಈ ಕಾರಣಕ್ಕೆ ರಾಜು ಸಾವಿಗೀಡಾಗಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ರಾಜು ಸಂಪ್ ಗೆ ಇಳಿದಾಗ ಯಾರೋ ಸ್ವಿಚ್ ಆನ್ ಮಾಡಿದ್ದಾರೆ. ಹೀಗಾಗಿಯೇ ವಿದ್ಯುತ್ ಹರಿದು ಆತ ಮೃತ ಪಟ್ಟಿದ್ದಾನೆಂದು ಆರೋಪಿಸಿ ಆರ್ ಟಿ ನಗರ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ರಾಜಕೀಯ ವೈಷಮ್ಯ; ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಹತ್ಯೆಗೆ ಯತ್ನ..!

Last Updated :Jan 19, 2022, 11:35 PM IST

ABOUT THE AUTHOR

...view details